ಹಿಂದೂ ಧರ್ಮ ಒಂದು ಧರ್ಮ ಮಾತ್ರವಲ್ಲ. ಅದು ಜನರ ಒಡನಾಟ, ಸಂಸ್ಕೃತಿ ಉಳಿವು, ಎಲ್ಲರಲ್ಲಿ ಹಿಂದೂ ಧರ್ಮದ ಕುರಿತಾದ ಜನ ಜಾಗೃತಿ ಮೂಡಿಸುವ ಉದ್ದೇಶಕ್ಕಾಗಿ ಜನವರಿ 31, ಶನಿವಾರದಂದು ಹಿಂದೂ ಸಮ್ಮೇಳನ ಆಯೋಜಿಸಲಾಗಿದೆ ಎಂದು ಪನ್ನಾಲಾಲ್ ಪಟೇಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗುರುಮಠಕಲ್: ಹಿಂದೂ ಸಮ್ಮೇಳನ ಆಯೋಜನಾ ಸಮಿತಿ ಅಧ್ಯಕ್ಷ ಪನ್ನಾಲಾಲ್ ಪಟೇಲ್ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಹಿಂದೂ ಧರ್ಮ ಒಂದು ಧರ್ಮ ಮಾತ್ರವಲ್ಲ. ಅದು ಜನರ ಒಡನಾಟ, ಸಂಸ್ಕೃತಿ ಉಳಿವು, ಎಲ್ಲರಲ್ಲಿ ಹಿಂದೂ ಧರ್ಮದ ಕುರಿತಾದ ಜನ ಜಾಗೃತಿ ಮೂಡಿಸುವ ಉದ್ದೇಶಕ್ಕಾಗಿ ಜನವರಿ 31, ಶನಿವಾರದಂದು ಹಿಂದೂ ಸಮ್ಮೇಳನ ಆಯೋಜಿಸಲಾಗಿದೆ ಹೇಳಿದರು.
ಮಧ್ಯಾಹ್ನ 3 ಗಂಟೆಗೆ ನಗರೇಶ್ವರ ದೇವಸ್ಥಾನದಿಂದ ಶೋಭಾಯಾತ್ರೆ ಆರಂಭಗೊಳ್ಳುವದು ಡೊಳ್ಳು ಕುಣಿತ, ಮಕ್ಕಳ ಸಾಂಸ್ಕೃತಿಕ ನೃತ್ಯಗಳೊಂದಿಗೆ ಭಾರತ ಮಾತೆ ಮತ್ತು ಮಹಾನ್ ವ್ಯಕ್ತಿಗಳ ಭಾವಚಿತ್ರಗಳೊಂದಿಗೆ ಶೋಭಯಾತ್ರೆ ಜರುಗುವದು ಈ ಶೋಭಾಯಾತ್ರೆಯಲ್ಲಿ ಮಠಾಧೀಶರು, ಸಮಾಜ ಮುಖಂಡರು, ಮಹಿಳೆಯರು, ಮಕ್ಕಳು ಪಾಲ್ಗೊಳ್ಳುತ್ತಾರೆ ಈ ಶೋಭಾಯಾತ್ರೆ ರಾಮನಗರದಲ್ಲಿ ಸಮಾಪ್ತಿಗೊಳ್ಳುತ್ತದೆ ಎಂದು ಹೇಳಿದರು.
ಶೋಭಾಯಾತ್ರೆ ನಂತರ ವೇದಿಕೆ ಕಾರ್ಯಕ್ರಮ ಜರುಗುವದು ವೇದಿಕೆಯ ಸಾನಿಧ್ಯ ಮಲ್ಲಿಕಾರ್ಜುನ ಸ್ವಾಮಿ ಗುರುಗಳು, ಜಗದ್ಗಿರಿ ಬೆಟ್ಟ, ವಕ್ತಾರರಾಗಿ ಮಲ್ಲಿಕಾರ್ಜುನ ಬಾಳಿಕಾಯಿ, ಭಾಗವಹಿಸುತ್ತಾರೆ ಎಂದು ಸಮ್ಮೇಳನದ ಉಪಾಧ್ಯಕ್ಷ ದೊಡ್ಲಾ ಪಂಡರಿ ತಿಳಿಸಿದರು.
ಮುಂದುವರೆಸಿ ಸಮ್ಮೇಳನದ ಶೋಭಾಯಾತ್ರೆಯಲ್ಲಿ 2,000 ಜನರು ಭಾಗವಹಿಸುವ ಸಾಧ್ಯತೆ ಇದ್ದು ಕಾರ್ಯಕ್ರಮದ ತದ ನಂತರ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಸುದ್ದಿ ಗೋಷ್ಠಿಯಲ್ಲಿ ಬಸ್ಸಪ್ಪ ಸಂಜನೊಳ, ಶ್ರೀನಿವಾಸ ಯಾದವ್, ಮಲ್ಲಿಕಾರ್ಜುನ ಹಿರೇಮಠ, ಸುಧೀರ್ ತಿವಾರಿ, ಶಿವಾನಂದ ಬೂದಿ, ಗುರುರಾಜ್ ಜೋಷಿ, ಮೋಹನ್ ಬುರಬುರೆ, ಕಿಶೋರ್ ಢಗೆ, ನರಸಿಮುಲು ಗಂಗನೊಳ, ಪ್ರವೀಣ್ ಪಟೇಲ್ ಭಾಗವಹಿಸಿದರು.
ವರದಿ: ಜೆ. ಎಸ್. ಭೂಮಾ



















