ಹಾವೇರಿ : ಫೆಬ್ರುವರಿ 14ರಂದು ಹಾವೇರಿಯಲ್ಲಿ ಸರ್ಕಾರದ ಸಾವಿರ ಸಾಧನೆ ಸಮಾವೇಶ, ಒಂದು ಲಕ್ಷ ಜನರಿಗೆ ಹಕ್ಕು ಪತ್ರ ನೀಡುವ ಬೃಹತ್ ಸಮಾವೇಶವನ್ನು ಹಾವೇರಿ ನಗರದ ಹೊರವಲಯದಲ್ಲಿರೋ ಅಜ್ಜನ ಗುಡಿಯ ಹತ್ತಿರ ಹಮ್ಮಿಕೊಳ್ಳಲಾಗಿದೆ. ಸ್ಥಳ ವೀಕ್ಷಣೆ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಸಚಿವ ಶಿವಾನಂದ ಪಾಟೀಲರಿಂದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ರಾಜ್ಯದ ಬಹುತೇಕ ಸಚಿವರು ಇಲ್ಲಿಗೆ ಬರುತ್ತಾರೆ ಎರಡು ಲಕ್ಷ ಜನರು ಸೇರುವ ನಿರೀಕ್ಷೆ ಒಂದು ಲಕ್ಷ ಜನರಿಗೆ ಹಕ್ಕು ಪತ್ರ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಅಲ್ಲಿನ ಫಲಾನುಭವಿಗಳನ್ನು ಕರೆದುಕೊಂಡು ಬರುತ್ತಾರೆ ಕಾರ್ಯಕ್ರಮದ ಯಶಸ್ಸಿಗೆ ಬೇಕಾದ ಎಲ್ಲಾ ರೀತಿಯಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ, ಎರಡನೇ ದೊಡ್ಡ ಕಾರ್ಯಕ್ರಮ ಬೈರೇಗೌಡ ಚಿಂತನೆಗಳು ಜಾರಿಯಾಗುತ್ತವೆ ಮೊದಲು ಹೊಸಪೇಟೆ, ಎರಡನೇ ಕಾರ್ಯಕ್ರಮ ಹಾವೇರಿಯಲ್ಲಿ ಸಿಎಂ, ಡಿಸಿಎಂ ಸೇರಿ ಎಲ್ಲರೂ ಬರುತ್ತಾರೆ ಮಲ್ಲಿಕಾರ್ಜುನ ಖರ್ಗೆ ಅವರು ಸಹ ಬರುವ ನಿರೀಕ್ಷೆ ಇದೆ. ಫಲಾನುಭವಿಗಳಿಗೆ ಹಕ್ಕುಪತ್ರ (ದಾವಣಗೆರೆ ಚಿತ್ರದುರ್ಗ ಕೊಪ್ಪಳ ಹಾವೇರಿ ಗದಗ ಧಾರವಾಡ ಉತ್ತರ ಕನ್ನಡ) ಸೇರಿದಂತೆ ಒಂಬತ್ತು ಜಿಲ್ಲೆಗಳ ಫಲಾನುಭವಿಗಳು ಯಾವುದೇ ಲೋಪವಾಗದಂತೆ ಕ್ರಮ ಕೈಗೊಳ್ಳುತ್ತೇವೆ ಹೊಸಪೇಟೆಗಿಂತಲೂ ಈ ಆವರಣ ದೊಡ್ಡದಿದೆ ಹಾವೇರಿ ಸ್ಥಳ ಸಂಪರ್ಕ ಇರುವುದರಿಂದ ಕಾರ್ಯಕ್ರಮ ಯಶಸ್ವಿಯಾಗುತ್ತದೆ ಎಂದರು.
ವರದಿ ಬಸವರಾಜ ಎಸ್. ಎನ್.



















