ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಂಭ್ರಮ ಸಡಗರದಿಂದ ಕೋಡ್ಲಿ ಗ್ರಾಮದ ಶ್ರೀ ಬನಶಂಕರಿ ದೇವಿಯ ರಥೋತ್ಸವ

ಕಲ್ಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದ ಬೇಡಿದ ವರವನ್ನು ಕೊಡುವ, ಚೌಡೇಶ್ವರಿ, ಶಾಖಾಂಬರಿ, ಬನಶಂಕರಿ, ಹೀಗೆ ವಿವಿಧ ಹೆಸರುಗಳಿಂದ ಕರೆಸಿಕೊಳ್ಳುವ ಶ್ರೀ ಬನಶಂಕರಿ ದೇವಿಯ ರಥೋತ್ಸವವು ಜನ ಸಾಗರದ ಮಧ್ಯೆ ಅದ್ದೂರಿಯಾಗಿ ಜರುಗಿತು.
ವಿಶೇಷವಾಗಿ ಬೆಳಗಿನ ಜಾವ ಶ್ರೀ ಬನಶಂಕರಿ ದೇವಿಗೆ ಅಭಿಷೇಕ ಮಾಡಲಾಯಿತು.


ದಿ. 03-01-2026 ಶನಿವಾರ ರಂದು ಮಧ್ಯಾಹ್ನ 3 ಗಂಟೆಗೆ ಐದು ಮನೆಗಳಿಂದ ಶ್ರೀ ಬನಶಂಕರಿ ದೇವಿಗೆ ಕುಂಭ ಮತ್ತು ತನಾರ್ತಿ ಸಮರ್ಪಣೆ ಮಾಡಲಾಯಿತು. ನಂತರ ಊರಿನ ಪ್ರಮುಖರಾದ ಶ್ರೀ ರಾಮಲಿಂಗಾರೆಡ್ಡಿ ಬಿ ದೇಶಮುಖರ ಮನೆಯಿಂದ ದೇವಿಯ ರಥದ ಕಳಸವನ್ನು ಪರುವಂತರೊಡಗೂಡಿ ಪಲ್ಲಕ್ಕಿ ಮೆರವಣಿಗೆಯೊಂದಿಗೆ ತರುವುದರ ಜೊತೆಗೆ ಶ್ರೀ ಭೀಮರಾವ್ ಎನ್ ಪಾಟೀಲ್ ರ ಮನೆಯಿಂದ ದೇವಿಯ ಉತ್ಸವದ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ವಿರಾಜಮಾನಗೊಳಿಸಿಕೊಂಡು ದೇವಸ್ಥಾನಕ್ಕೆ ಆಗಮಿಸಿ ರಥೋತ್ಸವಕ್ಕೆ ಐದು ಸುತ್ತು ಪ್ರದಕ್ಷಿಣೆ ಹಾಕಿ ನಂತರ ಸಾಯಂಕಾಲ 7 : 01 ಗಂಟೆಗೆ ದೇವಿಯ ರಥೋತ್ಸವಕ್ಕೆ ಉತ್ತುತ್ತಿ , ಬಾಳೆಹಣ್ಣು ನಾರು ಸಮರ್ಪಣೆ ಮಾಡಿ ಶ್ರೀ ಬಾದಾಮಿ ಬನಶಂಕರಿ ಮಾತಾಕಿ ಜೈ ಎಂದು ಜಯ ಘೋಷ ಕೂಗುತ್ತಾ ಭಕ್ತರು ವೈಭವದ ರಥೋತ್ಸವ ಸಂಭ್ರಮದಲ್ಲಿ ಜರುಗಿತು.
ರಥೋತ್ಸವ ಕಾರ್ಯಕ್ರಮದಲ್ಲಿ ಪೂಜ್ಯಶ್ರೀ ಬಸವಲಿಂಗ ಶಿವಾಚಾರ್ಯರು ಹಿರೇಮಠ ಕೋಡ್ಲಿ, ವೇದಮೂರ್ತಿ ಶಂಕ್ರಯ್ಯ ಸ್ವಾಮಿ ಯಲ್ಮಡಗಿ, ಹಣಮಂತರಾವ ಹಳ್ಳಿ, ರಾಮಣ್ಣ ಎಚ್ ಪಾಟೀಲ್, ಶ್ರೀಮಂತ್ ಗಂಜಿ, ಶಿವು ಕಣ್ಣಿ, ಸಿದ್ರಾಮಪ್ಪ ಹಳ್ಳಿ, ಭೀಮರಾವ್ ಎನ್ ಪಾಟೀಲ್, ವಿಠಲ್ ಆಡಕಿ , ಶಂಕರ್ ಹಳ್ಳಿ, ಸಂತೋಷ್ ಹಳ್ಳಿ, ರಾಚಪ್ಪ ಎನ್ ಪಾಟೀಲ್ , ಹಣಮಂತ್ ಆಡಕಿ, ಧನರಾಜ್ ಆಡಕಿ, ಲಕ್ಷ್ಮಣ ಆಡಕಿ, ಮಲ್ಲಿಕಾರ್ಜುನ ಹಳ್ಳಿ, ವಿಠಲ ಹಳ್ಳಿ, ರೋಹಿತ್ ಆಡಕಿ , ಮಲ್ಲಿಕಾರ್ಜುನ ಮುಚ್ಚಟ್ಟಿ, ಚಂದ್ರಕಾಂತ್ ಮುಚ್ಚಟ್ಟಿ, ವಿಠ್ಠಲ್ ಮುಚ್ಚಟ್ಟಿ, ಚಂದಪ್ಪ ಆರ್ ಮೋಘಾ, ಯೆಂಕಯ್ಯ ಗುತ್ತೇದಾರ, ಮಲ್ಲಿಕಾರ್ಜುನ್ ಚೆನ್ನೂರ್, ರಾಮಲಿಂಗ ರೆಡ್ಡಿ ದೇಶಮುಖ್, ಮಹಾಂತೇಶ್ ಮಠಪತಿ, ಸಿದ್ದರಾಮಯ್ಯ ಸಪಯ ಗೋಳ, ತುಕ್ಕಪ್ಪ ಕಣ್ಣಿ , ಭೀಮರಾವ್ ಎಚ್ ಪಾಟೀಲ್, ಶಂಕರ ಲಾಳಿ, ಜಗನ್ನಾಥ ಇಟಗಿ, ಜಗನ್ನಾಥ್ ಮಗಿ, ಕಾಳಪ್ಪ ಗಂಜಿ,ರಟಕಲ್ ಪಿ ಎಸ್ ಐ ಶೀಲಾದೇವಿ, ಕೋಡ್ಲಿ ಗ್ರಾಮದ ಭಕ್ತರು, ಸುತ್ತಮುತ್ತಲಿನ ಗ್ರಾಮದ ಜನರು ಈ ರಥೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೇವಿಯ ದರ್ಶನ ಪಡೆದು ಪುನೀತರಾದರು.

ವರದಿ : ಚಂದ್ರಶೇಖರ್ ಆರ್. ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!