ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ದಿನಾಚರಣೆಗೆ ಅನುದಾನ ನೀಡುವಂತೆ ವಿಶ್ವಕರ್ಮ ಸಮಾಜ ಆಗ್ರಹ

ಕಂಪ್ಲಿ: ಪಟ್ಟಣದ ತಹಶೀಲ್ದಾರ್ ಕಛೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ವಿಶ್ವಕರ್ಮ ಸಮಾಜದ ಸಹಯೋಗದಲ್ಲಿ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಕರಣಾ ದಿನಾಚರಣೆ ಗುರುವಾರ ಆಚರಿಸಿದರು.
ನಂತರ ತಹಶೀಲ್ದಾರ್ ಜೂಗಲ್ ಮಂಜುನಾಯಕ ಮಾತನಾಡಿ, ನಾಡಿಗೆ ಅಮರಶಿಲ್ಪಿ ಜಕಣಾಚಾರಿ ಅವರ ಕೊಡುಗೆ ಅಪಾರವಾಗಿದೆ. ಅವರ ಆದರ್ಶ, ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಉತ್ತಮ ಬದುಕು ಕೊಟ್ಟಿಕೊಳ್ಳಬೇಕು ಎಂದರು.
ರಾಜ್ಯ ವಿಶ್ವಕರ್ಮ ಸಮಾಜದ ಸಹ – ಕಾರ್ಯದರ್ಶಿ ಡಿ.ಮೌನೇಶ ಮಾತನಾಡಿ, ಪ್ರತಿ ವರ್ಷ ಜಕಣಾಚಾರಿ ಸಂಸ್ಕರಣಾ ದಿನಾಚರಣೆ ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ, ತಾಲೂಕು ಆಡಳಿತದಿಂದ ಇಲ್ಲಿವರೆಗೂ ಯಾವುದೇ ಸಹಾಯಧನ ಬಂದಿಲ್ಲ. ಇಲ್ಲಿನ ಜಕಣಾಚಾರಿ ದಿನಾಚರಣೆಯಲ್ಲಿ ಶಿಲ್ಪಿಗಳಿಗೆ ಸನ್ಮಾನಿಸುವ ಸೋಜಿಗೆ ತಾಲೂಕು ಆಡಳಿತ ಹೋಗದೇ ಇರುವುದು ಅಸಮಾಧಾನವಾಗಿದೆ. ದಿನಾಚರಣೆಗಳನ್ನು ತಾಲೂಕು ಆಡಳಿತವು ಬೇಕಾಬಿಟ್ಟಿಯಲ್ಲಿ ಆಚರಣೆ ಮಾಡುತ್ತಿದೆ. ಒತ್ತಡದಲ್ಲಿ ದಿನಾಚರಣೆ ಮಾಡಿದಂತಾಗಿತ್ತು. ಇದರಿಂದ ವಿಶ್ವಕರ್ಮ ಸಮಾಜಕ್ಕೆ ಬೇಸರ ತರಿಸಿದೆ. ದಿನಾಚರಣೆಗೆ ಅನುದಾನ ನೀಡುವಂತೆ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಆಗ್ರಹಿಸಿದೆ. ಸಮಾಜದಿಂದ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದೆ. ಮುಂದಿನ ದಿನದಲ್ಲಿ ರಾಜ್ಯ ಮಟ್ಟದ ವಿಶ್ವಕರ್ಮ ಸಭೆಯಲ್ಲಿ ಇದರ ಬಗ್ಗೆ ಚರ್ಚಿಸಲಾಗುವುದು ಎಂದರು.
ಇಲ್ಲಿನ ವಿಶ್ವಕರ್ಮ ಸಮಾಜದಿಂದ ಪಟ್ಟಣದ ಕಾಳಿಕಾ ಕಮಠೇಶ್ವರ ದೇವಸ್ಥಾನದಲ್ಲಿ ದಿನಾಚರಣೆ ಅಂಗವಾಗಿ ವಿಶೇಷ ಪೂಜಾ, ಪುನಸ್ಕಾರ ಸಲ್ಲಿಸಿದರು. ತನಂತರ ಇಲ್ಲಿನ ಅಮರಶಿಲ್ಪಿ ಜಕಣಾಚಾರಿ ವೃತ್ತದ ನಾಮಫಲಕಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ದಿನಾಚರಣೆ ಆಚರಿಸಿದರು. ವಿಶ್ವಕರ್ಮ ಸಮಾಜದಿಂದ ಶಿಲ್ಪಿ ವಿಶ್ವನಾಥ ಇವರಿಗೆ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಶಿರಸ್ತೇದಾರ ರಮೇಶ, ವಿಶ್ವಕರ್ಮ ಸಮಾಜದ ಅಧ್ಯಕ್ಷ ಡಿ.ಎ.ರುದ್ರಪ್ಪ ಆಚಾರಿ, ಉಪಾಧ್ಯಕ್ಷರಾದ ಡಿ.ಕಾಳಾಚಾರಿ, ಎ.ಚಂದ್ರಶೇಖರ, ಖಜಾಂಚಿ ರಾಮಚಂದ್ರ, ಮಹಿಳಾ ಮಂಡಳಿ ಅಧ್ಯಕ್ಷೆ ಡಿ.ವೀಣಾ, ಕಾರ್ಯದರ್ಶಿ ಸವಿತಾ, ಮುಖಂಡರಾದ ಎ.ರಾಘವೇಂದ್ರ, ಎ.ಮೌನೇಶ, ನಾರಾಯಣಿ, ವೀರಭದ್ರ, ವಿಜಯಕುಮಾರ, ಆನಂದ, ವಿಜಯ, ರತ್ನಮ್ಮ, ಜ್ಯೋತಿ, ವಾಣಿ ಸೇರಿದಂತೆ ಸಮಾಜದವರು ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಇದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!