ಕೊರಟಗೆರೆ : ತುಮಕೂರಿನಲ್ಲಿ ಚಕ್ರವರ್ತಿ ತಂಡ ಮತ್ತು ಪುನೀತ್ ರಾಜ್ ಅಭಿಮಾನಿ ಬಳಗದಿಂದ ಸರ್ಕಾರಿ ಮೈದಾನದಲ್ಲಿ ಜನುಮದಿನೋತ್ಸವದ ಆಚರಣೆಯನ್ನು ಸಂಭ್ರಮಿಸಿ ನಂತರ ಅಭಿಮಾನಿಗಳ ಆಸೆಯಂತೆ ಕೊರಟಗೆರೆ ಬಂದು ಇತಿಹಾಸ ಪ್ರಸಿದ್ಧ ಕಟ್ಟೆಗಣಪತಿಗೆ ಪೂಜೆ ಸಲ್ಲಿಸಿ ಕೃಪಾಶೀರ್ವಾದ ಪಡೆದರು. 2028ಕ್ಕೆ ಮೀಸಲಾತಿ ತೆರವಾಗಿ ಸಾಮಾನ್ಯ ಕ್ಷೆeತ್ರವಾದರೆ ನಾನು ಸ್ಪರ್ಧೆ ಮಾಡುವುದು ಖಚಿತ ಎಂದರು. ಇದೇ ಸಂದರ್ಭದಲ್ಲಿ ಅವರ ಮನದಾಳದ ಮಾತಾದ ನಾನು ಶಾಸಕನಾಗಿ ನಿಮ್ಮ ಸೇವೆ ಮಾಡಬೇಕು. ಕೊರಟಗೆರೆಯ ಕೋಳಾಲದ ಜಿಲ್ಲಾ ಪಂಚಾಯತ್ ಸದಸ್ಯನಾಗಿ ಹಲವು ಕೆಲಸಗಳನ್ನು ಮಾಡಿದ್ದೇನೆ ಜನತೆಗೆ ನಾನು ಚಿರಪರಿಚಿತ. ನಾನು ನಿಮ್ಮವ ನಿಮ್ಮ ಬಂಧು ಬಳಗ. ನಿಮ್ಮ ಕುಂದುಕೊರತೆ, ಕಷ್ಟಗಳನ್ನು ಕಳೆಯುವುದು, ತಾಲೂಕು ಬರುವ ಅನುದಾನಗಳನ್ನು ತಂದು ಎಲ್ಲಾ ಗ್ರಾಮಗಳು, ತಾಲೂಕು ಅಭಿರುದ್ಧಿಗಾಗಿ ಕೆಲಸ ಮಾಡುತ್ತೇನೆ ಎಂದರು. ಅವರ ಜನ್ಮ ದಿನದ ಪ್ರಯುಕ್ತ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಹಣ್ಣು ಹಂಪಲು ಬ್ರೆಡ್ ನೀಡಿದರು. ಪಟ್ಟಣ ಪಂಚಾಯತಿ ಮುಂಭಾಗ ಕೇಕ್ ಕತ್ತರಿಸಿ ಪೌರಕಾರ್ಮಿಕರಿಗೆ ಜರ್ಕಿನ್ ವಿತರಣೆ ಮಾಡಿದರು. ಪಿ. ಎನ್. ಕೆ ಅಭಿಮಾನಿಗಳ ಬಳಗದ ವತಿಯಿಂದ ಕೋಳಾಲದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಕೊರಟಗೆರೆಯ ಗ್ರಾಮಸ್ಥರು ಸದಸ್ಯರು ಪತ್ರಕರ್ತರು ಪಿ ಎನ್ ಕೆ ಅಭಿಮಾನಿಗಳು ಸೇರಿದಂತೆ ಸಾವಿರಾರು ಜನರು ಭಾಗವಹಿಸಿದ್ದರು.
ವರದಿ :ಪ್ರಸನ್ನಕುಮಾರ್. ಎಸ್ ,
ಕೊರಟಗೆರೆ



















