ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಿಧಿ ಬರೆದ ಬರಹ ಅಳಿಸಿ ಛಲ ಬಿಡದೆ ಸಾಧಿಸಿದ ಸಾಧಕಿಯರ ಜೀವನಗಾಥೆ ಪುಸ್ತಕದ ರೂಪದಲ್ಲಿ ರಚಿಸಿರುವುದು ಶ್ಲಾಘನೀಯ : ಶಾಸಕ ದೊಡ್ಡನಗೌಡ ಪಾಟೀಲ್.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ನವಲಹಳ್ಳಿ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕುಷ್ಟಗಿ ಘಟಕ ಮತ್ತು ಚನ್ನಬಸನಗೌಡ ಪೊಲೀಸ್ ಪಾಟೀಲ್ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆ ಹಾಗೂ ಅಭಿನವ ಪ್ರಕಾಶನ ನವಲಹಳ್ಳಿ ಆಶ್ರಯದಲ್ಲಿ ಶನಿವಾರ ಸಂಜೆ ಉಪನ್ಯಾಸಕ ಶಿವನಗೌಡ ಪೊಲೀಸ್ ಪಾಟೀಲ್ ಬರೆದಿರುವ ಛಲ ಬಿಡದ ಸಾಧಕಿಯರು ಮತ್ತು ಅನುಭವದ ನುಡಿ ಬೆಳಕು ಎಂಬ ಶೀರ್ಷಿಕೆಯ ಎರಡು ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಶಾಸಕ ದೊಡ್ಡನಗೌಡ ಪಾಟೀಲ್ ಉದ್ಘಾಟಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಇಂತಹ ಸಂಸ್ಥೆ ಹುಟ್ಟಿಹಾಕಿ ಸಮಾಜ ಮುಖಿ ಕಾರ್ಯದ ಜೊತೆಗೆ , ದಿನ ನಿತ್ಯದ ನಮ್ಮ ಜೀವನ ಜಂಜಾಟದ ನಡುವೆ ಸಾಧಕಿಯರ ಜೀವನ ಆಧಾರಿತ ಲೇಖನ, ಅವರ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಓದುಗರಿಗೆ ನೀಡುವ ಉಪನ್ಯಾಸಕ ಹಾಗೂ ಲೇಖಕ ಶಿವನಗೌಡ ಪೊಲೀಸ್ ಪಾಟೀಲ್ ಕಾರ್ಯ ಶ್ಲಾಘನೀಯ ಎಂದು ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದರು.
ನವಲಹಳ್ಳಿ ಗ್ರಾಮದ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ಏರ್ಪಡಿಸಿದ್ದ ಛಲ ಬಿಡದ ಸಾಧಕಿಯರು ಮತ್ತು ಅನುಭವದ ನುಡಿ ಬೆಳಕು ಎರಡು ಪುಸ್ತಕ ಬಿಡುಗಡೆಯ ಕಾರ್ಯುಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಪಡೆದು ಹಲವಾರು ಕಹಿ ಘಟನೆಗಳ ನಡುವೆಯೂ ಶಿವನಗೌಡ ಪಾಟೀಲ್ ಲೇಖನ ಬರೆಯುವದು, ಕೃತಿ ಮತ್ತು ವಿವಿಧ ಪುಸ್ತಕ ಬರೆಯುವದು ಹೆಮ್ಮೆಯ ವಿಷಯ. ಕುಟುಂಬದ ಸಹಕಾರ ಮತ್ತು ಸಂಸ್ಥೆಯ ಪದಾಧಿಕಾರಿಗಳು ಸಹ ಅವರ ಬೆನ್ನಿಗೆ ನಿಂತು ಇಂತಹ ಕಾರ್ಯಕ್ರಮ ಆಯೋಜನೆಗೆ ಮುಂದಾಗಿದ್ದಾರೆ. ಜೀವನದಲ್ಲಿ ಮಹಿಳೆಯರು ಅನುಭವಿಸಿರುವ, ಅವಮಾನ, ಅಪಮಾನ, ಕಷ್ಟಗಳನ್ನು ಎದುರಿಸಿ ಸಾಧನೆ ಶಿಖರ ಏರಿದ ಘಟನೆಗಳನ್ನು ಸಂಗ್ರಹಿದ್ದು, ಸಮಾಜದಲ್ಲಿ ಓದುಗರಿಗೆ ಪ್ರೇರಣೆಯಾಗಲಿದೆ ಎಂದರು.

ಪುಸ್ತಕದ ಕುರಿತು ಗವಿಸಿದ್ದೇಶ್ವರ ಕಾಲೇಜಿನ ಪ್ರಾಧ್ಯಾಪಕರಾದ ಶರಣಬಸವ ಬಿಳೆಯಲಿ ಅವರು ಮಾತನಾಡಿ ಸೋಲನ್ನೇ ತಮ್ಮ ಮೆಟ್ಟಿಲಾಗಿಸಿಕೊಂಡು ಬದುಕಿನಲ್ಲಿ ಮೇಲೆ ಇರುವವರು ಇನ್ನೂ ಹಲವರು, ಹಲವಾರು ನ್ಯೂನತೆಗಳಿದ್ದರೂ ಲೆಕ್ಕಿಸದೆ ಅದನ್ನೆಲ್ಲಾ ಮೆಟ್ಟಿನಿಂತು ಮುಂದೆ ಸಾಗುವವರು ಸ್ಪೂರ್ತಿಯಾಗುತ್ತಾರೆ. ಚಂದದ ಬದುಕಿನಲ್ಲಿ ಎದುರಾದ ಅವಗಡಗಳನ್ನು ಎದುರಿಸಿ ನಿಂತು ಗೆಲುವು ಪಡೆಯುವುದು ಹೀಗೆ ಸಹಜ ಬದುಕಿನ ಪರೀಕ್ಷೆಯನ್ನು ನೀಡಿದಾಗಲೆಲ್ಲಾ ಮತ್ತೆ ಸುಧಾರಿಸಿಕೊಂಡು ಸೋಲಿಲ್ಲದ ಗೆಲುವಿನ ಹಾದಿಯತ್ತ ಹೆಜ್ಜೆ ಹಾಕಿದವರು ನಮ್ಮ ದೇಶದಲ್ಲಿಯೂ ಇಂತಹ ಹಲವಾರು ಸ್ಪೂರ್ತಿದಾಯಕ ವ್ಯಕ್ತಿಗಳಿದ್ದಾರೆ. ಛಲ ಮತ್ತು ದಣಿವರಿಯದ ಪ್ರಯತ್ನದಿಂದ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಈ ಪುಸ್ತಕದಲ್ಲಿನ ಸಾಧಕರೆ ಸಾಕ್ಷಿ. ಇದು ಅನೇಕ ಮಹಿಳಾ ಸಾಧಕಿಯರಿಗೆ ಪ್ರೇರಣೆಯಾಗಲಿ ಈ ಕೃತಿ ಕಾರ್ಯಕ್ಕೆ ಮತ್ತಷ್ಟು ಕೃತಿ ರಚಿಸುವ ಉತ್ಸಾಹ ತುಂಬಲೆಂದು ಶುಭ ಹಾರೈಸಿದರು.

ನಂತರ ಮುಖ್ಯ ಅತಿಥಿಸ್ಥಾನ ವಹಿಸಿದ್ದ ಅಮರೇಗೌಡ ಎ ಪಾಟೀಲ್ ವಕೀಲರು ಮಾತನಾಡಿ, ನಮ್ಮ ಗ್ರಾಮೀಣ ಪ್ರದೇಶದಲ್ಲಿ ಪೋಷಕರು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಜೊತೆಗೆ ಸಂಸ್ಕಾರ. ಸಂಸ್ಕೃತಿಯನ್ನು ಕಲಿಸಬೇಕು. ಆಧುನಿಕ ಯುಗದಲ್ಲಿ ಶಿಕ್ಷಣ ಇದ್ದರೆ ಜೀವನ ನಡೆಸಲು ಸುಲಭವಾಗಲಿದೆ. ಶಿಕ್ಷಣ ಇದ್ದರೆ ಮಾತ್ರ ನಮ್ಮ ದೇಶದ ಸಂವಿಧಾನದ ಕಾನೂನು ಅಡಿಯಲ್ಲಿ ಉದ್ಯೋಗ, ಹುದ್ದೆ ಸಿಗಲಿದೆ. ಈ ಸಂಸ್ಥೆಯು ಸಾಮಾಜಿಕ ಕಾರ್ಯಗಳ ಜೊತೆಗೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜನೆ ಮಾಡಿರುವದು ಸಂತೋಷ. ಆದ್ದರಿಂದ ಲೇಖಕ ಶಿವನಗೌಡ ಪೊ ಪಾಟೀಲ್ ಶ್ರಮ ಜೀವಿಯಾಗಿದ್ದು, ಕಸಾಪ ಸಹಕಾರದಿಂದ ಇನ್ನೂ ಹೆಚ್ಚು ಲೇಖನ, ಪುಸ್ತಕಗಳು ಹೊರ ಬರಲಿ ಎಂದರು.
ವೇದಿಕೆಯಲ್ಲಿ ಉಪನ್ಯಾಸಕ ಹಾಗೂ ಲೇಖಕ ಶಿವನಗೌಡ ಪೊ ಪಾಟೀಲ ಅವರು ಬರೆದಿರುವ ಛಲ ಬಿಡದ ಸಾಧಕಿಯರು ಮತ್ತು ಅನುಭವದ ನುಡಿ ಬೆಳಕು ಎಂಬ ಶಿರ್ಷಿಕೆಯ ಪುಸ್ತಕಗಳ ಬಿಡುಗಡೆ ಮಾಡಲಾಯಿತು.
ಕಸಾಪ ತಾಲ್ಲೂಕು ಘಟಕ ಅಧ್ಯಕ್ಷ ಲೆಂಕೆಪ್ಪ ವಾಲೇಕಾರ, ಪ್ರಗತಿಪರ ರೈತ ಡಾ. ದೇವೆಂದ್ರಪ್ಪ ಬಳೂಟಗಿ, ಹಿರಿಯ ಪತ್ರಕರ್ತ ಪ್ರಸನ್ನಕುಮಾರ ದೇಸಾಯಿ , ಜಿಪಂ ಮಾಜಿ ಸದಸ್ಯರಾದ ಕೆ.ಮಹೇಶ ,
ಕೊಪ್ಪಳ ಶ್ರೀಗವಿಸಿದ್ದೇಶ್ವರ ಮಹಾವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಶರಣಬಸಪ್ಪ ಬಿಳಿಎಲೆ ಮಾತನಾಡಿದರು.
ಮುಖಂಡ ಅಮರೇಗೌಡ ಸಿ ಪಾಟೀಲ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯ ಬಸವರಾಜ ಮ್ಯಾದರಡೊಕ್ಕಿ, ಗಂಗಮ್ಮ, ದುರಗೇಶ , ಹಂಪಮ್ಮ , ಪ್ರಮುಖರಾದ ಬಸನಗೌಡ ಎನ್ ಪಾಟೀಲ್, ಬಸವರಾಜ ಬಂಡೇರ್ ವಕೀಲರು, ದೊಡ್ಡನಗೌಡ ಜಿ ಪಾಟೀಲ್. ಹಿರೇಮುದಕಪ್ಪ ಬಂಡೇರ್ , ಶಂಕ್ರಪ್ಪ ಗೆದಗೇರಿ, ನಿಂಗಪ್ಪ ಬಾರಕೇರ,ಬಸವರಾಜ್ ಕಡೆಕೊಪ್ಪ, ಸಂಗಯ್ಯ ಹಿರೇಮಠ. ಪರಸಪ್ಪ ಚಿಟಗಿ, ನಿಂಗಪ್ಪ ಬಾರಕೇರಾ.ಗ್ರಾಮದ ದಳಪತಿಗಳಾದ ದೊಡ್ಡನಗೌಡ ಸಿ ಪೋ ಪಾಟೀಲ್ , ಶರಣಬಸನಗೌಡ ಸಿ ಪೋ ಪಾಟೀಲ್ ಚನ್ನಬಸನಗೌಡ ಪೊಲೀಸ್ ಪಾಟೀಲ್ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ದೊಡ್ಡಬಸವ ಪೊ ಪಾಟೀಲ ಮತ್ತು ಕಾರ್ಯದರ್ಶಿಗಳಾದ ಲೇಖಕ, ಉಪನ್ಯಾಸಕ ಶಿವನಗೌಡ ಪೊ ಪಾಟೀಲ್ ಮತ್ತು ನವಲಹಳ್ಳಿ ಗ್ರಾಮಸ್ಥರು ಇದ್ದರು.
ಶಿಕ್ಷಕ ರಾಜೇಸಾಬ ಕೋಳೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮೌನೇಶ್ ಸ್ವಾಗತ, ಶಶಿಕುಮಾರ ಉಳ್ಳಾಗಡ್ಡಿ, ಮುತ್ತು ರಾಠೋಡ ನಿರೂಪಿಸಿದರು. ನಂದಿನಿ ಪಾಟೀಲ್ ಮತ್ತು ದೀಪ ಪಾಟೀಲ್ ಪ್ರಾರ್ಥನೆಗೈದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!