
ಬಳ್ಳಾರಿ / ಕಂಪ್ಲಿ : ಸಮೀಪದ ಮಣ್ಣೂರು ಗ್ರಾಮದಲ್ಲಿ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಜಯಂತೋತ್ಸವ ಬುಧವಾರ ಅದ್ದೂರಿಯಾಗಿ ಜರುಗಿತು.
ತುಂಗಭದ್ರಾ ನದಿಯಿಂದ ಕುಂಭ ಮೆರವಣಿಗೆಯಲ್ಲಿ ಮಹಿಳೆಯರು ತುಂಗಭದ್ರಾ ನದಿಯಿಂದ ಪವಿತ್ರವಾದ ನೀರನ್ನು ಕುಂಭಗಳಲ್ಲಿ (ಕಲಶಗಳಲ್ಲಿ) ತುಂಬಿಕೊಂಡು ಸಕಲ ಕಳಸ ಕನ್ನಡಿಯೊಂದಿಗೆ ವಾದ್ಯಗೋಷ್ಠಿಗಳೊಂದಿಗೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಾಗಿದರು.
ಸಮಾಜದಲ್ಲಿ ಶರಣರ ವೈಚಾರಿಕತೆ ಮತ್ತು ಸಮಾನತೆಯ ಸಂದೇಶವನ್ನು ಪಸರಿಸುವ ಉದ್ದೇಶದಿಂದ ಶರಣರ ವಚನಗಳನ್ನು ಆಧರಿಸಿದ ಭಜನಾ ಪದಗಳು ಕಾರ್ಯಕ್ರಮಗಳು ಗ್ರಾಮಗಳಲ್ಲಿ ರಾತ್ರಿಯಿಡೀ ಜರುಗಿದವು.
ಈ ಸಂದರ್ಭದಲ್ಲಿ ಸಮಾಜ ಬಾಂಧವರು ಸಕಲ ಭಕ್ತಾದಿಗಳು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















