ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅಥಣಿಯಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಕಾಲ್ನಡಿಗೆ ಜಾಥಾ

ಬೆಳಗಾವಿ ಜಿಲ್ಲೆಯ ಅಥಣಿ ನಗರದಲ್ಲಿ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ವಿವಿಧ ಸರ್ಕಾರಿ ಇಲಾಖೆ, ಸಂಘ–ಸಂಸ್ಥೆಗಳ ಸಹಯೋಗದಲ್ಲಿ
ಜನಜಾಗೃತಿಗಾಗಿ ಕಾಲ್ನಡಿಗೆ ಜಾಥಾ ಅದ್ದೂರಿಯಾಗಿ ನಡೆಯಿತು.

ರಸ್ತೆ ಸುರಕ್ಷತೆ ಕೇವಲ ಕಾನೂನು ಮಾತ್ರವಲ್ಲ,
ಪ್ರತಿಯೊಬ್ಬ ನಾಗರಿಕನ ನೈತಿಕ ಜವಾಬ್ದಾರಿ ಎಂಬ ಸಂದೇಶದೊಂದಿಗೆ ಈ ಜಾಥಾಗೆ ಚಾಲನೆ ನೀಡಲಾಯಿತು.
ಟ್ರಾಫಿಕ್ ನಿಯಮಗಳ ಮಹತ್ವ ,ರಸ್ತೆಯ ಮೇಲೆ ಜವಾಬ್ದಾರಿಯುತ ನಡೆ, ಅಪಘಾತಗಳನ್ನು ತಡೆಯುವ ಅಗತ್ಯತೆ ಕುರಿತು ನಗರದಾದ್ಯಂತ ಜನರಲ್ಲಿ ಜಾಗೃತಿ ಮೂಡಿಸಲಾಯಿತು.

“ರಸ್ತೆ ಸುರಕ್ಷತೆ – ನಮ್ಮೆಲ್ಲರ ಹೊಣೆ”
“ಹೆಲ್ಮೆಟ್ ಧರಿಸೋಣ – ಜೀವ ಉಳಿಸೋಣ”
“ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ”
“ಟ್ರಾಫಿಕ್ ನಿಯಮ ಪಾಲನೆ – ಅಪಘಾತಕ್ಕೆ ಪರಿಹಾರ”
“ನಿಧಾನವಾಗಿ ಚಲಿಸಿ – ಸುರಕ್ಷಿತವಾಗಿ ತಲುಪಿರಿ”
ಎಂಬ ಘೋಷಣೆಗಳು ಜಾಥೆ ವೇಳೆ ಗಟ್ಟಿಯಾಗಿ ಮೊಳಗಿದವು.

ಪ್ರತಿ ವರ್ಷ ರಸ್ತೆ ಅಪಘಾತಗಳಲ್ಲಿ
ಅನೇಕ ಅಮೂಲ್ಯ ಜೀವಗಳು ನಾಶವಾಗುತ್ತಿವೆ.
ಆದರೆ ಸ್ವಲ್ಪ ಎಚ್ಚರಿಕೆ, ಸ್ವಲ್ಪ ಸಹನೆ ಮತ್ತು
ಟ್ರಾಫಿಕ್ ನಿಯಮಗಳ ಪಾಲನೆಯಿಂದ
ಈ ದುರ್ಘಟನೆಗಳನ್ನು ತಡೆಯಲು ಸಾಧ್ಯವೆಂದು
ವಕ್ತಾರರು ತಿಳಿಸಿದರು.
ಇಂದಿನ ಈ ಜಾಥೆಯ ಮೂಲಕ
“ನಿಯಮ ಪಾಲನೆ – ಜೀವ ರಕ್ಷಣೆ”
ಎಂಬ ಸಂದೇಶವನ್ನು ಅಥಣಿ ನಗರದ ಪ್ರತಿಯೊಂದು ಮೂಲೆಗೂ ತಲುಪಿಸಲಾಯಿತು.
ಅದೇ ವೇಳೆ ಸಾರ್ವಜನಿಕರಿಗೆ ಒಂದು ಮಹತ್ವದ ಪ್ರತಿಜ್ಞೆಯನ್ನೂ ಮಾಡಿಸಲಾಯಿತು.

ನಾವು ಸದಾ ಟ್ರಾಫಿಕ್ ನಿಯಮ ಪಾಲಿಸುತ್ತೇವೆ,
ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಬಳಸುತ್ತೇವೆ,
ನಮ್ಮ ಜೀವಕ್ಕೂ, ಇತರರ ಜೀವಕ್ಕೂ ಗೌರವ ನೀಡುತ್ತೇವೆ ಎಂದು ಸಂಕಲ್ಪ ಮಾಡಲಾಯಿತು.

ವರದಿ. ವಿಠ್ಠಲ ಖೋಕಾಟೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!