ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕೊರಟಗೆರೆಯ ಇತಿಹಾಸದಲ್ಲೇ ಮೊದಲ ಸಲ ಸಿದ್ದರಬೆಟ್ಟ ತಪೋವನದ ತಪ್ಪಲಿನಲ್ಲಿ ಅಭೂತ ಪರ್ವ ಜಾಗರಣಾ ಮಹೋತ್ಸವ.

ವರದಿ ಪ್ರಸನ್ನ ಕುಮಾರ್, ಎಸ್. ಕೊರಟಗೆರೆ

ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಇತಿಹಾಸ ಪ್ರಸಿದ್ಧ ಸಂಜೀವಿನಿ ಪರ್ವತದ ಶ್ರೀ ಕ್ಷೇತ್ರ ಸಿದ್ದರ ತಪೋವನದಲ್ಲಿ ಮೊದಲನೇ ವರ್ಷದ ಮಹಾಶಿವರಾತ್ರಿಯ ಜಾಗರಣೆಯನ್ನು ಅದ್ದೂರಿಯಾಗಿ ಸಿ ಎನ್ ದುರ್ಗಾ ಹೋಬಳಿಯ ಶ್ರೀ ಸಿದ್ದರಬೆಟ್ಟ ಶಾಖಾ ಮಠದ ವತಿಯಿಂದ ಗೃಹ ಸಚಿವ ಡಾಕ್ಟರ್ ಜಿ. ಪರಮೇಶ್ವರ್ ಹಾಗೂ ಕೇಂದ್ರ ರೈಲ್ವೆ ಸಚಿವರಾದಂತಹ ವಿ. ಸೋಮಣ್ಣ ಮತ್ತು ಉದ್ಯಮಿ ನೀಲೇಶ್ ನೇತೃತ್ವದಲ್ಲಿ ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು.

ಹಲವು ವರ್ಷಗಳ ಕನಸು

ಸಿದ್ದರಬೆಟ್ಟದಲ್ಲಿ ಮಹಾಶಿವರಾತ್ರಿ ಅಂಗವಾಗಿ ಎಲ್ಲರನ್ನು ಜಾಗೃತಿಯ ಮೂಡಿಸುವ ಸಲುವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕೆಂದು ಆಲೋಚನೆ ಮಾಡಿದ್ದೆವು ಅದು ನೀಲೇಶ್ ರವರಂತ ಉದ್ಯಮಿಗಳಿಂದ ಈ ಕಾರ್ಯಕ್ರಮವನ್ನು ಮಾಡುವಂತೆ ಸಿದ್ದರಬೆಟ್ಟದ ಸಿದ್ದಪ್ಪನವರು ಆಶೀರ್ವಾದ ಮಾಡಿದ್ದಾರೆಂದು ಭಾವಿಸುತ್ತೇನೆ ಹಾಗೂ 100 ಅಡಿ ಎತ್ತರದ ಲಿಂಗದ ಪ್ರತಿಮೆಯನ್ನು ಕ್ಷೇತ್ರದಲ್ಲಿ ಸ್ಥಾಪಿಸಬೇಕೆಂಬ ಆಸೆಯನ್ನು ಹೊಂದಿದ್ದು ಮುಂದಿನ ದಿನಗಳಲ್ಲಿ ಶ್ರೀ ಕ್ಷೇತ್ರ ಸಿದ್ದರಬೆಟ್ಟ ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಬೇಕು ಎಂಬುದು ನಮ್ಮೆಲ್ಲರ ಆಶಯ ಎಂದು ಶ್ರೀ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು.

ಮಾದರಿ ಶಾಸಕರು ಎಂದು ಯಾರಾದರೂ ಇದ್ದರೆ ಅದು ಡಾಕ್ಟರ್ ಜಿ. ಪರಮೇಶ್ವರ್ ಮಾತ್ರ

ತಾಲೂಕಿನ ಶ್ರೀ ಕ್ಷೇತ್ರ ಸಿದ್ದರಬೆಟ್ಟದಲ್ಲಿ ಶಿವರಾತ್ರಿ ಅಂಗವಾಗಿ ಶಿವನ ಜಪವನ್ನು ಜಪಿಸುತ್ತಾ ಅದ್ದೂರಿ ಜಾಗರಣೆ ಕಾರ್ಯಕ್ರಮವನ್ನು ಕೈಗೊಳ್ಳಲು ಮಾದರಿ ಹಾಗೂ ಆದರ್ಶ ನಾಯಕರಾದ ಡಾಕ್ಟರ್ ಜಿ. ಪರಮೇಶ್ವರ್ ಅವರು ನಮಗೆ ಸ್ಪೂರ್ತಿ, ಜಿಲ್ಲಾ ಉಸ್ತುವಾರಿ ಸಚಿವರಾಗಿ ಹಾಗೂ ರಾಜ್ಯದ ಗೃಹಮಂತ್ರಿಗಳಾಗಿ ಅವರ ಕೊಡುಗೆ ಅಪಾರ. ಮುಂದಿನ ದಿನಗಳಲ್ಲಿ ಸಿದ್ದಪ್ಪನವರ ಪವಾಡ ಹಾಗೂ ಆಶೀರ್ವಾದದ ಮೂಲಕ ಅವರು ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂಬುದು ನಮ್ಮೆಲ್ಲರ ಆಶಯ. ಶಿವರಾತ್ರಿ ಜಾಗರಣೆ ಜೀವನದ ಜಾಗೃತಿ ಮನಸ್ಸಿನ ಪರಿವರ್ತನೆ. ನಾವೆಲ್ಲರೂ ಧರ್ಮದ ಜಾಗೃತಿಗೆ ಮುಂದಾಗೋಣ.

  • ನೀಲೇಶ್.
    ಯುವ ರಿಯಲ್ ಎಸ್ಟೇಟ್ ಉದ್ಯಮಿ, ಪರ್ವ ಗ್ರೂಪ್ಸ್ ದುಬೈ.

ಜಾಗರಣೆ ಕಾರ್ಯಕ್ರಮದಲ್ಲಿ ಹೆಸರಾಂತ ಸಿನಿಮಾ ನಟರು ರಿಯಾಲಿಟಿ ಶೋ ನಟರು,ಗಾಯಕರು ಭಾಗವಹಿಸಿದ್ದರು. ಭಕ್ತಿಗೀತೆಗಳು, ಧಾರ್ಮಿಕತೆಯ ಲೇಸರ್ ಶೋ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ತಾಲೂಕಿನ ಸಹಸ್ರಾರು ಭಕ್ತಾದಿಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಬಂದ ಭಕ್ತರಿಗೆ ದಾಸೋಹದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶುಭಾ ಕಲ್ಯಾಣ, ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ತಾಲೂಕು ದಂಡಾಧಿಕಾರಿ ಮಂಜುನಾಥ್, ವೃತ್ತ ನಿರೀಕ್ಷಕರು ಅನಿಲ್, ಸಬ್ ಇನ್ಸ್ ಪೆಕ್ಟರ್ ತೀರ್ಥೇಶ್, ಬಿಜೆಪಿ ತಾಲೂಕು ಅಧ್ಯಕ್ಷರಾದ ರುದ್ರೇಶ್, ಜ್ಯೋತಿ ಗಣೇಶ್ ಸುರೇಶ್ ಗೌಡ, ಶಿವರಾಮಯ್ಯ ಹಾಗೂ ಚಲನಚಿತ್ರ ನಟರು ಸರಿಗಮಪದ ಅನುರಾಧ ಭಟ್ ಕಂಬದ ರಂಗಯ್ಯ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ವಿವಿಧ ಮಠಾಧೀಶರು ಅನೇಕ ಗಣ್ಯರು ಇದ್ದರು.

ಗ್ರಾಮೀಣ ಪ್ರದೇಶವನ್ನು ತೊರೆದು ಪಟ್ಟಣಗಳನ್ನು ಸೇರಿ ಆಧುನೀಕರಣದ ಪ್ರಭಾವಕ್ಕೆ ಒಳಗಾಗಿ ಸಂಸ್ಕೃತಿ ಸಂಪ್ರದಾಯಗಳನ್ನು ಮರೆಯಬಾರದು. ನೀಲೇಶ್ ಎಂಬ ಯುವಕ ಕುಗ್ರಾಮದಲ್ಲಿ ಜನಿಸಿ ದೂರದ ಊರಿನಲ್ಲಿ ಸಾಧನೆಯನ್ನು ಮಾಡಿ ತನ್ನ ಊರಿನಲ್ಲಿ ಧಾರ್ಮಿಕತೆಗೆ ಆದ್ಯತೆಯನ್ನು ಕೊಡುತ್ತಿರುವುದು ಅವರ ಸಂಸ್ಕಾರವನ್ನು ಪ್ರತಿಬಿಂಬಸುತ್ತದೆ. ಗ್ರಾಮದಲ್ಲಿ ದೇವಾಲಯ ನಿರ್ಮಾಣ ಮಾಡಿ ಅದೇ ರೀತಿ ಶಿವರಾತ್ರಿ ಅಂಗವಾಗಿ ಸಿದ್ಧರಬೆಟ್ಟದಲ್ಲಿ ಮೊದಲ ಬಾರಿಗೆ ಜಾಗರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಸಂಸ್ಕೃತಿ ಸಂಪ್ರದಾಯಗಳ ಉಳಿವಿಗೆ ಇವರ ಕಾರ್ಯ ಶ್ಲಾಘನೀಯ.

  • ಡಾ ಜಿ ಪರಮೇಶ್ವರ್ ಗೃಹ ಮಂತ್ರಿಗಳು, ಕರ್ನಾಟಕ ಸರ್ಕಾರ.

ದೇಶದ ಉಳಿವಿಗೆ ನಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ಪಾಲಿಸುತ್ತಿರುವ ಋಷಿಮುನಿಗಳು ಪರಮಾತ್ಮನನ್ನು ಓಲೈಕೆ ಮಾಡಿಕೊಳ್ಳುವುದರ ಮೂಲಕ ದೇಶದಲ್ಲಿ ಶಾಂತಿ ಸುವವ್ಯವಸ್ಥೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದು ಯುವಕರು ದುಶ್ಚಟಗಳಿಗೆ ಬಲಿಯಾಗದೆ ಸಂಸ್ಕೃತಿ ಸಂಪ್ರದಾಯಗಳನ್ನು ಪಾಲಿಸಬೇಕು. ಜೊತೆಗೆ ನೀಲೇಶರಂತೆ ಮಾದರಿ ಉದ್ಯಮಗಳಾಗಿ ಧರ್ಮದ ಆಧಾರ ಸ್ತಂಭಗಳಾಗಬೇಕು.

  • ವಿ.ಸೋಮಣ್ಣ, ಕೇಂದ್ರ ರೈಲ್ವೆ ಸಚಿವ.
    ಭಾರತ ಸಚಿವಾಲಯ.

ನೂರು ವರ್ಷ ಇತಿಹಾಸವಿರುವ ಹೊಳೇ ನಂಜುಂಡೇಶ್ವರ ದೇವಾಲಯಕ್ಕೆ 20 ಸಾವಿರಕ್ಕೂ ಅಧಿಕ ಭಕ್ತ ಸಾಗರ

ಅವಳಿ ಕ್ಷೇತ್ರಗಳೆಂದೆ ಕ್ಷೇತ್ರದಲ್ಲಿ ಸಿದ್ಧಿಗೊಂಡ ಸಿದ್ಧರಬೆಟ್ಟ ಹಾಗೂ ಹೊಳೆ ನಂಜುಂಡೇಶ್ವರ ಕ್ಷೇತ್ರಗಳು ತಾಲೂಕಿನಲ್ಲಿ ಪ್ರಮುಖವಾಗಿದ್ದು ನಂಜುಂಡೇಶ್ವರ ದೇವಾಲಯ ಗರುಡಾಚಲ ನದಿಯ ದಡದಲ್ಲಿದ್ದು ದೇವಾಲಯಕ್ಕೆ ಬರುವ ಮುನ್ನ ನದಿಯಲ್ಲಿ ಸ್ಥಾನ ಮಾಡಿ ದೇವಾಲಯಕ್ಕೆ ಬರುವ ಪ್ರತೀತಿ. ವಿಜ್ಞಾನ ಲೋಕಕ್ಕೆ ಸವಾಲಾದ ಸಮಸ್ಯೆಗಳಿಗೆ ಇಲ್ಲಿ ಪರಿಹಾರ ಕಂಡುಕೊಂಡ ಉದಾಹರಣೆಗಳು ಬಹಳಷ್ಟು. ಚರ್ಮರೋಗ ಕಿವಿ ಸಂಬಂಧಿ ಕಾಯಿಲೆ ಮುಂತಾದ ಕಾಯಿಲೆಗಳಿಗೆ ಸಮಸ್ಯೆಗೆ ಪರಿಹಾರವನ್ನು ಭಕ್ತಾದಿಗಳು ಕಂಡುಕೊಂಡಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷವೂ ಕೂಡ ವಿಶೇಷ ಹೂವಿನ ಅಲಂಕಾರದಿಂದ ನಂಜುಂಡೇಶ್ವರನನ್ನು ಅಲಂಕರಿಸಲಾಗಿತು. ಧಾರ್ಮಿಕ ವಿಧಿ ವಿಧಾನದಂತೆ ಪೂಜಾ ಕಾರ್ಯಗಳು ನೆರವೇರಿತು. ಈ ವರ್ಷ ಕ್ಷೇತ್ರಕ್ಕೆ 20,000ಕ್ಕೂ ಅಧಿಕ ಭಕ್ತಾದಿಗಳು ದೇವರ ದರ್ಶನವನ್ನು ಪಡೆದಿದ್ದು. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಗೆದ್ಮೇನಹಳ್ಳಿಯ ಜಗದೀಶ್ ಹಾಗೂ ಸಹೋದರರು ಮತ್ತು ಸ್ನೇಹಿತರು 13 ವರ್ಷದಿಂದ ಈ ಕ್ಷೇತ್ರದಲ್ಲಿ ಅನ್ನದಾಸೋಹವನ್ನು ಕೈಗೊಳ್ಳುತ್ತಿರುವುದು ವಿಶೇಷ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!