
ಹುನಗುಂದ :ವಿ.ಮ.ವಿ.ವ. ಸಂಘದ
ಪಟ್ಟಣದ ಎಸ್. ಆರ್. ವಸ್ತ್ರದ ಕಲಾ, ವಿಜ್ಞಾನ ಹಾಗೂ ವಿಜಯ ಶಂಕರಪ್ಪ ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯದ ಇತಿಹಾಸ ವಿಭಾಗ ಹಾಗೂ ಐಕ್ಯೂಎಸಿ ಘಟಕದ ಸಹಯೋಗದಲ್ಲಿ ಡಾ.ಶಿವಾನಂದ ಆರ್. ನಾಗಣ್ಣವರ ಅವರ ಐದು ಸಂಶೋಧನಾ ಗ್ರಂಥಗಳ ಲೋಕಾರ್ಪಣೆ ಹಾಗೂ ಇತಿಹಾಸ ಮತ್ತು ಕನ್ನಡ ಸಾಹಿತ್ಯ : ಒಂದು ಸಾಂಸ್ಕೃತಿಕ ದೃಷ್ಟಿಕೋನ ಹಾಗೂ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭವು ದಿನಾಂಕ: 07ನೇ ಜನವರಿ 2026, ಬುಧವಾರ ಮುಂಜಾನೆ : 10 : 30 ಗಂಟೆಗೆ ಸ್ಥಳ: ಮಹಾವಿದ್ಯಾಲಯದ ಸಭಾಭವನದಲ್ಲಿ ಜರುಗಲಿದೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಚಿತ್ತರಗಿ ಸಂಸ್ಥಾನ ಮಠ ಇಳಕಲ್ಲ -ಹುನಗುಂದದ ಮ.ನಿ.ಪ್ರ. ಗುರು ಮಹಾಂತಸ್ವಾಮಿಗಳು ವಹಿಸಲಿದ್ದಾರೆ.
ಸಾನಿಧ್ಯವನ್ನು ಬಾಗಲಕೋಟ ತಾಲೂಕಿನ ಶಿರೂರ ಗ್ರಾಮದ ವಿಜಯಮಹಾಂತೇಶ್ವರ ಮಠದ ನಿಸರ್ಗ ಚಿಕಿತ್ಸ ಕೇಂದ್ರದ ಮ.ನಿ.ಪ್ರ. ಡಾ. ಬಸವಲಿಂಗ ಸ್ವಾಮಿಗಳು ವಹಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಗಲಕೋಟೆಯ ಮಾಜಿ ಶಾಸಕ ಹಾಗೂ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ವೀರಣ್ಣ ಸಿ. ಚರಂತಿಮಠ ವಹಿಸಲಿದ್ದಾರೆ ಸಂಸ್ಥೆಯ ಗೌರವ ಕಾರ್ಯದರ್ಶಿ, ಡಾ ಮಹಾಂತೇಶ ಎಸ್. ಕಡಪಟ್ಟಿ, ವಹಿಸಲಿದ್ದಾರೆ.
ಜಮಖಂಡಿಯ ಬಾಗಲಕೋಟೆ ವಿದ್ಯಾಲಯದ ಕುಲಪತಿ ಡಾ. ಆನಂದ ಶರದ್ ದೇಶಪಾಂಡೆ,
ವಿಚಾರ ಸಂಕಿರಣವನ್ನು ಉದ್ಘಾಟಕರಾಗಿ ಆಗಮಿಸಲಿದ್ದಾರೆ, ಪುಸ್ತಕಗಳ ಲೋಕಾರ್ಪಣೆಯನ್ನು
ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ.ಡಾ ಡಿ.ವಿ. ಪರಮಶಿವಮೂರ್ತಿ ನೆರವೇರಿಸಲಿದ್ದಾರೆ.
ಮೀನಾ ಆರ್.ಡಾ ಚಂದಾವರಕರ ವಿಶೇಷ ಆಮಂತ್ರಿತರಾಗಿ ಆಗಮಿಸಲಿದ್ದಾರೆ.
ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು
ಧಾರವಾಡ ಕೆ ವಿ ವಿ ಸಂಸ್ಥೆಯ ಕನ್ನಡ ಸಂಶೋಧನಾ ಸಂಸ್ಥೆಯ ವಿಶ್ರಾಂತ ನಿರ್ದೇಶಕ ಡಾ. ರು. ಮ. ಷಡಕ್ಷರಯ್ಯ, ಬಾಗಲಕೋಟೆ ಜಿಲ್ಲೆ ಲೋಕಾಯುಕ್ತ
ಎ ವೈ ಎಸ್ ಪಿ ಸುರೇಶ ರೆಡ್ಡಿ ಬಾಗಲಕೋಟೆ ಸೈಬರ್ ಪೊಲೀಸ್ ಡಿವೈಎಸ್ಪಿ ಡಾ. ಗಿರೀಶ ಭೋಜನವರ
ಬೆಂಗಳೂರು ಕದಂಬ ಪ್ರಕಾಶನದ ಸಂಸ್ಥಾಪಕ ನಾಗೇಶ ಡಿಸಿ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಪುಸ್ತಕಾವಲೋಕನವನ್ನು ಡಾ. ಈರಣ್ಣ ಕೆ. ಪತ್ತಾರ ಅವಲೋಕಿಸಲಿದ್ದಾರೆ. ಧಾರವಾಡ ಕನ್ನಡ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಂಚಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕರು, ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಧ್ಯಯನ ವಿಭಾಗದ ಮೌಲ್ಯಮಾಪನ ಕುಲ ಸಚಿವ ಡಾ. ಅಮರೇಶ ಏತಗಲ, ಹುನುಗುಂದ ವಿ ಎಂಎಸ್ ಆರ್ ವಿ ವಸ್ತ್ರದ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಮಹೇಶ್ ತಿಪ್ಪ ಶೆಟ್ಟಿ ಬನಹಟ್ಟಿಎಸ್.ಟಿ.ಸಿ. ಮಹಾವಿದ್ಯಾಲಯದ ಸಹಪ್ರಾಧ್ಯಾಪಕ ಡಾ. ಮಂಜುನಾಥ ಬೆನ್ನೂರ, ಆಗಮಿಸಲಿದ್ದಾರೆ ಪ್ರಿನ್ಸಿಪಾಲ್ ಡಾ ಎಸ್ ಆರ್ ಗೋಲಗುಂಡ ಪದವಿ ಪೂರ್ವ ವಿಭಾಗದ ಎಚ್. ಎಸ್. ಬೋಳಿಶೆಟ್ಟರ, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ನಿರ್ದೇಶಕ ಎಸ್. ಬಿ. ಚಳಗೇರಿ ಉಪಸ್ಥಿತರಿರುವರು. ಕಾರ್ಯಕ್ರಮಕ್ಕೆ ಆಗಮಿಸುವ ಸರ್ವರನ್ನು ಡಾ. ಎಲ್.ಎನ್. ಕುಲಕರ್ಣಿಡಾ. ಬಿ.ಎಂ.ಹಲಸಂಗಿಶ್ರೀಮತಿ ಗಿರಿಜಮ್ಮ ಹೆಚ್.ಡಾ. ಶಿವಾನಂದ ಆರ್. ನಾಗಣ್ಣವರ ದ ಐಕ್ಯೂಎಸಿ ಘಟಕ ಕಾರ್ಯಾಧ್ಯಕ್ಷರು, ಕಾಲೇಜು ಒಕ್ಕೂಟಉಪನ್ಯಾಸಕರು, ಇತಿಹಾಸ ವಿಭಾಗ ಮುಖ್ಯಸ್ಥರು, ಇತಿಹಾಸ ವಿಭಾಗ ಪ್ರಕಟಣೆಯಲ್ಲಿ ಸ್ವಾಗತ ಕೋರಿದ್ದಾರೆ.
- ಕರುನಾಡ ಕಂದ ಪತ್ರಿಕೆ



















