ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನಲ್ಲಿ ಇಂದು ಸಹಕಾರ ಭಾರತಿ ತಾಲೂಕ ಅಭ್ಯಾಸ ವರ್ಗ ಮತ್ತು ಸಹಕಾರ ಭಾರತಿ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಹಕಾರ ಭಾರತಿ ತಾಲೂಕು ಅಧ್ಯಕ್ಷರಾದ ಶ್ರೀ ಶರಣಬಸವ ಚನ್ನಳ್ಳಿ ಅಧ್ಯಕ್ಷತೆಯನ್ನು ವಹಿಸಿದ್ದರು. ಉದ್ಘಾಟನೆ ನುಡಿಗಳನ್ನು RKDCC ಬ್ಯಾಂಕ್ ಅಧ್ಯಕ್ಷರಾದ ಶ್ರೀ ವಿಶ್ವನಾಥ ಪಾಟೀಲ ಮಾತಾಡಿದರು. ಮೊದಲನೇ ಅವಧಿಯನ್ನು ಶ್ರೀ ಕೇಶವ್ ಜಿ, ರಾಷ್ಟ್ರೀಯ ಸ್ವಯಂಸೇವಕರು ಬಳ್ಳಾರಿ ವಿಭಾಗ, ಹೊಸಪೇಟೆ ಇವರು ನಡೆಸಿಕೊಟ್ಟರು. ಎರಡನೇ ಅವಧಿಯನ್ನು ಶ್ರೀ ಸಿ. ಜಿ. ಜವಳಿ, ಶ್ರೀ ಅಭಿನವ ಸಿದ್ದೇಶ್ವರ ಸಹಕಾರಿ ,ಗಂಗಾವತಿ. ಇವರು ನಡೆಸಿಕೊಟ್ಟರು. ನಂತರ ಮುಖ್ಯ ಅತಿಥಿಗಳ ನುಡಿಗಳನ್ನು ಶ್ರೀ ರಮೇಶ್ ಮಲ್ಲಪ್ಪ ಕವಲೂರು ಮಾತನಾಡಿದರು. ಪ್ರಥಮವಾಗಿ ಪ್ರಾಸ್ತಾವಿಕ ನುಡಿಗಳಲ್ಲಿ ಸಹಕಾರ ಭಾರತಿ ನಡೆದ ಬಂದ ದಾರಿಯನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಶರಣಪ್ಪ ಹ್ಯಾಟಿ, ಕ್ರೆಡಿಟ್ ಸೆಲ್ ಸಹ ಪ್ರಮುಖರು ಉತ್ತರ ಕರ್ನಾಟಕ, ಶ್ರೀ ನಾಗರಾಜ ಹಕ್ಕಿ ,ಸಹಕಾರ ಭಾರತಿ ಕೊಪ್ಪಳ ಜಿಲ್ಲಾ ಮಹಿಳಾ ಪ್ರಮುಖರು, ಸಹಕಾರ ಭಾರತಿ ಶ್ರೀಮತಿ ಲಲಿತಾ ಮ್ಯಾಗಳಮನಿ,
ಶ್ರೀ ಕೆ ವೆಂಕಟರೆಡ್ಡಿ ಅಧ್ಯಕ್ಷರು ಶ್ರೀ ಲಕ್ಷ್ಮಿ ವೆಂಕಟೇಶ್ವರ ಸೌಹಾರ್ದ ಸಂಘ ಕಾರಟಗಿ, ಶ್ರೀ ವಿನೋದ್ ಕುಮಾರ್ ಗದ್ದಿ ಸದಸ್ಯರು ಸಹಕಾರ ಭಾರತಿ ಕೊಪ್ಪಳ ಜಿಲ್ಲಾ, ಶ್ರೀಮತಿ ವಿಜಯಲಕ್ಷ್ಮಿ ಮೇಲಿನಮನಿ ಮಹಿಳಾ ಪ್ರಮುಖರು ಸಹಕಾರ ಭಾರತಿ ಕಾರಟಗಿ ತಾಲೂಕು, ಶ್ರೀ ಸೋಮನಾಥ್ ಹೆಚ್ ಸಹಕಾರ ಭಾರತಿ ಉಪಾಧ್ಯಕ್ಷರ, ಶ್ರೀ ತಿಪ್ಪೇಶ ಉಪನಾಳ, ಪ್ರಧಾನ ಕಾರ್ಯದರ್ಶಿಗಳು ,ಶ್ರೀ ಪಂಪನಗೌಡ ಕತ್ತಿ ,ಸಂಘಟನಾ ಕಾರ್ಯದರ್ಶಿ ಕಾರಟಗಿ ತಾಲೂಕು, ಹಾಗೂ ಕಾರಟಗಿ ತಾಲೂಕಿನ ಎಲ್ಲಾ ಸಹಕಾರ ಭಾರತೀಯ ಪದಾಧಿಕಾರಿಗಳು ಹಾಗೂ ಹಿರಿಯ ಸಹಕಾರಿಗಳು ಈ ಒಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವರದಿ ಅಮರೇಶ ನಾಯಕ



















