ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ದೀರ್ಘಕಾಲ ಆಡಳಿತ ನಡೆಸಿದ ರಾಜ್ಯದ ಏಕೈಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಭಿನಂದನೆ ಸಲ್ಲಿಸಿ ಹರ್ಷ ವ್ಯಕ್ತಪಡಿಸಿದ ಮಹಂತ್ ಗೌಡ ಆರ್. ಪಾಟೀಲ್
ಕಲ್ಬುರ್ಗಿ : ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅತಿ ಹೆಚ್ಚು ಕಾಲ ಆಡಳಿತ ನಡೆಸಿದ ಮುಖ್ಯಮಂತ್ರಿಯಾಗಿ ದಾಖಲೆ ನಿರ್ಮಿಸಿದ್ದಾರೆ.
ಸಿದ್ದರಾಮಯ್ಯ 7 ವರ್ಷ +240 ದಿನ ಪೂರೈಸಿದರೆ
ಡಿ ದೇವರಾಜ್ ಅರಸ್ 7 ವರ್ಷ 239 ದಿನಗಳು
ಎಸ್ ನಿಜಲಿಂಗಪ್ಪ 7 ವರ್ಷ 175 ದಿನಗಳು
ರಾಮಕೃಷ್ಣ ಹೆಗಡೆ 5 ವರ್ಷ216 ದಿನಗಳು ಆಗಿವೆ.
ಜಾತಿವಾದ ಕೋಮುವಾದ ಅಸಮಾನತೆ ಅರಾಜಕತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದ ಸಮಾಜದಲ್ಲಿ ಅಚಾನಕ್ಕಾಗಿ ಉದಯಿಸಿದ ಸಮಾನ ಸಿದ್ದಾಂತ ವೈಚಾರಿಕ ಮೌಲ್ಯಗಳನ್ನು ಮೈಗೂಡಿಸಿಕೊಂಡು ರಾಜ್ಯದ ಮನೆ ಮಾತಾಗಿದ್ದ ಒಬ್ಬ ಜನನಾಯಕ ರಾಜ್ಯ ರಾಜಕಾರಣಕ್ಕೆ ಅಹಿಂದ್ ಚಳುವಳಿಯೊಂದಿಗೆ ಬಲಾಡ್ಯ ಸಮಾಜಗಳ ವಿರೋಧದ ನಡುವೆ ಬಡವರ ದೀನದಲಿತ ಹಿಂದುಳಿದ ಸಮಾಜಗಳ ಆಶಾ ಕಿರಣವಾಗಿ ಪ್ರವೇಶ ಮಾಡುತ್ತಾನೆ ಸಮ ಸಮಾಜದ ಪರಿಕಲ್ಪನೆ ವಿರಳ ಎಂಬಂತಹ ಸನ್ನಿವೇಶದಲ್ಲಿ ಇವರು ಅವತರಿಸುತ್ತಾರೆ. ಮುಂದಿನದು ಇತಿಹಾಸ.
ರಾಜ್ಯದ ದೀರ್ಘಕಾಲ ಆಡಳಿತ ನಡೆಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕರ್ನಾಟಕ ರಾಜ್ಯದ ಜನತೆಯ ಪರವಾಗಿ ಅಭಿನಂದನೆಯನ್ನು ಸಲ್ಲಿಸಿ ಹರ್ಷವನ್ನು ವ್ಯಕ್ತಪಡಿಸಿದ್ದೇವೆ ಎಂದು ಕಾಂಗ್ರೆಸ್ ಪಕ್ಷದ ಯಡ್ರಾಮಿ ತಾಲೂಕ ಮುಖಂಡರಾದ ಮಹಂತ್ ಗೌಡ ಆರ್ ಪಾಟೀಲ್ ಹಂಗರಗಾ ಕೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಕರುನಾಡ ಕಂದ ಪತ್ರಿಕೆ




















