ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಾದಿಗ ಸಮಾಜದ ಸದಸ್ಯತ್ವ ನೋಂದಣಿ ಬಲವರ್ಧನೆ ಮಾಡಲು ಮಹಾಸಭೆ

ತುಮಕೂರು / ಕೊರಟಗೆರೆ ತಾಲೂಕಿನಲ್ಲಿ ಒಂದು ಮನೆಯ ಒಬ್ಬ ಸದಸ್ಯ ಮಾದರ ಮಹಾಸಭಾ ಸದಸ್ಯತ್ವ ನೊಂದಣಿಯಬೇಕು.

ತುಮಕೂರು ಜಿಲ್ಲಾ ಮಾದರ ಮಹಾಸಭಾ ವತಿಯಿಂದ ಕೊರಟಗೆರೆ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನೂತನ ಮಾದರ ಮಹಾಸಭ ಬಹಳ ಯಶಸ್ವಿಯಾಗಿ ನಡೆಯಿತು.
ಈ ಸಂದರ್ಭದಲ್ಲಿ ವೈ ಹೆಚ್ ಹುಚ್ಚಯ್ಯ ಮಾತನಾಡಿ ಮುಂದಿನ ದಿನಗಳಲ್ಲಿ ಮಾದಿಗ ಸಮಾಜವನ್ನು ಮಾದರ ಮಹಾಸಭಾದ ಮೂಲಕ ಸಂಘಟನಾತ್ಮಕವಾಗಿ ಬಲವರ್ಧನೆಗೊಳಿಸುವ ಆಶಯ ಹೊಂದಲಾಗಿದೆ, ಮಾದಿಗ ಸಮುದಾಯ ದುರ್ಬಲವಾಗಿದ್ದು, ಹಿಂದೆ ಹಿರಿಯರು ನಮಗಾಗಿ ಮಾಡಿದ ಬೆಲೆ ಬಾಳುವ ಜಾಗ ಇತರರ ಪಾಲಾಗಿದೆ, ಒಳ ಮೀಸಲಾತಿ ಅನುಷ್ಠಾನದಿಂದ ನಮ್ಮ ಸಮುದಾಯಕ್ಕೆ ಶೈಕ್ಷಣಿಕವಾಗಿ ಮೀಸಲಾತಿ ದೊರೆತಿದೆ. ಒಳ ಮೀಸಲಾತಿಯ ಮೊದಲ ಫಲಾನುಭವಿಗಳೇ ವೈದ್ಯಕೀಯ, ಇಂಜಿನಿಯರಿಂಗ್ ವಿದ್ಯಾರ್ಥಿಗಳು. ವೈದ್ಯಕೀಯ, ಇಂಜಿನಿಯರಿಂಗ್ ಶಿಕ್ಷಣದಲ್ಲಿ ಲಭ್ಯವಿರುವ ಮೀಸಲಾತಿಯ ಸದುಪಯೋಗವಾಗಬೇಕು ಎಂದರೆ ನಮ್ಮ ಸಮುದಾಯ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ ಎಂದು. ಇತರ ಪ್ರಬಲ ಸಮಾಜಗಳು ಸಂಘಟನೆಯ ಮೂಲಕ ಮತ್ತಷ್ಟು ಪ್ರಬಲವಾಗುತ್ತಿವೆ. ಸರ್ಕಾರದ ಯಾವುದೇ ಯೋಜನೆ ಅಥವಾ ಅನುದಾನ ಒಳಮೀಸಲಾತಿ ಪ್ರಕಾರ ಶೇ. 6ರಷ್ಟು ಮೀಸಲಾತಿ ಮಾದಿಗ ಸಮುದಾಯಕ್ಕೆ ದೊರೆಯಬೇಕು, ಈ ಕಾರ್ಯ ಪ್ರಾಮಾಣಿಕವಾಗಿ ಆಗಬೇಕು ಎಂಬುದಕ್ಕೆ ನನ್ನ ಆಗ್ರಹ ಎಂದರು.

ಪಾವಗಡ ಶ್ರೀರಾಮ್ ಮಾತನಾಡಿ ಕರ್ನಾಟಕದ ರಾಜ್ಯದಲ್ಲಿ ಮಾದಿಗ ಜನಾಂಗ ಅತಿ ಹೆಚ್ಚು ತುಮಕೂರಿನಲ್ಲಿ ಇದ್ದಾರೆ ಆದರೆ ಈ ಸರ್ಕಾರ ಒಬ್ಬರನ್ನು ಎಂಎಲ್ಎ ಮಾಡಲಿಲ್ಲ ಅವನಿಗೆ ಟಿಕೆಟ್ ಕೊಡಲಿಲ್ಲ ಒಂದು ವೇಳೆ ಸರ್ಕಾರ ರಚನೆಯಾದಾಗ ಎಂಎಲ್ಸಿ ಮಾಡಲಿಲ್ಲ ಒಬ್ಬ ನಿಗಮ ಮಂಡಳಿ ಅಧ್ಯಕ್ಷನನ್ನು ಮಾಡಲಿಲ್ಲ ಯೂನಿವರ್ಸಿಟಿ ವೈಟ್ ಚೇರ್ಮನ್ ಮಾಡಲಿಲ್ಲ ಸಿಂಡಿಕೇಟ್ ಆಗಲಿ ಮಾಡಲಿಲ್ಲ ಎಷ್ಟು ಅನ್ಯಾಯ ಮಾಡಿದ್ದಾರೆ ಮಾದಿಗರಿಗೆ ಈ ರಾಜ್ಯದ 31 ಜಿಲ್ಲೆಗಳಲ್ಲಿ ಬಹು ಸಂಖ್ಯೆ ಮಾದಿಗರ ಸಮಾಜ ಹೆಚ್ಚಿನ ಸಂಖ್ಯೆಯಲ್ಲಿದೆ ಈ ಸರ್ಕಾರ ಎಷ್ಟು ಮೋಸ ಮಾಡಿದ್ದು ಎಂದು ಯೋಚನೆ ಮಾಡಬೇಕು ಈ ದೇಶದಲ್ಲಿ ಒಳ ಮೀಸಲಾತಿ ವರ್ಗೀಕರಣಕ್ಕೆ ಸುಪ್ರೀಂಕೋರ್ಟ್ ತೀರ್ಪು ಬಂದ ಮೇಲೆ ಆಂಧ್ರ ತೆಲಂಗಾಣದ ಕೇವಲ ಆರು ತಿಂಗಳಲ್ಲಿ ಒಳ ಮೀಸಲಾತಿ ಮಾಡಿದ್ದಾರೆ ನಮ್ಮ ಕರ್ನಾಟಕದಲ್ಲಿ ಎರಡು ವರ್ಷ ತಗೊಂಡಿದ್ದಾರೆ ಎರಡು ವರ್ಷ ಟೈಮ್ ತಕೊಂಡ್ರು ಒಳ ಮೀಸಲಾತಿ ವರ್ಗೀಕರಣ ಮಾಡಿದ್ದಾರೆ ಅದು ಹೇಗೆ ಎಂದರೆ ಇವರೇ ಹೋಗಿ ಇನ್ನೊಬ್ಬರ ಕಡೆಯಿಂದ ಹಾಕಿಸುತ್ತಾರೆ ಇಲ್ಲಿ ಮಾಡುತ್ತಾರೆ ಅಲ್ಲಿ ಅರ್ಜಿ ಹಾಕಿ ನೀಲಿಸುತ್ತಾರೆ ಇದು ಯಾರ ಕುತಂತ್ರ ಯಾರ ಕಣ್ಣು ಸಲ್ಲಿಗೆ ಇದರ ಕಾಣದ ಕೈ ನಿಮಗೆಲ್ಲ ಗೊತ್ತಿದೆ ಈ ಸಮಾಜಕ್ಕೆ ಇನ್ನು ಎಷ್ಟು ಅನ್ಯಾಯ ಆಗಬೇಕು ,ಸನ್ಮಾನ್ಯ ಕೆಎಚ್ ಮುನಿಯಪ್ಪನವರು ಬಹಳ ಒಳ್ಳೆಯ ಉದ್ದೇಶ ಇಟ್ಟುಕೊಂಡು ಮಾದರ ಮಹಾಸಭೆ ಮುಖಾಂತರ ಐಎಎಸ್ ಕೆಎಎಸ್ ಟೆಕ್ನಿಕಲ್, ಟ್ರೈನಿಂಗ್ ಕೊಡಬೇಕು ಈ ಬೆಂಗಳೂರಿನಲ್ಲಿ ಒಕ್ಕಲಿಗರ ಭವನ ಒಕ್ಕಲಿಗರ ಸಂಘ ಇದೆ ಒಕ್ಕಲಿಗರಿಗೆ ಮೆಡಿಕಲ್ ಕಾಲೇಜ್ ಇದೆ , ಬೆಂಗಳೂರು ಮಹಾನಗರದಲ್ಲಿ ವೀರಶೈವ ಸಂಘ ಇದೆ ವೀರಶೈವ ಸಭಾಭವನ ಇದೆ ಇಡೀ ರಾಜ್ಯದಲ್ಲಿ ಮೆಡಿಕಲ್ ಕಾಲೇಜ್ ಇದೆ 25,000 ಕೋಟಿ ಕಾಲೇಜ್ ಇಂಜಿನಿಯರಿಂಗ್ ಕಾಲೇಜ್ ವಿವಿಧ ಬೆಂಗಳೂರು ನಗರದಲ್ಲಿ ಆಸ್ತಿ ಬೇರೆ ಬೇರೆ ಜಿಲ್ಲೆಗಳಲ್ಲಿ 25,000 ಕೋಟಿ ಆಸ್ತಿಗಳಿವೆ ಒಕ್ಕಲಿಗ ಕುರುಬ ಲಿಂಗಾಯತ ಸಮಾಜದ ಆಸ್ತಿ ಇದೆ.
ಬೆಂಗಳೂರು ನಗರದಲ್ಲಿ 25,000 ಕೋಟಿ ರೂಪಾಯಿಯ ಹೊಲೆಯ ಸಮಾಜದ ಆಸ್ತಿ ಇದೆ ಎಂದರು.

ಘಟಕದಲ್ಲಿ ಆಯ್ಕೆಯಾದ ಅಧ್ಯಕ್ಷರಾದ ಸಿದ್ದೇಶ್ ಟಿ ಸಿ, (ವಿಭೂತಿ ಸಿದ್ದಪ್ಪ) ಉಪಾಧ್ಯಕ್ಷರಾಗಿ ದಾಸರಹಳ್ಳಿ ಮಂಜುನಾಥ್, ಕಾರ್ಯದರ್ಶಿಯಾಗಿ ಲಕ್ಷ್ಮಿನರಸಯ್ಯ, ಖಜಾಂಚಿಯಾಗಿ ವಿ ಕೆ. ವೀರ ಖ್ಯಾತಯ್ಯ. ನಿರ್ದೇಶಕರುಗಳನ್ನು ಆಯ್ಕೆ ಮಾಡಿ ಕೊರಟಗೆರೆ ತಾಲೂಕಿನಲ್ಲಿ ಪ್ರತಿ ಗ್ರಾಮದ ಒಂದು ಮನೆಯ ಒಬ್ಬ ಸದಸ್ಯ ಮಾದರ ಮಹಾಸಭಾ ಸದಸ್ಯತ್ವ ನೊಂದಣಿ ಮಾಡಿಕೊಳ್ಳಬೇಕು ರಾಜ್ಯಮಟ್ಟದ ಜಂಟಿ ಕಾರ್ಯದರ್ಶಿಗಳಾದ ಮಾಜಿ ಶಾಸಕರು ತಿಮ್ಮರಾಯಪ್ಪನವರು ಅಭಿಯಾನಕ್ಕೆ ಚಾಲನೆ ನೀಡಲಾಯಿತು.ಇದೇ ಸಂದರ್ಭದಲ್ಲಿ ಕೊರಟಗೆರೆಯ ದಾಡಿ ವೆಂಕಟೇಶ್, ಏರ್ ಟೆಲ್ ಗೋಪಿನಾಥ್, ಮಾರುತೇಶ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರು ನರಸಿಂಹಮೂರ್ತಿ. ಎಲ್ ಸೇರಿದಂತೆ ಇನ್ನೂ ಹಲವು ಸದಸ್ಯರು, ಸಮಾಜದ ಹಿರಿಯ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ ಪ್ರಸನ್ನ ಕುಮಾರ್ ಎಸ್.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!