ಪಾವಗಡ:ಶನಿವಾರ ಬೆಳ್ಳಂ ಬೆಳಿಗ್ಗೆ ರಾಜವಂತಿ ಗಡಿಭಾಗದಲ್ಲಿ ಬೈಕ್ ಮತ್ತು ಟಿಪ್ಪರ್ ನಡುವೆ ಡಿಕ್ಕಿ ಸ್ಥಳದಲ್ಲಿ ಅಂಬರೀಶ್ ಎನ್ನುವ ಯುವಕ ಸಾವು.
ಪಾವಗಡದಿಂದ ತುಮಕೂರಿನ ಕಡೆಗೆ ತೆರಳುವಾಗ ರಾಜವಂತಿಯ ಬಳಿ ರೈಲ್ವೆ ಕಾಮಗಾರಿಗೆ ಜಲ್ಲಿ ಸಾಗಿಸುತ್ತಿದ್ದ ಟಿಪ್ಪರ್ ಮತ್ತು ಬೈಕ್ ನ ನಡುವೆ ಡಿಕ್ಕಿ ಯಾಗಿ ಅಂಬರೀಶ್(27)
ಸ್ಥಳದಲ್ಲಿ ಸಾವು ಸಂಭವಿಸಿ ಮತ್ತೊಬ್ಬ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದಾರೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಟಿಪ್ಪರ್ ಆಂಧ್ರದ ಕಲ್ಯಾಣ ದುರ್ಗದ ಶಾಸಕರಿಗೆ ಸೇರಿದೆ ಎನ್ನಲಾಗಿದೆ. ಮೃತರ ಕುಟುಂಬಸ್ಥರು ಪ್ರಕರಣ ದಾಖಲಿಸಲು ಪೊಲೀಸ್ ಠಾಣೆಗೆ ಹೋದಾಗ ಪ್ರಕರಣ ದಾಖಲಿಸಲು ನಿರಾಕರಿಸಿದ ಕಾರಣ ಕುಟುಂಬಸ್ಥರು ಆಕ್ರೋಶಗೊಂಡು ರಸ್ತೆ ತಡೆದು ಪ್ರತಿಭಟನೆ ಮಾಡಿದರು. ಗ್ರಾಮಾಂತರ ಪೊಲೀಸ್ ಠಾಣೆ ಸಿಪಿಐ ಗಿರೀಶ್ ರವರು ಬಂದು ಮೃತ ಕುಟುಂಬಸ್ಥರ ಮನವೊಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ವರದಿ- ಹೇಮಂತ್ ಕುಮಾರ್



















