ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕೋಡ್ಲಿ ಶ್ರೀ ಬನಶಂಕರಿ ದೇವಿ ಜಾತ್ರಾ ಮಹೋತ್ಸವ

ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದ ಶ್ರೀ ಆದಿಶಕ್ತಿ ಶ್ರೀ ಬನಶಂಕರಿ ದೇವಿ ಜಾತ್ರೆಯು ದಿ. 29.12.2025 ಸೋಮವಾರ ಸಾಯಂಕಾಲ 7:00ಗೆ ಗಂಗಾ ಸ್ನಾನ ದೊಂದಿಗೆ ಆರಂಭಗೊಂಡು ದಿ. 1-01-2026 ರವರಿಗೆ ಪ್ರತಿನಿತ್ಯ ರಾತ್ರಿ 07 ಗಂಟೆಯಿಂದ 10 ಗಂಟೆಯವರೆಗೆ ಊರಿನ ಒಂದೊಂದು ಓಣಿಗೆ ಪಲ್ಲಕ್ಕಿ ಮೆರವಣಿಗೆ ನಡೆಯುತ್ತದೆ. ದಿ. 02-01-2026 ಶುಕ್ರವಾರರಂದು ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 6:00 ವರೆಗೆ ಪುರವಂತರ ಸೇವೆಯ ಜೊತೆಗೆ ಭಜನೆ, ಕೋಲಾಟ,ಡೊಳ್ಳು, ಬ್ಯಾಂಡು, ಬಾಜಿಯೊಂದಿಗೆ ಊರಿನ ಎಲ್ಲಾ ಓಣಿಗಳಲ್ಲಿ ಪೂಜ್ಯಶ್ರೀ ಬಸವಲಿಂಗ ಶಿವಾಚಾರ್ಯರು ಹಿರೇಮಠ ಕೋಡ್ಲಿ ಇವರ ನೇತೃತ್ವದಲ್ಲಿ ಹಾಗೂ ವೇದಮೂರ್ತಿ ಶಂಕ್ರಯ್ಯ ಸ್ವಾಮಿ ಯಲ್ಮಡಗಿ ಇವರ ಸಮ್ಮುಖದಲ್ಲಿ ಶ್ರೀ ಬನಶಂಕರಿ ದೇವಿಯ ವಿಶೇಷ ಪಲ್ಲಕ್ಕಿ ಮೆರವಣಿಗೆ ಜರುಗುವುದು. ದಿ. 03-01-2026 ಶನಿವಾರ ರಂದು ಮಧ್ಯಾಹ್ನ 3 ಗಂಟೆಗೆ ಐದು ಮನೆಗಳಿಂದ ಶ್ರೀ ಬನಶಂಕರಿ ದೇವಿಗೆ ಕುಂಭ ಮತ್ತು ತನಾರ್ತಿ ಸಮರ್ಪಣೆ ಮಾಡಿದ ನಂತರ ಊರಿನ ಪ್ರಮುಖರಾದ ಶ್ರೀ ರಾಮಲಿಂಗ ರೆಡ್ಡಿ ಬಿ ದೇಶಮುಖರ ಮನೆಯಿಂದ ದೇವಿಯ ರಥದ ಕಳಸವನ್ನು ಪರುವಂತರ ರೊಡಗೂಡಿ ಪಲ್ಲಕ್ಕಿ ಮೆರವಣಿಗೆಯೊಂದಿಗೆ ತರುವುದರ ಜೊತೆಗೆ ಶ್ರೀ ಭೀಮರಾವ್ ಎನ್ ಪಾಟೀಲ್ ಮನೆಯಿಂದ ದೇವಿಯ ಉತ್ಸವದ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ವಿರಾಜಮಾನಗೊಳಿಸಿಕೊಂಡು ದೇವಸ್ಥಾನಕ್ಕೆ ಆಗಮಿಸಿದ ನಂತರ ಸಾಯಂಕಾಲ 6 ಗಂಟೆಗೆ ವೈಭವದ ರಥೋತ್ಸವ ಕಾರ್ಯಕ್ರಮ ಜರುಗುವುದು.
ದಿ. 04-01-2026 ರಂದು 6:00 ಗಂಟೆಗೆ ಹಾಸ್ಯ ಕಲಾವಿದರು ಶ್ರೀ ರಾಚಯ್ಯ ಸ್ವಾಮಿ ಹಿರೇಮಠ, ಶ್ರೀ ತುಕಾರಾಂ ನಾಗೋರೆ ಇವರಿಂದ ಕಾರ್ಯಕ್ರಮ ಜರುಗುವುದು
ದಿ. 06-01-2026 ರಂದು 6:00 ಗಂಟೆಗೆ ಕು. ಸಂಜನಾ ದಯಾನಂದ್ ಹೂಲಸಗೂಡ ಇವರಿಂದ ಭರತನಾಟ್ಯ ಕಾರ್ಯಕ್ರಮ ಜರುಗುವುದು.
ದಿ. 06-01-2026 ಮಂಗಳವಾರ ರಂದು 6:30 ಕ್ಕೆ ಸಹಸ್ರ ದೀಪೋತ್ಸವ ಕಾರ್ಯಕ್ರಮಕ್ಕೆ ಶ್ರೀ ಷ. ಬ್ರ. ಬಸವಲಿಂಗ ಶಿವಾಚಾರ್ಯರು ಹಿರೇಮಠ ಕೋಡ್ಲಿ, ಹಾಗೂ ಶ್ರೀ ಷ. ಬ್ರ ಚಂದ್ರಗುಂಡ ಶಿವಾಚಾರ್ಯರು ಸಂಸ್ಥಾನ ಮಠ ಹೊನ್ನಕಿರಣಗಿ ಮತ್ತು ಶ್ರೀ ಡಾ. ಸಿದ್ಧ ತೋಟೆಂದ್ರ ಶಿವಾಚಾರ್ಯರು ಮಹಾಸ್ವಾಮಿಗಳು, ಶ್ರೀ ಕೋರಿಸಿದ್ದೇಶ್ವರ ಮಹಾ ಸಂಸ್ಥಾನ ಮಠ ನಾಲವಾರ್, ಶ್ರೀ ಷ. ಬ್ರ. ಅಭಿನವ ಪರುತೇಶ್ವರ ಶಿವಾಚಾರ್ಯರು ಸಂಸಾನ ಮಠ ಬ್ರಹನ್ನರ ಬೆಳಗುಂಪಾ, ಪೂಜ್ಯ ಶ್ರೀ ನೀಲಕಂಠ ದೇವರು ವಿರಕ್ತಮಠ ( ದೊಡ್ಡ ಮಠ) ರಟಕಲ್, ವೇದಮೂರ್ತಿ ಶಂಕ್ರಯ್ಯ ಸ್ವಾಮಿ ಯಲ್ಮಡಗಿ, ಮತ್ತು ಹರಾ ಗುರು ಚರಮೂರ್ತಿಗಳ ದಿವ್ಯ ಸಾನಿಧ್ಯದಲ್ಲಿ ಸಹಸ್ರದೀಪೋತ್ಸವ ಕಾರ್ಯಕ್ರಮ ಜರುಗುವುದು. ಈ ಕಾರ್ಯಕ್ರಮದಲ್ಲಿ ರಾಜಕೀಯ ಗಣ್ಯ ಮಾನ್ಯರು ಸಹ ಭಾಗವಹಿಸುವರು.

ಸರ್ವರಿಗೂ ಸ್ವಾಗತ ಕೋರುವವರು : ಶ್ರೀ ಬನಶಂಕರಿ ದೇವಿ ಸದ್ಭಕ್ತ ಮಂಡಳಿ ಹಾಗೂ ಶ್ರೀ ಬನಶಂಕರಿ ದೇವಿ ದೇವಾಂಗ ಜೀರ್ಣೋದ್ಧಾರ ಟ್ರಸ್ಟ್ (ರಿ.) ಕೋಡ್ಲಿ.

ವರದಿ ಚಂದ್ರಶೇಖರ ಆರ್ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!