ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮಲಪ್ರಭಾ ನದಿ ದಡದ ತೀರದಲ್ಲಿರುವ ಕೆಂಗಾನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಲಿಂಗದಹಳ್ಳಿ ಗ್ರಾಮದಲ್ಲಿ ಶ್ರೀ ಶ್ರೀ ಶ್ರೀ ಸಿದ್ದಲಿಂಗೇಶ್ವರ ಮಹಾಸ್ವಾಮಿಗಳ ಕೃಪಾಶೀರ್ವಾದದಿಂದ ಸತತ ಐದು ದಿನಗಳ ಕಾಲ ದಿ. 5/1/2026 ರಿಂದ 9/1/2026 ರ ವರೆಗೆ ನಡೆಯಲಿರುವ ಶ್ರೀ ಅಂಬಾದೇವಿ ಜಾತ್ರಾ ಮಹೋತ್ಸವದ ಮೊದಲನೇ ದಿನದ ಕಾರ್ಯಕ್ರಮದಲ್ಲಿ ಪೂಜ್ಯರು ಗ್ರಾಮದ ಗುರು ಹಿರಿಯರು ಹಾಗೂ ಗ್ರಾಮಸ್ಥರು ದೇವಸ್ಥಾನದ ಕಮಿಟಿಯ ಸಮ್ಮುಖದಲ್ಲಿ ಅದ್ದೂರಿಯಾಗಿ ಲಿಂಗದಹಳ್ಳಿ ಗ್ರಾಮದಲ್ಲಿ ಕುಂಭಮೇಳ ಕಾರ್ಯಕ್ರಮ ನಡೆಯಿತು.
ಎಲ್ಲರೂ ದೇವಿಯ ಪ್ರಸಾದ ಸೇವಿಸಿ ಪ್ರವಚನ ಹಾಗೂ ಇನ್ನುಳಿದ ಎಲ್ಲಾ ಕಾರ್ಯಕ್ರಮಗಳಲ್ಲಿ ಐದು ದಿನಗಳ ಕಾಲ ಭಾಗಿಯಾಗಬೇಕೆಂದು ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀ ನಾರಾಯಣ ರಣಸಿಂಗ ಎಲ್ಲರಿಗೂ ತಿಳಿಯಪಡಿಸಿದರು.
ವರದಿ ಮಂಜು ಎಂ. ಚಿಕ್ಕಣ್ಣವರ