
ಮಂಗಳೂರು, ಡಿಸೆಂಬರ್ 27:
ಅವಿಭಜಿತ ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳಲ್ಲಿ ಶತಮಾನಗಳಿಂದ ಕೃಷಿಕರು ಮಳೆಗಾಲದಲ್ಲಿ ವ್ಯವಸಾಯಕ್ಕಾಗಿ ಹೊಲ ಊಳಲು ಬಳಸುವ ಕೋಣಗಳನ್ನು, ವ್ಯವಸಾಯದ ಕೆಲಸ ಮುಗಿದ ಬಳಿಕ ಕೋಣಗಳ ಓಟದ ಸ್ಪರ್ಧೆ ಆಯೋಜಿಸುವ ಕ್ರೀಡೆಯೇ ಕಂಬಳ. ಈ ಕಂಬಳ ಸ್ಪರ್ಧೆ ಪ್ರತಿ ವರ್ಷ ಚಳಿಗಾಲ ಮತ್ತು ಬೇಸಿಗೆ ಕಾಲ ಪೂರ್ತಿ ನಿಗಧಿತ ದಿನಾಂಕಗಳಲ್ಲಿ ಜಿಲ್ಲೆಯ ವಿವಿಧ ಐತಿಹಾಸಿಕ ಸ್ಥಳಗಳಲ್ಲಿ ಅದ್ದೂರಿಯಾಗಿ ಏರ್ಪಡಿಸಲಾಗುತ್ತದೆ.
ಕಂಬಳ ಆಯೋಜಿಸಲು ವಿವಿಧ ಸಂಘಟನೆಗಳು ಕೂಡಾ ಅಸ್ತಿತ್ವದಲ್ಲಿವೆ.
ಕಂಬಳ ಸ್ಪರ್ಧೆಯಲ್ಲಿ ಕೋಣಕ್ಕೆ ‘ಬಡು’ ಎಂಬ ದಪ್ಪದ ಕೋಲಿನಲ್ಲಿ ತೀಕ್ಷ್ಣವಾಗಿ ಹೊಡೆದು ಓಡಿಸಲಾಗುತ್ತದೆ. ಈ ಹೊಡೆತದಿಂದ ಕೋಣಗಳಿಗೆ ಅತೀವ ನೋವು, ಗಾಯ ಆಗುತ್ತದೆಂದು ಪ್ರಾಣಿ ದಯಾ ಸಂಘಟನೆಗಳು ಕೋರ್ಟ್ ಮೆಟ್ಟಲೇರಿ ತಡೆ ತರಲಾಗಿತ್ತು. ಆ ತಡೆಯನ್ನು ಕಂಬಳ ಸಂಘಟನೆಗಳು ಕೋರ್ಟ್ ನಲ್ಲಿ ಹೋರಾಡಿ 2023ರಲ್ಲಿ ಮಾನ್ಯ ಸುಪ್ರೀಂ ಕೋರ್ಟ್ ತಡೆಯನ್ನು ತೆರವುಗೊಳಿಸಿದ ಪರಿಣಾಮವಾಗಿ ಈಗ ಕರಾವಳಿ ಭಾಗದಲ್ಲಿ ಅದ್ದೂರಿಯಾಗಿ ಕಂಬಳ ಆಯೋಜಿಸಲಾಗುತ್ತಿದೆ.
ಕಂಬಳದ ಕೋಣಗಳು ಲಕ್ಷ ಮೇಲ್ಪಟ್ಟು ಬೆಲೆ ಬಾಳುವುದ್ದಾಗಿವೆ, ಕೋಣಗಳ ಆಹಾರ ಮತ್ತು ಆರೖಕೆಯೂ ತುಂಬಾ ದುಬಾರಿಯಾಗಿದೆ, ಕೋಣಗಳ ಕೊಠಡಿಗಳು ಹವಾ ನಿಯಂತ್ರಿತ ಆಗಿರುತ್ತವೆ, ಕೋಣಗಳ ಆರೈಕೆಗೆ ಆಳುಗಳನ್ನು ನೇಮಿಸಲಾಗುತ್ತದೆ, ಆ ಆಳುಗಳಿಗೂ ತಿಂಗಳ ಸಂಬಳ, ಊಟ, ಉಳಿದುಕೊಳ್ಳಲು ಕೊಠಡಿಯ ವ್ಯವಸ್ಥೆಯನ್ನು ಯಜಮಾನ ಮಾಡಿ ಕೊಡಬೇಕು.
ಕಂಬಳ ಸ್ಪರ್ಧೆಯಲ್ಲಿ ಗೆದ್ದ ಕೋಣಗಳ ಮಾಲೀಕರಿಗೆ ಬಹುಮಾನ ರೂಪದಲ್ಲಿ ಪವನ್ ಪ್ರಮಾಣದಲ್ಲಿ ಚಿನ್ನ, ದೊಡ್ಡ ಮೊತ್ತದಲ್ಲಿ ಹಣವನ್ನು ಬಹುಮಾನವಾಗಿ ಕೊಡಲಾಗುತ್ತದೆ.
ಕಂಬಳ ಸ್ಪರ್ಧೆಯನ್ನು ಹಗಲು ಮತ್ತು ರಾತ್ರಿಯಿಂದ ಹಗಲವರೆಗೆ ಆಯೋಜಿಸಲಾಗುತ್ತದೆ.
ಪ್ರತಿಷ್ಠಿತ ಮಂಗಳೂರು ಕಂಬಳವನ್ನು ಒಂಬತ್ತು ವರ್ಷಗಳ ಹಿಂದೆ ಕ್ಯಾಪ್ಟನ್ ಬ್ರಿಜೇಶ್ ಚೌಟರವರು ಆರಂಭಿಸಿದ್ದರು. ವರ್ಷ ಕಳೆದಂತೆ ಮಂಗಳೂರು ಕಂಬಳದ ಆಕರ್ಷಣೆ ಜಾಸ್ತಿ ಆಗುತ್ತಿದೆ.
ಕಂಬಳಕ್ಕೆ ರಾಷ್ಟ್ರೀಯ ಮಾನ್ಯತೆ ಪಡೆಯಲು ಹೋರಾಡಲಾಗುತ್ತಿದೆ.
ಕಂಬಳ ಸ್ಪರ್ಧೆಗಳನ್ನು ಟಿ -ಟ್ವೆಂಟಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಯೋಜನೆ ಇದೆ.
ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರ ಸಾರಥ್ಯದಲ್ಲಿ ಜರುಗುತ್ತಿರುವ ಮಂಗಳೂರು ಕಂಬಳಕ್ಕೆ ಗಣ್ಯಾತಿ ಗಣ್ಯರು ಪಕ್ಷ, ಧರ್ಮ ಭೇದವಿಲ್ಲದೆ ಕಂಬಳದ ವೇದಿಕೆಗೆ ಬಂದು ಕ್ಯಾಪ್ಟನ್ ಬ್ರಿಜೇಶ್ ಚೌಟರಿಗೆ ಶುಭ ಹಾರೖಸಿ, ಕಂಬಳ ವೀಕ್ಷಿಸಿ ಹೋಗುತ್ತಿದ್ದಾರೆ.
ಗೋಲ್ಡ್ ಪಿಂಚ್ ನ ವಿಶಾಲ ಮೖದಾನದಲ್ಲಿ ಸಾವಿರಾರು ಕಾರು, ದ್ವಿ ಚಕ್ರ ವಾಹನಗಳು, ಲಕ್ಷಾಂತರ ಕಂಬಳ ವೀಕ್ಷಕರು, ನೂರಾರು ಕೋಣಗಳು ಮಂಗಳೂರು ಕಂಬಳದ ಆಕರ್ಷಣೆಯಾಗಿತ್ತು.
ವರದಿ : ಚಂದ್ರಶೇಖರ ಹೆಬ್ಬಾರ್ ಕೊಲ್ಯ



















