ಬಾಗಲಕೋಟೆ ಜಿಲ್ಲೆಯ ಮುಧೋಳದ ಮೀಸಲು ಮತಕ್ಷೇತ್ರದಲ್ಲಿ ಸೋಲು ಗೆಲುವುಗಳನ್ನ ಸ್ವೀಕರಿಸುತ್ತಾ ಸಾಮಾಜಿಕವಾಗಿ ಏರಿಳಿತಗಳನ್ನು ಅನುಭವಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಹೋರಾಟವನ್ನು ಮಾಡುತ್ತಾ ಬಂದಿರುವ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ಬಿ. ತಿಮ್ಮಾಪುರ ಅವರಿಗೆ ಇವತ್ತು ಜಿಲ್ಲೆಯಲ್ಲಿ ಎಲ್ಲರೂ ಪಕ್ಷಾತೀತವಾಗಿ ಜಾತ್ಯಾತೀತವಾಗಿ ಬೆಂಬಲ ನೀಡುವುದು ಕರ್ತವ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಸರ್ವ ಕಲಾವಿದರ ಒಕ್ಕೂಟದ ಅಧ್ಯಕ್ಷ ಶರಣಬಸವ ಶಾಸ್ತ್ರಿಗಳು ಹೇಳಿದ್ದಾರೆ.
ಜಿಲ್ಲೆಯಲ್ಲಿ ಅವರ ಸೇವೆ ಅತ್ಯಂತ ಅಗತ್ಯವಾಗಿದೆ. ಮಾನ ಅವಮಾನಗಳನ್ನು ಗಮನಿಸದೆ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ ತಿಮ್ಮಾಪುರವರು ಇವತ್ತು ಅಧಿಕಾರದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಕಾರ್ಯ ನಿರ್ವಹಿಸುತ್ತಿರುವ ಅವರನ್ನು ರಾಜೀನಾಮೆ ಕೇಳುತ್ತಿರುವುದು ಅತ್ಯಂತ ವಿಪರ್ಯಾಸದ ಸಂಗತಿ. ಹಾಗಾಗಿ ಇಂತಹ ಸಮಯದಲ್ಲಿ ತಿಮ್ಮಾಪುರ ಅವರನ್ನು ಎಲ್ಲರೂ ಪಕ್ಷಾತೀತವಾಗಿ ನೋಡಬೇಕು ಅವರ ರಾಜೀನಾಮೆಯನ್ನು ಕೇಳುವುದು ನಮ್ಮ ಜಿಲ್ಲೆಗೆ ಅದು ಶೋಭೆಯಲ್ಲ. ಹಾಗಾಗಿ ನಾವು ಇವತ್ತಿನ ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ವ ಕಲಾವಿದರ ಒಕ್ಕೂಟದಿಂದ ನಾವು ಆರ್.ಬಿ. ತಿಮ್ಮಾಪುರ ಅವರಿಗೆ ನೈತಿಕ ಬೆಂಬಲವನ್ನು ಕೊಡುತ್ತೇವೆ. ಆ ನಿಟ್ಟಿನಲ್ಲಿ ದಿ.6 ರಂದು ಮುಂಜಾನೆ 11 ಗಂಟೆಗೆ ಮುಧೋಳ ತಾಲೂಕಿನ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ಜಿಲ್ಲೆಯ ಕಲಾವಿದರ ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿ ಕಲಾವಿದರು ಸಾಹಿತಿಗಳು ಸಾಮಾಜಿಕ ಸೇವಾ ಧುರೀಣರು ಎಲ್ಲರೂ ಭಾಗವಹಿಸಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯ ಕಲ್ಪನೆಯನ್ನು ಮನಸ್ಸಿನಲ್ಲಿಟ್ಟು ಜಿಲ್ಲೆಗೆ ಸಿಕ್ಕಿರುವ ಅಧಿಕಾರ ಉಳಿಯಬೇಕೆಂದು ನಾವು ಸರ್ಕಾರಕ್ಕೆ ಮನವಿ ಮಾಡಿಕೊಳ್ಳೋಣ. ಹಾಗಾಗಿ ಕಲಾವಿದರೆಲ್ಲರೂ ಸೇರಿ ನೈತಿಕ ಬೆಂಬಲವನ್ನು ಸೂಚಿಸಬೇಕೆಂದು ಕಲಾವಿದರಲ್ಲಿ ಕೋರಿದರು.
- ಕರುನಾಡ ಕಂದ



















