
ಬಳ್ಳಾರಿ / ಕಂಪ್ಲಿ : ಇಲ್ಲಿನ ವೀರಶೈವ ಭವನದಲ್ಲಿ ಏರ್ಪಡಿಸಿದ್ದ ವಾರ್ಷಿಕೋತ್ಸವ ಪ್ರೇಕ್ಷಕರ ಮನಸೂರೆಗೊಳಿಸಿತು.
ದೈವದ ಭಾಗವಾದ ಕಾಂತಾರಾ ಚಿತ್ರ ಆಗಿದ್ದು, ಈ ಚಿತ್ರದ ಹಾಡಿನ ಒಂದು ವಿನೂತನ ಪ್ರಯತ್ನವನ್ನು ಉತ್ತರ ಕರ್ನಾಟಕದ ಭಾಗದ ಕಂಪ್ಲಿ ಪಟ್ಟಣದ ಡ್ರೀಮ್ ವರ್ಲ್ಡ್ 4 ಶಾಲೆ ಕಂಪ್ಲಿ , ಶಾಲಾ ವಾರ್ಷಿಕೋತ್ಸವದ ಸಮಾರಂಭದಲ್ಲಿ ಐದನೇ ತರಗತಿಯ ವಿದ್ಯಾರ್ಥಿಯಾದ ಎಂ.ಆರ್ಯನ ಮತ್ತು ತಂಡದವರಿಂದ ಕಾಂತಾರ ಚಿತ್ರದ ಹಾಡಿನ ಒಂದು ವಿನೂತನ ನೃತ್ಯ ಪ್ರೇಕ್ಷಕರ ಮನಸೂರೆಗೊಂಡಿತು.
ದೈವದ ಆಶೀರ್ವಾದದೊಂದಿಗೆ ಮೂಡಿ ಬಂದ ಕಾಂತಾರ ಚಿತ್ರ, ನಿಜಕ್ಕೂ ಒಂದು ಅಭೂತಪೂರ್ವ, ಅವಿಸ್ಮರಣೀಯ ಕಥಾನಕ. ಹಾಗೂ ಕಲೆ ಸಂಸ್ಕೃತಿ ಮತ್ತು ದೈವತ್ವದ ಸಮ್ಮಿಶ್ರಣ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ, ಪಂಜುರ್ಲಿ, ಗುಳಿಗ ದೈವಗಳ ಆಶೀರ್ವಾದ ಎಂದಿಗೂ ಎಲ್ಲರ ಮೇಲಿರಲಿ ಎನ್ನುವ ದೈವಿಕ ನಂಬಿಕೆ ಇರಲಿ.
ಮಕ್ಕಳಿಗೆ ನೃತ್ಯ ಅವರಲ್ಲಿ ಆತ್ಮವಿಶ್ವಾಸ ಮೂಡಿಸುತ್ತಿರುವುದು ಶ್ಲಾಘನೀಯವಾಗಿದೆ.
ವರದಿ : ಜಿಲಾನಸಾಬ್ ಬಡಿಗೇರ್



















