ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಜ.1ರಂದು ಕಂಪ್ಲಿ ಹಜರತ್ ಬಡೇಸಾಹೇಬ್ ಉರುಸ್ : ಸರ್ವ ಧರ್ಮದವರು ಭಾಗವಹಿಸಲು ಕರೆ

ಕಂಪ್ಲಿ: ಪಟ್ಟಣದ ಗಂಗಾವತಿ ರಸ್ತೆಯಲ್ಲಿರುವ ಹಜರತ್ ಬಡೇ ಸಾಹೇಬ್ ದರ್ಗಾದಲ್ಲಿ ಮೂರು ದಿನ ನಡೆಯುವ 238ನೇ ಗಂಧ ಮತ್ತು ಉರುಸ್ ಹಿನ್ನಲೆ ಧರ್ಮಗುರುಗಳಾದ ಸೈಯದ್ ಷಾ ಅಬುಲ್ ಹಸನ್ ಖಾದ್ರಿ, ಸೈಯದ್ ಷಾ ಅಬ್ದುಲ್ ಖಾದರ್ ಖಾದ್ರಿ, ಸೈಯದ್ ಷಾ ಮೆಹಮೂದ್ ಖಾದ್ರಿ, ಸೈಯದ್ ಷಾ ಹುಸೇನ್ ಪೀರ ಖಾದ್ರಿ, ಸೈಯದ್ ಷಾ ಗೇಸುದರಾಜ್ ಖಾದ್ರಿ, ಸೈಯದ್ ಅಬ್ದುಲ್ ಖಾದರ್ ಖಾದ್ರಿ, ಸೈಯದ್ ಷಾ ಅಬುತುರಾಬ್ ಖಾದ್ರಿ, ಸೈಯದ್ ಶಮ್ ಸುದ್ದೀನ್ ಖಾದ್ರಿ ಇವರ ದಿವ್ಯ ಸಾನಿಧ್ಯದಲ್ಲಿ ಕ್ಯಾಲೆಂಡರ್ ಮತ್ತು ಉರುಸ್ ಬಿತ್ತಿ ಪತ್ರಗಳನ್ನು ಶುಕ್ರವಾರ ಬಿಡುಗಡೆ ಮಾಡಿದರು.
ನಂತರ ಧರ್ಮಗುರು ಸೈಯದ್ ಷಾ ಅಬುಲ್ ಹಸನ್ ಖಾದ್ರಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವು ಮೂರು ದಿನಗಳ ಕಾಲ ಹಜರತ್ ಬಡೇಸಾಬ್ ದರ್ಗಾದಲ್ಲಿ ಗಂಧ, ಉರುಸ್, ಜಿಯಾರತ್ ಮತ್ತು ಪಲ್ಲಕ್ಕಿ ಉತ್ಸವ ನಡೆಯಲಿದೆ. ಇದೇ ಡಿಸೆಂಬರ್ 31ರಂದು ಗಂಧ, 2026ರ ಜನವರಿ 1ರಂದು ಉರುಸ್ ಹಾಗೂ 2ರಂದು ಜಿಯಾರತ್ ಮತ್ತು ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ನೆರವೇರಲಿದೆ. ಆದ್ದರಿಂದ ಸರ್ವ ಧರ್ಮಿಯರು ಆಗಮಿಸಿ, ಉರುಸ್ ನಲ್ಲಿ ಭಾಗವಹಿಸಿ, ಯಶಸ್ವಿಗೊಳಿಸಬೇಕು. ಭಕ್ತರಿಗಾಗಿ ಅನ್ನಸಂತಾರ್ಪಣೆ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಹಾಜಿ ಕರೀಂಸಾಬ್, ಕೆ.ಮೆಹಬೂಬ್, ಯು.ಜಿಲಾನ್, ಯು.ಜಹಿರುದ್ಧೀನ್, ಬಡಿಗೇರ ಅಜೀಜ್ ಸಾಬ್, ಮುದುಗಲ್ ರೋಷನ್, ಗೆಜ್ಜಳ್ಳಿ ಭಾಷಾ, ಬಿ.ಜಿಲಾನಸಾಬ್, ಹೊನ್ನೂರವಲಿ ಸೇರಿದಂತೆ ಮುಸ್ಲಿಂ ಬಾಂಧವರು ಇದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!