ಸಮಾಜ ಕಲ್ಯಾಣ ಇಲಾಖೆಯ
ಗದಗ ಉಪನಿರ್ದೇಶಕರು
ದಕ್ಷ ಸಮರ್ಥ ಆಡಳಿತಗಾರರು
ಡಾ.ನಂದಾ ಹಣಬರಟ್ಟಿಯವರು.
ಧಾರವಾಡ ಡಿವಿಜಿ ಶಿಕ್ಷಣ ಸಂಸ್ಥೆಯಲಿ
ಪ್ರಾಥಮಿಕ ಶಿಕ್ಷಣ ಪೂರೈಸಿಹರು
ವಿವೇಕಾನಂದ ಗುರುಕುಲದಲಿ
ಶಿಕ್ಷಣ ಪಡೆದಿಹ ಬಹುಮುಖ ಪ್ರತಿಭಾನ್ವಿತರು.
ಅಧಿಕ ಅಂಕಗಳಿಸಿಹ ಜ್ಞಾನತೃಷೆಯುಳ್ಳವರು
ಐದುಗ್ರಾಂ ಚಿನ್ನದುಂಗುರ ಗೌರವಕೆ ಭಾಜನರು
ಚಂದ್ರಶೇಖರ ಬಳುಂಡಗಿ ಗುರುವರ್ಯರ
ಅಚ್ಚುಮೆಚ್ಚಿನೊಲವಿನ ಶಿಷ್ಯೋತ್ತಮರು.
ಕೆಎಎಸ್ ಪರೀಕ್ಷೆಯಲಿ ವಿಜೇತರಾದವರು
ಕಂಚಿನ ಕಂಠದ ಸುಶ್ರಾವ್ಯ ಸಂಗೀತಗಾರರು
ನಾಟಕರಂಗೋಲಿ ಚಿತ್ರಕಲಾವಿದೆಯಾಗಿಹರು
‘ಮನೆ ಗೆದ್ದು ಮಾರು ಗೆಲ್ಲು’ವ ಛಲಗಾರರು.
‘ಹಸನ್ಮುಖಿ ಸದಾ ಸುಖಿ’ಯೆನಿಸಿಹರು
ಗ್ರಾಮೀಣ ಸುಸಂಸ್ಕ್ರತ ಮನೆತನದವರು
ಉದಾರ ಹ್ರೃದಯ ವೖಶಾಲ್ಯವುಳ್ಳವರು
ಇರ್ವರು ಕುಲದೀಪಕ/ಕಿಯರ ಮಾತೆಯಿವರು.

— ಪ್ರೊ.ಶಕುಂತಲಾ ಚನ್ನಪ್ಪ ಸಿಂಧೂರ.
ಕವಯಿತ್ರಿ, ವಿಶ್ರಾಂತ ಪ್ರಾಧ್ಯಾಪಕರು,
ಗದಗ.




















