
ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಮೂರು ದಿನಗಳ ಕಾಲ ಬೊಂಬೈ ನಾಡಿನ ಗಂಗೋತ್ಸವ ಎಂಬ ವೈವಿಧ್ಯಮಯ ವಿನೂತನ ವಿಸಿಷ್ಟ ವೈಭವದ ಸಂಸ್ಕೃತಿಕ ಕಾರ್ಯಕ್ರಮವನ್ನು ಚನ್ನಪಟ್ಟಣದ ಜನಪ್ರಿಯ ಶಾಸಕ ಮತ್ತು ಚಲನಚಿತ್ರ ನಟ
ಶ್ರೀ ಸಿ ಪಿ ಯೋಗೇಶ್ವರ್ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ಹಮ್ಮಿಕೊಂಡು ನಡೆಸಲಾಯಿತು.
ನೂರಾರು ಜಾನಪದ ಕಲಾವಿದರಿ0ದ
ಜನಪದ ಕಲಾ ಮೇಳ ಮತ್ತು ಬೊಂಬೆ ನಾಡಿನ ಗಂಗೋತ್ಸವದಲ್ಲಿ ಜಾನಪದ ಸಂಭ್ರಮ
ನಡೆಸಿ ಕಲಾ ರಸಿಕರನ್ನ ಆಕರ್ಷಿಸಿದವು.
ಕರ್ನಾಟಕ ಸರ್ಕಾರದ ಜಾನಪದ ಜಾತ್ರೆಯ ನಿರ್ದೇಶಕ ಕುಂತೂರ ಕುಮಾರ್ ಅವರ ನೇತೃತ್ವದಲ್ಲಿ
ಚರಿತ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಸಹಯೋಗದಲ್ಲಿ ಮೊದಲ ಭಾರಿಗೆ ದಾಖಲೆಯ
ನೂರಾರು ಜನಪದ ಕಲಾವಿದರಿ೦ದ ವೈವಿಧ್ಯಮಯ ಜನಪದ ಶೈಲಿಯ ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣದ ಬೊಂಬೆ ನಾಡಿನ ಗಂಗೋತ್ಸವದಲ್ಲಿ ಜಾನಪದ ಸಂಭ್ರಮಕ್ಕೆ ಸಾಕ್ಷಿಯಾಯಿತು.
ಜನಪ್ರಿಯ ಶಾಸಕ ಸಿ ಪಿ ಯೋಗೇಶ್ವರ್ ಅವರು ಜಾನಪದ ಸಂಭ್ರಮಕ್ಕೆ ಖುದ್ದು ವೇದಿಕೆಯಲ್ಲಿ ದಂಪತಿ ಸಮೇತ ಹಾಜರಿದ್ದು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿ ಬೊಂಬೆನಾಡಿನ ಗಂಗೋತ್ಸವದಲ್ಲಿ ಜಾನಪದ ಸಂಭ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಚನ್ನಪಟ್ಟಣದ ಬೊಂಬೆಗಳಿಗೆ ಐತಿಹಾಸಿಕ ಮನ್ನಣೆ ದೊರೆಯಬೇಕು ,ಚನ್ನಪಟ್ಟಣದ ಸಾಂಸ್ಕೃತಿಕ ಪರಂಪರೆ ನಿರಂತರವಾಗಿ ಮುಂದುವರಿಯಬೇಕೆಂದು ಶುಭ ಹಾರೈಸಿ ಚರಿತ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಸ್ಥೆಯು ಬೊಂಬೆ ನಾಡಿನ ಗಂಗೋತ್ಸವದಲ್ಲಿ ಜನಪದ ಸಂಭ್ರಮ ಕಾರ್ಯಕ್ರಮವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸಿ ವೈವಿಧ್ಯಮಯ ಜನಪದ ಕಾರ್ಯಕ್ರಮಗಳ ಅನಾವರಣವನ್ನ ಮಾಡಿರುವುದು ಅಭಿನಂದನೀಯ ವೆಂದರು .
ಅವರು ಮಾತನಾಡುತ್ತಾ ಜಾನಪದ ಕಲೆ ಎಲ್ಲಾ ಕಲೆಗಳ ತಾಯಿಬೇರು ಜನಪದ ಅಂದ್ರೆ ನಮ್ ತಾಯಿ
ಜನಪದ ಅಂದ್ರೆ ನಮ್ಮ ಸಂಸ್ಕೃತಿ, ಜಾನಪದ ಸಂಸ್ಕೃತಿ ಒಳಗೆ ಆಧ್ಯಾತ್ಮಿಕ ಅಡಗಿದೆ ಬೊಂಬೆ ನಾಡಿನ ಗಂಗೋತ್ಸವದಲ್ಲಿ ಜನಪದ ಸಂಭ್ರಮದ ಮೂಲಕ
ಚರಿತ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಸ್ಥೆ ರಾಜ್ಯದ ಮೂಲೆ ಮೂಲೆಗಳಿಂದ
ನೂರಾರು ಜನಪದ ಕಲಾವಿದರನ್ನು ಕರೆಸಿ ಈ ಕಾರ್ಯಕ್ರಮ ಆಯೋಜಿಸಿದ ಕೀರ್ತಿ ಸಿ ಪಿ ಯೋಗೇಶ್ವರ್ ಅವರದು ಎಂಬುದು ಪ್ರೇಕ್ಷಕರ ಅಭಿಮತವಾಗಿತ್ತು.
ಜಾನಪದ ಸಂಭ್ರಮದಲ್ಲಿ ಜಾನಪದ ನೃತ್ಯ ವೈಭವ
ಮತ್ತು ಕುಂತೂರ್ ಕುಮಾರ್ ಅವರ
ತಮಟೆ ಜುಗಲ ಬಂದಿ ನೆರೆಸಿದ್ದ ಕಲಾಸಕ್ತರಿಗೆ ತಮಟೆ ಬೀಟ್ಸ್ ಗಳು ರೋಮಾಂಚನಗೊಳಿಸಿದವು
ಈ ಜನಪದ ಸಂಭ್ರಮವು ನೆರೆದಿದ್ದ ಸಾವಿರಾರು ಪ್ರೇಕ್ಷಕರ ಮನಸ್ಸನ್ನು ಸೂರೆಗೊಂಡು ಕುಣಿಯುವಂತೆ ಮಾಡಿ ಜನಮನ್ನಣೆ ಗಳಿಸಿತು.
ಇನ್ನುಳಿದ ವೈವಿಧ್ಯಮಯ ಜನಪದ ಕಲಾತಂಡಗಳ ಮಿಶ್ರಣದ ಜಾನಪದ ಕಲಾ ಮೇಳದ ಸೊಬಗು ನರೆದಿದ್ದ ಸಹಸ್ರಾರು ಪೇಕ್ಷಕರ ಮನಸ್ಸನ್ನು ಸೂರೆಗೊಂಡವು.
ಅಂತರಾಷ್ಟ್ರೀಯ ಕಲಾವಿದ ಶ್ರೀ ತಮಟೆ ನಾಗರಾಜ್ ಅವರ ಜಾನಪದ ಶೈಲಿಯ ನಿರೂಪಣೆ ನೆರೆದಿದ್ದ ಸಾವಿರಾರು ಪ್ರೇಕ್ಷಕರಿಗೆ ಖುಷಿ ನೀಡಿದವು
ಚನ್ನಪಟ್ಟಣದ ಬೊಂಬೆ ನಾಡಿನ ಗಂಗೋತ್ಸವದ ಜನಪದ ಸಂಭ್ರಮ ಯಶಸ್ವಿಯಾಗಿ ನಡೆಯಿತು.
- ಕರುನಾಡ ಕಂದ ಪತ್ರಿಕೆ



















