ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹಾಸನದಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣ : ಜಿಲ್ಲಾಧ್ಯಕ್ಷ ಪರಶುರಾಮ್ ಕೆರೆಹಳ್ಳಿ

ಕೊಪ್ಪಳ : ಜನವರಿ 9 ರಂದು ರಾಜ್ಯಮಟ್ಟದ ವಿಚಾರ ಸಂಕೀರ್ಣವನ್ನು ಹಾಸನದಲ್ಲಿ ಡಾ.ಬಿ,ಆರ್ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ಸ್ವಾಭಿಮಾನಿ ಪ್ರೊ.ಬಿ. ಕೃಷ್ಣಪ್ಪ ಬಣ ಜಿಲ್ಲಾಧ್ಯಕ್ಷ ಪರಶುರಾಮ ಕೆರೆಹಳ್ಳಿ ರವರು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಶತಮಾನಗಳಿಂದ ಶೋಷಣೆ ದೌರ್ಜನ್ಯಕ್ಕೆ ಒಳಗಾದ ಅಸ್ಪೃಶ್ಯರಿಗೆ ವಿದ್ಯೆ, ಸಂಪತ್ತು, ಅಧಿಕಾರ ನಿರಾಕರಿಸಿ ಅಮಾನುಷವಾಗಿ ಪ್ರಾಣಿಗಳಿಗಿಂತ ಕೀಳಾಗಿ ನಡೆಸಿಕೊಂಡ ಮನುವಾದಿಗಳಿಗೆ ಸೆಡ್ಡು ಹೊಡೆದು ಪ್ರಬಲ ಹೋರಾಟ ನಡೆಸಿ ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಶೋಷಿತರಿಗೆ ಮೀಸಲಾತಿ ಅಳವಡಿಸಿರು ವರು. ಇದರಿಂದಾಗಿ ಅಸ್ಪೃಶ್ಯರಿಗೆ ಶಿಕ್ಷಣ, ಉದ್ಯೋಗ, ರಾಜಕೀಯ, ಅಧಿಕಾರ ದೊರೆಯುವಂತಾಗಿ ಅವರು ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯವಾಯಿತು.
ಇದನ್ನು ಸಹಿಸದ ಮನುವಾದಿಗಳು
ಎಸ್.ಸಿ/ಎಸ್.ಟಿ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯದವರಿಗೆ, ಮೀಸಲಾತಿ
ಲಭಿಸದಂತೆ ಸರ್ಕಾರಗಳಿಗೆ ಆಗ್ರಹಿಸಿ
ಮನುವಾದಿಗಳು ಪಿತೂರಿ ನಡೆಸುತ್ತಿದ್ದಾರೆ ಎಂದು ಪರಶುರಾಮ ಕೆರೆಹಳ್ಳಿ ಹೇಳಿದರು.
ನಂತರ ಮಾತನಾಡಿದ ಸಂಜಯ ದಾಸ ಕೌಜಗೇರಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಖಾಸಗಿ ಕ್ಷೇತ್ರದಲ್ಲಿ ಕೂಡ ಮೀಸಲಾತಿ ಜಾರಿ ಮಾಡಬೇಕಾದ ಅನಿವಾರ್ಯತೆ ಇದೆ. ಸ್ವಾತಂತ್ರ್ಯದ ನಂತರ ಇಲ್ಲಿಯವರೆಗೂ ಆಡಳಿತ ನಡೆಸಿದ ಎಲ್ಲಾ ಪಕ್ಷದ ಸರ್ಕಾರಗಳು ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿಯನ್ನು ಜಾರಿ ಮಾಡ ಬೇಕೆಂದು ಹೇಳಿದರು. ನಂತರ ಮಾತನಾಡಿದ ಕ.ಕ.ವಿಭಾಗೀಯ ಸಂಚಾಲಕರಾದ ಹನುಮಂತಪ್ಪ ನಾಯಕ ವಡ್ಡರಹಟ್ಟಿ ಮಾತನಾಡಿ ಡಾ.ಬಿ,ಆರ್ ಅಂಬೇಡ್ಕರ್ ಅವರು ಸಂವಿಧಾನವನ್ನು ಕೊಟ್ಟಿದ್ದಾರೆ ಆ ಸಂವಿಧಾನವನ್ನು ನಾವು ಉಳಿಸೋಣ, ರಕ್ಷಣೆ ಮಾಡೋಣ, ಅನ್ಯಾಯಕ್ಕೆ ಒಳಗಾದ ದಲಿತ ಜನರಿಗೆ ನ್ಯಾಯವನ್ನು ಕೊಡಿಸೋಣ ಸಂಘಟನೆಯನ್ನ ಬಲಪಡಿಸೋಣ ಎಂದು ಹೇಳಿದರು.

ಮಾರುತಿ ಪೂಜಾರ್ ಬಿಕ್ಕನಹಳ್ಳಿ ಮಾತನಾಡಿ, ಎಸ್ ಸಿ ಎಸ್ ಟಿ ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯದ ಯುವಕರಲ್ಲಿ ಮೊದಲು ಶಿಕ್ಷಣಕ್ಕೆ ಒತ್ತು ನೀಡಬೇಕು. ಶಿಕ್ಷಣ, ಸಂಘಟನೆ ಹೋರಾಟ ಇವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ನಿರುದ್ಯೋಗಗಳು, ಉದ್ಯೋಗವಂತರಾಗಬೇಕು, ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಬೇಕು ಎಂದು ಹೇಳಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ಸ್ವಾಭಿಮಾನಿ ಪ್ರೊ. ಬಿ,ಕೃಷ್ಣಪ್ಪ ಬಣ ಈ ಎಲ್ಲಾ ಸಂಘಟನೆಯ ಜಿಲ್ಲಾ ಮತ್ತು ತಾಲೂಕ, ಹೋಬಳಿ, ಗ್ರಾಮ ಘಟಕ ಪದಾಧಿಕಾರಿಗಳು ಹಾಗೂ ರಾಜ್ಯ ಸಮಿತಿ ಪದಾಧಿಕಾರಿಗಳು, ಕೇಂದ್ರ ಮತ್ತು ರಾಜ್ಯ
ಸರ್ಕಾರಗಳಿಗೆ ಒತ್ತಾಯಿಸಲು ದಿ. 9/01/2026 ರಂದು ಹಾಸನದಲ್ಲಿ ರಾಜ್ಯಮಟ್ಟದ ವಿಚಾರ ಸಂಕೀರ್ಣವನ್ನು ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಸಂಧರ್ಭದಲ್ಲಿ ಹನಮಂತಪ್ಪ
ನಾಯಕ ಗಂಗಾವತಿ ಕ.ಕ.ವಿಭಾಗೀಯ ಸಂಚಾಲಕರು, ನೂರ ಅಹ್ಮದ್ ಸಂತ್ರಾಸ್ ಕನಕಗಿರಿ ಸಂ.ಸಂಚಾಲಕರು. ಅಹ್ಮದ್ ಮೇಸ್ತ್ರಿ ಕನಕಗಿರಿ ಸಂ.ಸಂಚಾಲಕರು. ಅಂದಪ್ಪ ಅಡಪದ್ ತಾಲೂಕ ಸಂ.ಸಂಚಾಲಕರು. ಸಂಜಯ್ ದಾಸ್ ಕೌಜಗೇರಿ ಅಲೆಮಾರಿಯ ಸಂಘಟನೆ ಜಿಲ್ಲಾಧ್ಯಕ್ಷರು, ನಾಗರಾಜ್ ಹೊನ್ನಕೇರಿ ದಲಿತರಕ್ಷಣಾ ವೇದಿಕೆ ಅಧ್ಯಕ್ಷರು, ಲಲಿತಾ ಮಜ್ಗಿ ಗಿಣಿಗೇರಿ, ಸಂ.ಕಾರ್ಯದರ್ಶಿ, ಗಾಳೇಶ ದೇವರಮನಿ, ಮಾರುತಿ ಪೂಜಾರ ಬಿಕ್ಕನಹಳ್ಳಿ , ರಾಮಲಿಂಗ ಶಾಸ್ತ್ರೀ , ಗಾಯಿತ್ರಿ ಸಿದ್ದಪ್ಪ ಹೊಸಮನಿ, ಗವಿಸಿದ್ದಪ್ಪ ಬೆದವಟ್ಟಿ, ಪರಸಪ್ಪ ಕಲಕೇರಿ, ಮಹೇಶ್ ಮಠದ ಬಿಸರಹಳ್ಳಿ, ಕನಕಪ್ಪ ವನಬಳ್ಳಾರಿ, ಗವಿ ಪೂಜಾರ ಬಿಸರಹಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿ ತರಿದ್ದರು.

  • ಕರುನಾಡ ಕಂದ ಪತ್ರಿಕೆ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!