ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 6ನೇ ತರಗತಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ಅದ್ದೂರಿಯಾಗಿ ಜರುಗಿದ ಪಾಲಕರ ಸಮಾವೇಶ ಸಮಾರಂಭವು ಅದ್ದೂರಿಯಾಗಿ ಜರುಗಿತು. ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿ ಸ್ಥಾನವನ್ನು ಮಲ್ಲಿಕಾರ್ಜುನ್ ಪೊಲೀಸ್ ಪಾಟೀಲ್ ಅವರು ವಹಿಸಿಕೊಂಡಿದ್ದರು. ಅದೇ ರೀತಿಯಾಗಿ ಅತಿಥಿ ಸ್ಥಾನವನ್ನು ಶಾಲೆಯ ಮುಖ್ಯ ಪ್ರಾಂಶುಪಾಲರಾದ ಅಪ್ಪು ರಾಠೋಡ್ ಅವರು ವಹಿಸಿಕೊಂಡಿದ್ದರು.
ಈ ಸಂದರ್ಭದಲ್ಲಿ ಶಾಲೆಯ ಮಕ್ಕಳಿಂದ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಸರ್ಕಾರದ ವತಿಯಿಂದ ವಿದ್ಯಾರ್ಥಿನಿಯರ ಸ್ವಯಂ ರಕ್ಷಣಾ ಹಿತದೃಷ್ಟಿಯಿಂದ ಹಮ್ಮಿಕೊಂಡ ಕರಾಟೆ ಸ್ವಯಂ ರಕ್ಷಣಾ ತರಬೇತಿಯನ್ನು ಕರಾಟೆ ಶಿಕ್ಷಕರಾದ ಜಟ್ಟಪ್ಪ ಎಸ್ ಪೂಜಾರಿ ಹಾಗೂ ಜಟ್ಟಪ್ಪ ಎನ್ ಪೂಜಾರಿ ಇಜೇರಿ ಹಾಗೂ ಮಾಳಪ್ಪ ಎಸ್ ಪೂಜಾರಿ ಅವರು ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿಯನ್ನು ನೀಡಿದರು.
ಇದೇ ಸಂದರ್ಭದಲ್ಲಿ ಪಾಲಕರ ಸಭೆಯಲ್ಲಿ ಪಾಲ್ಗೊಂಡ ಅನೇಕ ವಿದ್ಯಾರ್ಥಿಗಳ ಪೋಷಕರು ವಿದ್ಯಾರ್ಥಿಗಳ ಅಭ್ಯಾಸದ ಇನ್ನಿತರ ಉನ್ನತ ಮಟ್ಟದ ಚಟುವಟಿಕೆಗಳ ಕುರಿತು ಶ್ಲಾಘನೆಯನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ದೇವೇಂದ್ರಪ್ಪ ಎಸ್, ಇಸ್ಮಾಯಿಲ್ ಮಕಂದಾರ, ರಮೇಶ್ ಯಾಳಗಿ, ಚಂದ್ರಶೇಖರ್ ಬಿ, ಸಂತೋಷ್ ದೊಡ್ಮನಿ, ವಿಜಯರೆಡ್ಡಿ, ಮಡಿವಾಳಪ್ಪ ಪಾಟೀಲ್, ಶಾಂತಲಿಂಗ ಪಾಟೀಲ್, ಮೌನೇಶ್ ಬಡಿಗೇರ್, ಬಾಪು ಗೌಡ, ಬಿ.ಬಿ ಬಿರಾದರ್, ತನುಜಾ ಮೇಡಂ ಸೇರಿದಂತೆ ಇತರರು ಭಾಗವಹಿಸಿದ್ದರು.
- ಕರುನಾಡ ಕಂದ ಪತ್ರಿಕೆ



















