
ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಅಶೋಕ ಕುಮಾರ ಅವರು ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ( Central University of Karnataka, Kalaburagi ) ಸಹ ಪ್ರಾಧ್ಯಾಪಕರಾಗಿ ಇಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಇವರು ಕಳೆದ ಎಂಟು ವರ್ಷಗಳಿಂದ ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರದು ಯಾದಗಿರಿ ಜಿಲ್ಲೆಯ ಸುರುಪರು ತಾಲ್ಲೂಕಿನ ರಾಜನಕೋಳೂರು ತಾಂಡಾ ಗ್ರಾಮ. ಇವರು ತಮ್ಮ ಪದವಿ ಶಿಕ್ಷಣವನ್ನು ಧಾರವಾಡದ ಜೆ. ಎಸ್. ಎಸ್ ಕಾಲೇಜಿನಲ್ಲಿ ಮುಗಿಸಿದ್ದಾರೆ. ಭೂಗೋಳಶಾಸ್ತ್ರದಲ್ಲಿ ಸ್ನಾತ್ತಕೋತರ (ಎಂ.ಎ) ಪದವಿ, ಎಂ.ಫಿಲ್ ಮತ್ತು ಪಿ. ಹೆಚ್ ಡಿ ಪದವಿಯನ್ನು ದೆಹಲಿವಿಶ್ವವಿದ್ಯಾಲಯದಲ್ಲಿ ಮುಗಿಸಿದ್ದಾರೆ.
ಇವರಿಗೆ ಕಾಲೇಜಿನ ಪ್ರಾಚಾರ್ಯರು, ಭೋಧಕ ಮತ್ತು ಭೋಧಕೇತರ ಸಿಬ್ಬಂದಿಗಳು, ಅತಿಥಿ ಉಪನ್ಯಾಸಕರು, ವಿದ್ಯಾರ್ಥಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
- ಕರುನಾಡ ಕಂದ ಪತ್ರಿಕೆ.




















