
ಲೇಖನಿ ಹಿಡಿದು ಬರವಣಿಗೆಯ ಬಲವನ್ನು ಅಸ್ತ್ರವಾಗಿ ಬಳಸುವ ಪತ್ರಕರ್ತರಿಗಾಗಿ ರಾಜ್ಯಮಟ್ಟದ ಪತ್ರಕರ್ತರ ವಿಚಾರ ಸಂಕಿರಣ ಮತ್ತು ರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭ.

ಉತ್ತರ ಕನ್ನಡ ಜಿಲ್ಲೆಯ ತಾಲ್ಲೂಕು ಕೇಂದ್ರ ಭಟ್ಕಳದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ವತಿಯಿಂದ ಏರ್ಪಡಿಸಿದ್ದ ವಿಚಾರ ಸಂಕಿರಣ ಮತ್ತು ರಾಜ್ಯಪ್ರಶಸ್ತಿ ಪ್ರಧಾನ ಸಮಾರಂಭವು ಅದ್ಭುತವಾಗಿ ವಿಜೃಂಭಣೆಯಿಂದ ಜರುಗಿತು. ರಾಜ್ಯದ ಮೂಲೆ ಮೂಲೆಗಳಿಂದ ಪತ್ರಕರ್ತರು ಪತ್ರಕರ್ತರ ಧ್ವನಿಯನ್ನು ಶಕ್ತಿಯಾಗಿ ಮಾರ್ಪಡಿಸಿ ಉತ್ತರ ಕನ್ನಡ ಜಿಲ್ಲೆಯ ಮಲ್ಲಿಗೆ ನಗರದಲ್ಲಿ ಬಂಗ್ಲೆ ಮಲ್ಲಿಕಾರ್ಜುನ ರವರಿಗೆ ಶಕ್ತಿಯ ಸುವಾಸನೆಯೊಂದಿಗೆ ಸ್ವಾಗತಿಸುತ್ತಾ ಅವರಿಗೆ ಉಡುಗೊರೆಯ ಲೇಖನಿಗೆ ಆಭರಣದಂತೆ ಮಾರ್ಪಟ್ಟು ಬೃಹತ್ ಶಕ್ತಿಯಾಗಿ ಕಾರ್ಯಕ್ರಮವು ಯಶಸ್ವಿಯನ್ನು ಪಡೆಯಿತು.
ಮಲ್ಲಿಗೆ ನಗರದ ಹೇಮಾಪುರ ಮಹಾಪೀಠ ಗುರುಗಳಾದ ಶ್ರೀ ಶ್ರೀ ಶ್ರೀ ಪರಮಪೂಜ್ಯ ಮಾರುತಿ ಗುರೂಜಿಯ ಮಾರ್ಗದರ್ಶನದಲ್ಲಿ ಕಾರ್ಯಕ್ರಮವನ್ನು ಶ್ರೀ ಮಾನ್ಯ ಲೋಕಾಯುಕ್ತರಾದ ಸಂತೋಷ ಹೆಗಡೆ ಮತ್ತು ಮಾನ್ಯ ಶ್ರೀ ಮಂಕಾಳ ಎಸ್ ವೈದ್ಯ ಉಸ್ತುವಾರಿ ಸಚಿವರು ಉದ್ಘಾಟನೆ ಮಾಡಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಂತೋಷದಡಿಯವರು ವಿದ್ಯಾರ್ಥಿಗಳು ದೇಶದ ಸ್ಪೂರ್ತಿದಾಯಕ ಆಲೋಚನೆಗಳೊಂದಿಗೆ ಉತ್ತಮ ಶಕ್ತಿಯಾಗಿ ದೇಶಕ್ಕೆ ಒಳ್ಳೆಯ ಹೆಸರನ್ನು ಗಳಿಸಿ ಕೊಡಬೇಕು ವಿದ್ಯಾರ್ಥಿಗಳು ಮುಂದಿನ ಪೀಳಿಗೆಗೆ ಮಾರ್ಗದರ್ಶಕರಾಗುವಂತೆ ನ್ಯಾಯ ಮತ್ತು ನೈಜತೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಗುರುವಿಗೆ ಒಳ್ಳೆಯ ಶಿಷ್ಯನಾಗಿ ತಂದೆಗೆ ಮಗುನಾಗಿ ನಾಡಿಗೆ ಉತ್ತಮ ಪ್ರಜೆಯಾಗಿ ಬದುಕಬೇಕು ಜೀವನದಲ್ಲಿ ಹಣಕ್ಕಾಗಿ ದುರಾಸೆ ಪಡಬಾರದು ನಮ್ಮಲ್ಲಿ ಇರುವಷ್ಟಕ್ಕೆ ನೆಮ್ಮದಿಯನ್ನು ಕಂಡುಕೊಂಡರೆ ಜೀವನ ನಡೆಸುವುದು ಉತ್ತಮ ವಾಗುತ್ತದೆ ಆದ್ದರಿಂದ ವಿದ್ಯಾರ್ಥಿಗಳು ಶ್ರದ್ಧೆಯಿಂದ ಕಲಿತು ಸಮಾಜಕ್ಕೆ ಉತ್ತಮ ಕಾರ್ಯಗಳನ್ನು ಮಾಡಬೇಕು ಎಂದು ಕಿವಿ ಮಾತು ಹಿತವಚನಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಪರಮ ಪೂಜ್ಯರು ಮಾತನಾಡಿ ಮಕ್ಕಳು ಮತ್ತು ಪತ್ರಕರ್ತರ ಜ್ಞಾನ ಮತ್ತು ವಿದ್ಯೆ ಅವರ ಪುಸ್ತಕವಾಗಿ ಜೀವನಕ್ಕೆ ಕನ್ನಡಿಯಂತೆ. ಪತ್ರಕರ್ತರು ಕತ್ತಲನ್ನು ಕಳೆದು ಬೆಳಕಿನೆಡೆಗೆ ಸಾಗುವ ದಾರಿ ಮಾರ್ಗಸೂಚಿಗಳನ್ನು ಸಮಾಜಕ್ಕೆ ತೋರುವ ಶಕ್ತಿಯಾಗಬೇಕು. ಹಣದ ಹಿಂದೆ ಬೀಳಬಾರದು ವಿದ್ಯೆ ಇದ್ದರೆ ಹಣವು ತಾನಾಗಿ ಬಂದು ಪತ್ರಕರ್ತನ ಆಸೆ ಅವನ ಅನುಕೂಲಗಳನ್ನು ಈಡೇರಿಸುತ್ತದೆ ಆದ್ದರಿಂದ ವಿದ್ಯಾರ್ಥಿಗಳು ಮತ್ತು ಪತ್ರಕರ್ತರು ದುರಾಸೆಯನ್ನು ಬಿಡಬೇಕು ವಿದ್ಯಾರ್ಥಿಯು ವಿದ್ಯೆಗೆ ಬೆಲೆ ಕೊಟ್ಟರೆ ಅವನಿಗೆ ಜೀವನದಲ್ಲಿ ಹಣದ ಬೆಲೆಯು ವ್ಯಕ್ತಿಯ ಬೆಲೆಯು ತಿಳಿಯುತ್ತದೆ ಎಂದರು. ಭಟ್ಕಳ ತಾಲೂಕು ಘಟಕದ ಅಧ್ಯಕ್ಷರಾದ ಶಂಕರ್ ನಾಯಕ್ ಅವರು ಮಾತನಾಡಿ ಪತ್ರಕರ್ತರದ ನಾವು ಸರ್ಕಾರದ ಸರಿ ತಪ್ಪುಗಳನ್ನು ಸಮಾಜಕ್ಕೆ ನಾಡಿನ ಜನತೆಗೆ ಪಾರದರ್ಶಕವಾಗಿ ತೋರಿಸುವ ಮೂಲಕ ಸಮಾಜವನ್ನು ಒಳ್ಳೆಯ ದಾರಿಯಲ್ಲಿ ಸಾಗುವಂತೆ ಮಾಡುವ ಶಕ್ತಿ ಪ್ರತಿಯೊಬ್ಬರ ಪತ್ರಕರ್ತನ ಲೇಖನಿಯಲ್ಲಿರುತ್ತದೆ ಆದ್ದರಿಂದ ನಾವು ಸಮಾಜದ ನಾಲ್ಕನೇ ಭಾಗವಾಗಿ ಸಮಾಜಕ್ಕೆ ಒಳ್ಳೆಯ ಕಾರ್ಯ ಗಳನ್ನು ಮಾಡಬೇಕು ಎಂದು ಪತ್ರಕರ್ತರಲ್ಲಿ ಮನವಿಯ ರೂಪದಲ್ಲಿ ಹೇಳಿದರು. ಇದೇ ಸಂದರ್ಭದಲ್ಲಿ ಪತ್ರಕರ್ತರ ಧ್ವನಿ ಸಂಘಟನೆಯ ಸೃಷ್ಟಿಕರ್ತ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದಬಂಗ್ಲೆ ಮಲ್ಲಿಕಾರ್ಜುನರವರು ರಾಜ್ಯಾದ್ಯಂತ ಪತ್ರಕರ್ತರನ್ನು ತಮ್ಮ ಶ್ರಮದಿಂದ ಉತ್ತಮ ಸಮಾಜಕ್ಕೆ ಪತ್ರಕರ್ತನ ಅವಶ್ಯಕತೆ ಇದೆ ಆ ಕಾರಣಕ್ಕಾಗಿ ಧ್ವನಿ ಎಂಬ ಸಂಘಟನೆಯ ಮೂಲಕ ರಾಜ್ಯದ ಮೂಲೆ ಮೂಲೆಗಳಿಂದ ಪತ್ರಕರ್ತರನ್ನು ಕರೆದು ವಿಚಾರಣ ಸಂಕಿರಣ ಮತ್ತು ರಾಜ್ಯ ಪ್ರಶಸ್ತಿ ಪ್ರಧಾನ ಮಾಡಿ ಪತ್ರಕರ್ತನ ಜೀವನದಲ್ಲಿ ಅವನ ಸೇವೆಗಾಗಿ ಉಚಿತ ಬಸ್ ಪಾಸ್, ಸುರಕ್ಷತಾ ಯೋಜನೆ , ಮೂಲಭೂತ ಸೌಕರ್ಯಗಳ ಪ್ರತಿಯೊಬ್ಬ ಪತ್ರಕರ್ತನಿಗೂ ದೊರೆಯಬೇಕು ಪತ್ರಕರ್ತನು ಸರ್ಕಾರದ ಸರಿ ತಪ್ಪುಗಳನ್ನು ನೈಜ ರೀತಿಯಲ್ಲಿ ಪ್ರಕಟಿಸಿ ರಾಜ್ಯಕ್ಕೆ ಪತ್ರಕರ್ತರು ಬಂಗಾರದ ಆಭರಣದಂತೆ ಹೊಳೆಯುವ ದೀಪವಾಗಬೇಕು ಒಳ್ಳೆಯ ಸಮಾಜಕ್ಕಾಗಿ ಉತ್ತಮ ಕೆಲಸಗಳನ್ನು ಮಾಡುತ್ತಾ ನಾವು ಸಮಾಜದಲ್ಲಿ ನೂರು ವರುಷ ಬದುಕುವುದು ಮುಖ್ಯವಲ್ಲ ಮೂರು ವರ್ಷವಿದ್ದರೂ ನ್ಯಾಯಯುತವಾಗಿ ಸಮಾಜಕ್ಕೆ ಉತ್ತಮ ಪ್ರಜೆಯಾಗಿ ಬದುಕು ನಡೆಸಬೇಕು ಎಂದು ಸಂದೇಶ ತಿಳಿಸಿದರು.
ಭ್ರಷ್ಟಾಚಾರದಲ್ಲಿ ಮುಳುಗಿದ ಒಬ್ಬ ರಾಜಕಾರಣಿ ಆಗಲಿ ಪತ್ರಕರ್ತನಾಗಲಿ ನೂರು ಜನ ಭಯೋತ್ಪಾದಕರಿಗೆ ಸಮ. ಆ ರೀತಿ ಆಗಬಾರದು ಪತ್ರಕರ್ತ ಎಂದು ಪತ್ರಕರ್ತನ ಜ್ಞಾನ ಬುದ್ದಿಗೆ ಲೇಖನಿಯ ಶಾಹಿಯಿಂದ ಹೊಳೆಯುವ ಶಕ್ತಿಯಾಗಬೇಕು ಎಂದು ಧ್ವನಿಯನ್ನು ಬೃಹತ್ ಮರವಾಗಲು ಪ್ರತಿಯೊಬ್ಬ ಪತ್ರಕರ್ತ ಸಾಧ್ಯವಾದಷ್ಟು ಒಳ್ಳೆಯದನ್ನು ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀ ಶಿವಾನಂದ ನಾಯ್ಕ್ , ಶ್ರೀ ಶಂಕರ್ ನಾಯ್ಕ , ಶ್ರೀ ಇನಾಯತುಲ್ಲಾ ಶಭಾಂಧ್ರಿ, ನಾಗೇಂದ್ರ ನಾಯ್ಕ್, ಮಂಜುನಾಥ್ ಮಾಡ್ಯಾಳ, ಹಿರಿಯ ಪತ್ರಕರ್ತರಾದ ಜಗಳೂರು ಲಕ್ಷ್ಮಣ್ ರಾವ್, ಶ್ರೀ ರಾಮದಾಸ ಪ್ರಭು ಶ್ರೀ ನಾಗಯಕ್ಷ ಸಂಸ್ಥಾನ,ಈಶ್ವರ್ ಮಲ್ಪೆ,ಡಾ. ಬಿ ಎನ್ ಮೋಹನ್ ಕುಮಾರ್,ಜಿಲ್ಲೆಯ ಪತ್ರಕರ್ತರಾದ ಬಿಜಿ ಸಾಗರ್ ಹನುಮಂತರಾಯಪ್ಪ ಡಿ, ಸುರೇಶ್ ಎನ್ ಯು, ನರಸಿಂಹಮೂರ್ತಿ ವಿಕೆ, ಪ್ರಸನ್ನ ಕುಮಾರ ಎಸ್,ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ : ಪ್ರಸನ್ನಕುಮಾರ್. ಎಸ್ ಕೊರಟಗೆರೆ




















