‘ ಮದ್ಯವ್ಯಸನಿಗಳ ಬದುಕಿಗಾಗಿ ಹೊರಾಟ ಮಾಡಿದ ಮಹಿಳೆಯರ ಶಕ್ತಿ ಅಪಾರವಾದದು ‘.
ಕೊಪ್ಪಳ/ ಯಲಬುರ್ಗಾ : ಕೊಪ್ಪಳದ ಪ್ರಾದೇಶಿಕ ಯೋಜನಾಧಿಕಾರಿ ವೈ. ನಾಗೇಶ ಅವರು ತುಮ್ಮರಗುದ್ದಿಯ ಅಗ್ರದಮ್ಮದೇವಿ ದೇವಸ್ಥಾನದಲ್ಲಿ ಜರುಗಿದ ೫೭ ನೇ ಮಾಸಿಕ ಶಿವಾನುಭವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಮದ್ಯಪ್ರಿಯರ ಬದುಕಿಗಾಗಿ ತುಮ್ಮರಗುದ್ದಿಯ ಮಹಿಳೆಯರು ಸೇರಿಕೊಂಡು ಮದ್ಯಪಾನ ಪ್ರಿಯರನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಅವರನ್ನು ಕುಡಿತ ಚಟದಿಂದ ಬಿಡಿಸಲು ಹರ ಸಾಹಸ ಮಾಡಿದ ಮಹಿಳೆಯರ ಕಾರ್ಯ ಶ್ಯಾಘನೀಯವಾದದು, ದುಷ್ಟ ಚಟಗಳಿಗೆ ದಾಸರಾಗದೆ ,ಉತ್ತಮ ಜೀವನದ ಹಾದಿಯಲ್ಲಿ ಸಾಗಬೇಕು ಆಗ ಬದುಕು ಸುಂದರವಾಗುತ್ತದೆ ಎಂದರು.
ಮಕ್ಕಳು ಸಂಸ್ಕಾರ ಸಂಸ್ಕೃತಿಯನ್ನು ಹೊಂದಿದಾಗ ಅವರು ಹೊಂದಾಣಿಕೆಯಿಂದ ಕೂಡಿ ಬಾಳುವುದಕ್ಕೆ ಸಾಧ್ಯವಾಗುತ್ತದೆ ಎಂದು ಆನಂದ ವೀ.ನಿಡಗುಂದಿ ಅವರು ಭಾರತೀಯ ಸಂಸ್ಕೃತಿಯ ವಿಷಯವಾಗಿ ಮಾತನಾಡಿದರು. ನೆಮ್ಮದಿಗಾಗಿ, ಚಿಂತೆಗಾಗಿ ಕುಡಿಯುವುದರಿಂದ ನಿಮ್ಮ ಚಿಂತೆಗಳು ದೂರವಾಗುವದಿಲ್ಲ ,ನಿಮ್ಮ ಹಾಗೂ ಸಂಸಾರದ ಬದುಕು, ಆರೋಗ್ಯದಿಂದ ಇರಬೇಕಾದರೆ ಮದ್ಯ ಪಾನ, ಸಿಗರೇಟ್, ಬೀಡಿ ದುಷ್ಟ ಚಟಗಳಿಂದ ದೂರವಿದ್ದು ಉತ್ತಮರ ಸಂಘ ಮಾಡಿ ಸಂಸ್ಕಾರವಂತರಾದಾಗ ನಿಮ್ಮ ಘನತೆ ಗೌರವ ಹೆಚ್ಚಾಗಲು ಸಾದ್ಯ ಎಂದು ಅಖಿಲ ಕರ್ನಾಟಕ ಕೊಪ್ಪಳ ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ಶರಣಬಸಪ್ಪ ದಾನಕೈ ಅವರು ಮಾತನಾಡಿದರು.
ಹಾಲಕೇರಿಯ ಮುತ್ತಣ್ಣ ಬಡಿಗೇರ, ಚನ್ನಪ್ಪ ಬಳೂಟಗಿ ಸಂಗೀತ ಸೇವೆ ನೀಡಿದರು.
ರುದ್ರಯ್ಯ ಎಂ. ಹಿರೇಮಠ, ಬಸವರಾಜ ಮಾಲಿಗೌಡ್ರ, ರಾಜಶೇಖರಯ್ಯ ಹಿರೇಮಠ ಮಾತನಾಡಿದರು.
ಚನ್ನಬಸಪ್ಪ ಛಾವಣಿ ಅಧ್ಯಕ್ಷತೆ ವಹಿಸಿದ್ದರು.
ಈ ವೇಳೆ ನವಜೀವನ ಸಮಿತಿ ಅಧ್ಯಕ್ಷ ಸಿದ್ದಾರೂಢ ಭಾವಿಕಟ್ಟಿ, ಬಸಪ್ಪ ಹುಯಿಲಗೋಳ, ಶ್ರೀಶೈಲ ಚಿಕ್ಕೋಪ್ಪದ, ಮಲ್ಲಪ್ಪ ಡಿ. ಬಡಿಗೇರ, ಮಲ್ಲಪ್ಪ ಕ.
ಬಸಪ್ಪ ಹಳ್ಳದ , ಮಲ್ಲಪ್ಪ ಕೌದಿ, ಶಂಕ್ರಪ್ಪ ಕುಂಭಳಾವತಿ, ಬಸಪ್ಪ ಕುದ್ರಿಕೊಟಗಿ, ಭರಮಪ್ಪ ಅಗಸಿಮುಂದಿನ, ವೀರಭದ್ರಪ್ಪ ಚಿಕ್ಕೊಪ್ಪದ, ಮಂಜುನಾಥ ಹಳ್ಳದ ಹಾಗೂ ತುಮ್ಮರಗುದ್ದಿ ಮುಖಂಡರು , ಗ್ರಾಮದ ಶ್ರೀ ಪ್ಯಾಟಿ ಬಸವೇಶ್ವರ ಭಜನಾ ಸಂಘದವರು ಭಾಗವಹಿಸಿದ್ದರು.
ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ, ದ್ವೀತಿಯ, ತೃತೀಯ ವಿಜೇತರಾದ ತುಮ್ಮರಗುದ್ದಿಯ ೧೦ ನೆ ತರಗತಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಂತರ ಅನ್ನ ಪ್ರಸಾದ ಜರುಗಿತು.
- ಕರುನಾಡ ಕಂದ ಪತ್ರಿಕೆ.



















