ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರ್ನಾಟಕದಲ್ಲಿ ಶಿವಾಜಿ ಜಯಂತಿ ಮಾಡಬಾರದೇ ?

ಬೆಳಗಾವಿ/ ಬೈಲಹೊಂಗಲ: ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮೇಲೆ‌ ಕಲ್ಲು ಚಪ್ಪಲಿ‌ ಎಸೆದವರು ಹಾಗೂ ಅದರ ಹಿಂದೆ ಇದ್ದವರ ಬಗ್ಗೆ ಕಠಿಣ ಕ್ರಮ ಕೈಗೊಳ್ಳದೆ ಸರ್ಕಾರದ ಕೋಟ್ಯಾಂತರ ಆಸ್ತಿ ಮರಳಿಸಲು ಕಾರಣೀಕರ್ತರಾದ ಸ್ನೇಹಮಯ ಕೃಷ್ಣ ಅವರನ್ನು ಬಂಧಿಸುವ ಮೂಲಕ ಉತ್ತರ ಕುಮಾರ ಪೌರುಷ ತೋರಿಸುತ್ತಿದೆ ಎಂದು ರಾಜ್ಯ ಬಿಜೆಪಿ ಮಾಧ್ಯಮ ಸಮಿತಿ‌ ಸದಸ್ಯ ಎಫ್.ಎಸ್.ಸಿದ್ದನಗೌಡರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶನಿವಾರ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ ಅವರು, ರಾಜ್ಯದಲ್ಲಿ ನೌಕರ ವರ್ಗಕ್ಕೆ, ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ಇಲ್ಲವಾಗಿದೆ. ಸರ್ಕಾರ ಅಲ್ಪಸಂಖ್ಯಾತರಿಗೆ, ಮುಸಲ್ಮಾನ ಬಂಧುಗಳಿಗೆ ಮಾತ್ರ ರಕ್ಷಣೆ ಕೊಡುವುದಾಗಿ ಸರಕಾರ ಘೋಷಿಸುವುದು ಬಾಕಿ ಇದೆ.
ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದವರನ್ನು ಏನೂ ಮಾಡದ ರಾಜ್ಯ ಕಾಂಗ್ರೇಸ್ ಸರ್ಕಾರ, ಕರ್ನಾಟಕದಲ್ಲಿ ಹಿಂದೂ ರಾಷ್ಟ್ರೀಯ ನಾಯಕರು, ದೇವಾನುದೇವತೆಗಳ ಭಾವಚಿತ್ರದ ಮೆರವಣಿಗೆ ಮಾಡುವವರ ಮೇಲೆ‌ ಗಲಾಟೆ ಮಾಡಲು ಪ್ರಚೋದನೆ ಮಾಡುವವರನ್ನು ರಕ್ಷಿಸುತ್ತಿದೆ. ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಮೆರವಣಿಗೆ ಮಾತ್ರ ಮಾಡಬೇಕೆ ಎಂದು ಪ್ರಶ್ನಿಸಿದರು. ಗಣಪತಿ ಉತ್ಸವ, ಶಿವಾಜಿ ಜಯಂತಿ, ಹಿಂದೂ ಪರ‌ ಜಯಂತಿ ಬಂದಾಗ ಹೀಗಾಗುತ್ತಿದೆ. ಯಾಕೆ ಕರ್ನಾಟಕ ರಾಜ್ಯದಲ್ಲಿ ಈ ಥರ ತುಷ್ಟೀಕರಣ ಅತಿಯಾಗುತ್ತಿದೆ.
ಡಿ.ಕೆ.ಶಿವಕುಮಾರ್ ಅವರ ಮೈ ಬ್ರದರ್ಸ್ ಪಾಲಿಸಿಯಿಂದ ಹೀಗಾಗುತ್ತಿದೆ. ಹಾಗಿದ್ದರೆ ಹಿಂದೂಗಳು ನಿಮ್ಮ ಸಹೋದರರಲ್ಲವೇ ಸ್ಪಷ್ಟಪಡಿಸಿ.
ಪದೇಪದೇ ಗಲಾಟೆಗಳಾಗುತ್ತಿರುವ ಹಿಂದಿನ‌ ಮರ್ಮವೇನು? ಈ ಸರಕಾರ ಸಂಪೂರ್ಣವಾಗಿ ತುಷ್ಟೀಕರಣ ಮಾಡುತ್ತಿದೆ ಎಂದು ಆರೋಪಿಸಿದರು. ಸರಕಾರವು ತುಷ್ಟೀಕರಣ ನೀತಿಯನ್ನು ಬಿಡಬೇಕು. ಭ್ರಷ್ಟಾಚಾರ ಪ್ರಕರಣ ಬಯಲಿಗೆಳೆಯುವ ಸಾಮಾಜಿಕ‌ ಕಾರ್ಯಕರ್ತರನ್ನು ಬಂಧಿಸುವ ಕ್ರಮ‌ ಖಂಡನೀಯ ಮುಖ್ಯಮಂತ್ರಿಗಳ ಭ್ರಷ್ಟಾಚಾರ ಪ್ರಕರಣದಲ್ಲಿ ಸ್ನೇಹಮಯ ಕೃಷ್ಣ ಅವರನ್ನು ವಶಕ್ಕೆ ಪಡೆದ ಸರ್ಕಾರದ ನೀತಿ ಧಮನಕಾರಿಯಾಗಿದ್ದು
ರಾಜ್ಯದಲ್ಲಿ ವಿಪರೀತ ತುಷ್ಟೀಕರಣದ ಕಾರಣದಿಂದ ರಾಜ್ಯ ಸರಕಾರವು ಗಲಭೆ ಮಾಡಿದ ಇವರ ಮೇಲೂ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆಕ್ಷೇಪಿಸಿದರು. ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿಯ ಮೇರವಣಿಗೆ ಮಸೀದಿ ಹತ್ತಿರ ತೆರಳುತ್ತಿದ್ದ ಹಿಂದೂಗಳ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಮಸೀದಿ ಭಾಗದಿಂದ ಕಲ್ಲುಗಳು ಹಿಂದೂ ಕಾರ್ಯಕರ್ತರ ಮೇಲೆ ಪೋಲಿಸರ್ ಮೇಲಿಯೂ ಬಿದ್ದಿವೆ ಎಂದು ಟೀಕಿಸಿದರು.
ಕಲ್ಲೆಸೆತದಿಂದ ಎಸ್ ಪಿ ತಲೆಗೂ ಏಟು ಬಿದ್ದಿದೆ. ಇಬ್ಬರು ಕಾನ್‍ಸ್ಟೇಬಲ್‍ಗಳಿಗೆ ಗಾಯಗಳಾಗಿವೆ. ಕಲ್ಲು, ತೂರಿದ್ದಾರೆ. ಚಪ್ಪಲಿ-ಶೂ ಎಸೆದಿದ್ದಾರೆ. ಆದರೆ, ಯಾರನ್ನೂ ಬಂಧಿಸಿರಲಿಲ್ಲ. ಹಿಂದೂ ಕಾರ್ಯಕರ್ತರು ಒತ್ತಡ ಹಾಕಿದ ಬಳಿಕ 8 ಜನರನ್ನು ಬಂಧಿಸಿದ್ದಾರೆ.
ಕರ್ನಾಟಕದಲ್ಲಿ ಶಿವಾಜಿ ಜಯಂತಿ ಮಾಡಬಾರದೇ? ಯಾವುದೇ ಮಸೀದಿ ಮುಂಭಾಗದಿಂದ ಹಿಂದೂ ಮೆರವಣಿಗೆ, ಗಣಪತಿ ಉತ್ಸವಗಳು, ಶಿವಾಜಿ ಜಯಂತಿ ಮೆರವಣಿಗೆ, ಕನಕದಾಸರ ಭಾವಚಿತ್ರದ ಮೆರವಣಿಗೆ, ಬಸವೇಶ್ವರರ ಭಾವಚಿತ್ರದ ಮೆರವಣಿಗೆಯನ್ನು ರಸ್ತೆಯಲ್ಲಿ, ಮಸೀದಿ ಮುಂದೆ ಮಾಡಬಾರದೇ ಎಂದು‌ ಪ್ರಶ್ನಿಸಿದ್ದಾರೆ.

ವರದಿ ಮಂಜು ಎಂ. ಚಿಕ್ಕಣ್ಣವರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!