ನನ್ನ ತವರೂರಿನ ಮುಕುಟಮಣಿ
ಅಕ್ಷರ ಸಾಮ್ರಾಜ್ಯದ ಜ್ಞಾನದ ಖಣಿ
ಆಧ್ಯಾತ್ಮ ಸಾಹಿತ್ಯದ ದಿನಮಣಿ
ಕನ್ನಡ ಮರಾಠಿಗರ ಮಣಿರತ್ನ ನೀ
ಕವನಗಳಿಗೆ ಮುತ್ತಿನ ನೀರಿನ ಎರಕ
ಹೊಯ್ದ ಸಾಧನಕೇರಿಯ ಸಾಧಕ
ಕವನ ಕೃತಿಗಳ ರಚಿಸುವ ಕಾಯಕ
ಕಾಲೇಜುಗಳಲಿ ಪ್ರಿಯ ಬೋಧಕ
ಬಡವ ಬಡವಿ ವೀಣೆ ವೈಣಿಕನಾಗಿ
ಒಲವಿನ ಉಯ್ಯಾಲೆಯಲಿ ತೂಗಿ
ಸಖಿಗೀತೆ ಮುಗಿಲಮಲ್ಲಿಗೆಯಾಗಿ
ಹೃದಯ ಸಮುದ್ರದಲಿ ಈಜಾಡಿದೆ
ಧಾರವಾಡದ ಭಾಷೆಯ ಸೊಗಡು
ಅಂಬಿಕಾತನಯದತ್ತ ನಾಮ ಬೆಡಗು
ಜ್ಞಾನಪೀಠಪ್ರಶಸ್ತಿ ನಾಕುತಂತಿ ಮೆರಗು
ಕನ್ನಡಿಗರ ಅಭಿಮಾನಕೆ ನೀ ಬೆರಗು
- ಅನ್ನಪೂರ್ಣ ಸಕ್ರೋಜಿ, ಪುಣೆ




















