
ಬಳ್ಳಾರಿ / ಕಂಪ್ಲಿ : ಕಂಪ್ಲಿ: ಪಟ್ಟಣದ 4ನೇ ವಾರ್ಡ್ ಅಂಬೇಡ್ಕರ್ ಪಟ್ಟಣದ ಕೆಂಚಮ್ಮ ದೇವಿ ದೇವಸ್ಥಾನದ ಬಳಿ ಕಂಪ್ಲಿ ಪೊಲೀಸ್ ಠಾಣೆ ವತಿಯಿಂದ ದಲಿತ ಸಭೆ ಹಾಗೂ ಜಾಗೃತಿ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ರವರ ಆಶಯಗಳು ಎಲ್ಲಾ ಸಮುದಾಯಗಳಿಗೆ ಮಾರ್ಗದರ್ಶಿಯಾಗಿದ್ದು, ಅವರು ಸಂವಿಧಾನದ ಮೂಲಕ ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಿದ್ದಾರೆ ಎಂದು ತಿಳಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಪಿ.ಎಸ್.ಐ ಅವಿನಾಶ್ ಕಾಂಬ್ಳೆ ಅವರು ದಲಿತ ಸಭೆಯ ಉದ್ದೇಶ, ಕಾನೂನು ಅರಿವು ಹಾಗೂ ಪೋಕ್ಸೋ ಕಾಯ್ದೆಯ ಮಹತ್ವ ಕುರಿತು ವಿವರಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್



















