ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಂಪ್ಲಿ ಉತ್ಸವಕ್ಕೆ ತಾರೆಯರ ಮೆರುಗು

ಬಳ್ಳಾರಿ / ಕಂಪ್ಲಿ : 2026ರ ಕಂಪ್ಲಿ ಉತ್ಸವವು ಫೆಬ್ರವರಿ 11, ಮತ್ತು 12 ರಂದು ನಡೆಯಲಿದೆ. ಈ ಬಾರಿಯ ಉತ್ಸವಕ್ಕೆ ಸ್ಯಾಂಡಲ್‌ವುಡ್ ನ ಅನುಶ್ರೀ, ಸಂಜೀತ್ ಹೆಗಡೆ, ಚಂದನ್ ಶೆಟ್ಟಿ ಅವರ ಆಗಮನದ ಕುರಿತಾದ ಪ್ರಮುಖ ಮಾಹಿತಿ ಲಭ್ಯವಾಗಿದೆ.

ಅನುಶ್ರೀ :
ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ನಿರೂಪಕಿ ಜೀ ಕನ್ನಡದ ರಿಯಾಲಿಟಿ ಶೋಗಳಲ್ಲಿ (ಉದಾ : ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್) ಅವರು ಪ್ರಮುಖರಾಗಿದ್ದಾರೆ. ರೇಡಿಯೋ ಜಾಕಿಯಿಂದ ಟಿವಿ ನಿರೂಪಕಿಯಾಗಿ, ಬಳಿಕ ನಟಿಯಾಗಿ ಚಲನಚಿತ್ರಗಳಲ್ಲಿ ನಟಿಸಿದರು.
ಸಾಧನೆ: 20 ವರ್ಷಗಳ ನಿರೂಪಣಾ ಸೇವೆ ಪೂರೈಸಿದ್ದು, ಜೀ ಕನ್ನಡದ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ.

ಚಂದನ್ ಶೆಟ್ಟಿ :
ಕನ್ನಡದ ಖ್ಯಾತ ರ್ಯಾಪರ್, ಗಾಯಕ ಮತ್ತು ಸಂಗೀತ ನಿರ್ದೇಶಕರಾದ ಚಂದನ್ ಶೆಟ್ಟಿ (Chandan Shetty) ಚಲನಚಿತ್ರ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಬಳಿ ಸಹಾಯಕ ಸಂಗೀತ ನಿರ್ದೇಶಕರಾಗಿ ವೃತ್ತಿಜೀವನ ಆರಂಭಿಸಿದರು. 2017ರಲ್ಲಿ ನಡೆದ ಬಿಗ್ ಬಾಸ್ ಕನ್ನಡ ಸೀಸನ್ 5ರ ವಿಜೇತರಾಗಿ ಹೊರಹೊಮ್ಮುವ ಮೂಲಕ ಮನೆಮಾತಾದರು.
‘3 ಪೆಗ್’, ‘ಚಾಕೊಲೇಟ್ ಗರ್ಲ್’, ‘ಟಕಿಲಾ’ ಮತ್ತು ‘ಹಲಗೋಡೆ’ಯಂತಹ ಸ್ವತಂತ್ರ ಆಲ್ಬಂಗಳು ಇವರಿಗೆ ಭಾರಿ ಜನಪ್ರಿಯತೆ ತಂದುಕೊಟ್ಟವು.
ಚಲನಚಿತ್ರ ಜೀವನ: ‘ಅಲೆಮಾರಿ’ ಚಿತ್ರದ ಮೂಲಕ ಗೀತರಚನೆಕಾರರಾಗಿ ಪಾದಾರ್ಪಣೆ ಮಾಡಿದರು. ನಂತರ ‘ಪೊಗರು’ (ಕರಾಬು ಹಾಡು), ‘ಚಕ್ರವ್ಯೂಹ’ ಮುಂತಾದ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಇತ್ತೀಚೆಗೆ ‘ಸೂತ್ರಧಾರಿ’ ಮತ್ತು ‘ಎಲ್ರ ಕಾಲೆಳೆಯುತ್ತೆ ಕಾಲ’ ಚಿತ್ರಗಳ ಮೂಲಕ ನಾಯಕ ನಟನಾಗಿಯೂ ಗುರುತಿಸಿಕೊಂಡಿದ್ದಾರೆ.

ಸಂಜಿತ್ ಹೆಗಡೆ

ಬೆಂಗಳೂರಿನ ಪ್ರತಿಭಾವಂತ ಭಾರತೀಯ ಹಿನ್ನೆಲೆ ಗಾಯಕ, ಸರಿಗಮಪ ರಿಯಾಲಿಟಿ ಶೋ ಮೂಲಕ ಬೆಳಕಿಗೆ ಬಂದ ಇವರು, ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಚಲನಚಿತ್ರಗಳಲ್ಲಿ ಹಾಡಿದ್ದಾರೆ. ಚಮಕ್ ಚಿತ್ರದ “ಖುಶ್ ಖುಶ್” ಹಾಡಿಗೆ ಮಿರ್ಚಿ ಸಂಗೀತ ಪ್ರಶಸ್ತಿ ಪಡೆದ ಇವರು, ತಮ್ಮ ವಿಶಿಷ್ಟ ಕಂಠ ಮತ್ತು ಪಾಪ್ ಸಂಗೀತ ಶೈಲಿಗೆ ಹೆಸರುವಾಸಿಯಾಗಿದ್ದಾರೆ.
ಗಾನಾ ಮಿರ್ಚಿ ಸಂಗೀತ ಪ್ರಶಸ್ತಿ, ಕನ್ನಡ ಇಂಟರ್ನ್ಯಾಷನಲ್ ಮ್ಯೂಸಿಕ್ ಅಕಾಡೆಮಿ ಪ್ರಶಸ್ತಿ.
ಶೈಲಿ: ಪಾಪ್, ಹಿಂದೂಸ್ತಾನಿ ಶಾಸ್ತ್ರೀಯ ಮತ್ತು ಹಿನ್ನೆಲೆ ಗಾಯನ.
ಸಂಜಿತ್ ಹೆಗಡೆ ಅವರು ಸುಮಾರು 30ಕ್ಕೂ ಹೆಚ್ಚು ಸಿನಿಮಾಗಳಿಗೆ ಹಾಡಿದ್ದು, ಭಾರತದ ಹಲವು ನಗರಗಳು ಮತ್ತು ವಿದೇಶಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಫೆಬ್ರವರಿ 11 ರ ಬುಧವಾರ ಸಂಜೆ 5 ಗಂಟೆಗೆ ಕಂಪ್ಲಿ ಕೆರೆಯ ಮೇಲೆ ತುಂಗಾರತಿ
ಫೆಬ್ರವರಿ 12 ಗುರುವಾರ ಸಂಜೆ 5ಗಂಟೆಗೆ ಕಂಪ್ಲಿ.

ಉತ್ಸವ ಮುಖ್ಯ ವೇದಿಕೆ : ಕಂಪ್ಲಿಯ ಶುಗರ್ ಫ್ಯಾಕ್ಟರಿ ಒಳ ಸಭಾಂಗಣ ವೇದಿಕೆ ಕಾರ್ಯಕ್ರಮ ಇರುತ್ತದೆ.

ಸ್ವಚ್ಛತಾ ಕಾರ್ಯ ಉತ್ಸವದ ಕೆಲಸ ಭರದಿಂದ ನಡೆಯುತ್ತಿದೆ.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!