ವಿಜಯನಗರ : ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಮುಂಬರುವ ಜನಗಣತಿ ಮನೆ ಪಟ್ಟಿ ಕಾರ್ಯ ಮಾಡುವಾಗ ಕೆಳಕಂಡ ಪ್ರಕರಣಗಳನ್ನು ಹೊಂದಿರುವ ಶಿಕ್ಷಕರಿಗೆ ವಿನಾಯಿತಿ ನೀಡಲು ಮಾನ್ಯ ತಹಶೀಲ್ದಾರರಿಗೆ ಮಾನ್ಯ ನಗರಸಭಾ ಆಯುಕ್ತರಿಗೆ ಹಾಗೂ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
1) ವಿಶೇಷ ಚೇತನ ಶಿಕ್ಷಕರು ಮತ್ತು ಶಿಕ್ಷಕರಿಗೆ
2) ಗರ್ಭಿಣಿ ತಾಯಂದಿರಿಗೆ
3) ಒಂದು ವರ್ಷದ ಒಳಗಿನ ಮಕ್ಕಳನ್ನು ಹೊಂದಿರುವ ತಾಯಂದಿರಿಗೆ
4) ಬಿ ಎಲ್ ಓ ಕಾರ್ಯನಿರ್ವಹಿಸುವ ಶಿಕ್ಷಕರಿಗೆ
5) 55 ವರ್ಷ ಮೇಲ್ಪಟ್ಟ ಶಿಕ್ಷಕರಿಗೆ
ಹಾಗೂ BLO ಕಾರ್ಯದಿಂದ ಶಿಕ್ಷಕರಿಗೆ ವಿನಾಯಿತಿ ನೀಡಿ ಬೇರೆ ಇಲಾಖೆಗೆ BLO ಕಾರ್ಯಕ್ಕೆ ನಿಯೋಜಿಸಲು ಮಾನ್ಯರಲ್ಲಿ ವಿನಂತಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘ ಹಾಗೂ ತಾಲೂಕು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.



















