ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಂಪ್ಲಿಯಲ್ಲಿ ಅದ್ಧೂರಿಯಾಗಿ ಬಿಡುಗಡೆಗೊಂಡ ದಂತಪುರಾಣ

ಚಿತ್ರ ವೀಕ್ಷಿಸಿದ ಮಕ್ಕಳು, ಪೋಷಕರು : ಚಿತ್ರಮಂದಿರ ಹೌಸ್‌ಫುಲ್ : ಚಿತ್ರಕ್ಕೆ ಮಕ್ಕಳು ಫಿದಾ

ಬಳ್ಳಾರಿ / ಕಂಪ್ಲಿ : ಪಟ್ಟಣದ ಚಂದ್ರಕಲಾ ಚಿತ್ರಮಂದಿರದಲ್ಲಿ ಶನಿವಾರ ಅದ್ಧೂರಿಯಾಗಿ ಬಿಡುಗಡೆಗೊಂಡ ಮೂರು ರಾಜ್ಯ ಪ್ರಶಸ್ತಿ ಪುರಸ್ಕೃತ ದಂತಪುರಾಣ ಸಿನಿಮಾವನ್ನು ಮಕ್ಕಳು, ಪೋಷಕರು ಮತ್ತು ಜನರು ವೀಕ್ಷಿಸಿದರು.
ಶಾಸಕ ಜೆ.ಎನ್.ಗಣೇಶ್ ಅವರ ಅಧ್ಯಕ್ಷತೆಯಲ್ಲಿ ದಂತಪುರಾಣ ಚಿತ್ರಕ್ಕೆ ಅದ್ಧೂರಿಯಾಗಿ ಸ್ಥಳೀಯ ಮುಖಂಡರು, ಮಕ್ಕಳು ಚಾಲನೆ ನೀಡಿದರು.

ಇಲ್ಲಿನ ಚಿತ್ರಮಂದಿರದಲ್ಲಿ ಶಾಲಾ ಮಕ್ಕಳು, ಪೋಷಕರು ಸೇರಿದಂತೆ ಅನೇಕರು ಚಿತ್ರದಲ್ಲಿ ಮೂಡಿ ಬಂದ ಅದ್ಭುತ ಕ್ಷಣಗಳನ್ನು ನೋಡಿ, ಆನಂದಿಸುವ ಜೊತೆಗೆ ಕೆಲವೊಂದು ಸನ್ನಿವೇಶಕ್ಕೆ ಕಣ್ಣೀರು ಹಾಕಿರುವ ದೃಶ್ಯ ಕಂಡು ಬಂತು.
ವಿಶಾಲ್ ರಾಜ್ ಅವರ ನಿರ್ದೇಶಕ ಹಾಗೂ ನವೀನ್ ಶರ್ಮ ಅವರ ನಿರ್ಮಾಪಕದಲ್ಲಿ ತೆರೆ ಕಂಡ ಅತ್ಯದ್ಬುತ ಚಿತ್ರವನ್ನು ಜನರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಕ್ಕೆ ಆಗಮಿಸಿ, ಸಿನಿಮಾ ವೀಕ್ಷಿಸಿದರು. ಇಂದಿನ ಚಿತ್ರಮಂದಿರ ಜನರಿಂದ ಹೌಸ್‌ಫುಲ್ ಆಗಿರುವುದು ಕಂಡು ಬಂತು.
ಈ ಸಂದರ್ಭದಲ್ಲಿ ಚಲನಚಿತ್ರದ ನಿರ್ದೇಶಕ ವಿಶಾಲ್ ರಾಜ್, ನಿರ್ಮಾಪಕ ನವೀನ್ ಶರ್ಮ, ಮುಖಂಡರಾದ ಸಿ.ಆರ್.ಹನುಮಂತ, ಕೆ.ಷಣ್ಮುಕಪ್ಪ, ಗ್ಯಾಸ್ ಮಹೇಶ, ವಾಸುಕುಮಾರ, ಅರ್.ಪಿ.ಶಶಿಕುಮಾರ, ರಾಜಾಭಕ್ಷಿ, ರಾಘವೇಂದ್ರ, ಸಾಧಿಕ್ ಸೇರಿದಂತೆ ಇತರರು ಇದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!