
ಯಾದಗಿರಿ/ ಗುರುಮಠಕಲ್ : ಪಟ್ಟಣದ ಹೊರವಲಯದಲ್ಲಿರುವ ಎಸ್ಎಲ್ಟಿ ಪಿ ಯು ಸಿ ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭಕ್ಕೆ ಕಾಲೇಜಿನ ಪ್ರಾಂಶುಪಾರಾದ ನಾಗರಾಜ್ ಅವರು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾದ ಯಾದಗಿರಿ ಕನ್ನಡ ಉಪನ್ಯಾಸಕಾರದ ಸಂತೋಷ ಮಾತನಾಡಿ ವಿದ್ಯಾರ್ಥಿಗಳ ಜೀವನದಲ್ಲಿ ಪಿಯುಸಿ ನಂತರದ ಹಂತ ಅತ್ಯಂತ ಮಹತ್ವದ್ದಾಗಿದೆ ಈ ಹಂತದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಭವಿಷ್ಯವನ್ನು ರೂಪಿಸುತ್ತವೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಗುರಿಯನ್ನು ಸ್ಪಷ್ಟವಾಗಿ ನಿರ್ಧರಿಸಿ ಅದನ್ನು ಸಾಧಿಸಲು ನಿರಂತರವಾಗಿ ಶ್ರಮಿಸಬೇಕು ಎಂದು ವಿದ್ಯಾರ್ಥಿಗಳೆ ಶಿಕ್ಷಕರು ನಿಮ್ಮಿಂದ ಯಾವುದೇ ವೈಯಕ್ತಿಕ ನಿರೀಕ್ಷೆಗಳನ್ನು ಇಡುವುದಿಲ್ಲ. ನೀವು ನಿಮ್ಮ ಪರಿಶ್ರಮದಿಂದ ಉತ್ತಮ ಫಲಿತಾಂಶ ಗಳಿಸುವುದನ್ನೇ ಅವರು ಬಯಸುತ್ತಾರೆ. ನಿಮ್ಮ ಯಶಸ್ಸೇ ಶಿಕ್ಷಕರಿಗೆ ಸಂತೋಷವನ್ನು ನೀಡುತ್ತದೆ ಎಂದು ಶುಭ ಹಾರೈಸಿದರು.
ಪರೀಕ್ಷೆಯನ್ನು ಹಬ್ಬದಂತೆ ಬರಮಾಡಿಕೊಳ್ಳಬೇಕು, ಯಾವುದೇ ರೀತಿಯ ಅಂಜಿಕೆಗೆ ಅವಕಾಶ ಕೊಡಬಾರದು. ವಿದ್ಯಾರ್ಥಿಗಳು ಮೊದಲು ಟಿವಿ ಮತ್ತು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ, ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸಬೇಕು ನಿರಂತರ ಓದಿನ ಮೂಲಕ ತಮ್ಮ ಜೀವನದ ಗುರಿಯನ್ನು ಮುಟ್ಟಬೇಕು. ಜೊತೆಗೆ ಓದಿನ ಜೊತೆ ಆರೋಗ್ಯವೂ ಅಷ್ಟೇ ಮುಖ್ಯವಾಗಿರುವುದರಿಂದ, ಆರೋಗ್ಯದ ಕಡೆಗೂ ಸಮಾನ ಗಮನ ಕೊಡಬೇಕು ಎಂದು ಪತ್ರಕರ್ತ ಸಂಘದ ಅಧ್ಯಕ್ಷ ರವಿ ಬುರನೋಳ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪ್ರಾಂಶುಪಾಲರು ಮಾತನಾಡಿ ಅಧ್ಯಕ್ಷತೆಯ ಮಾತು ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಈ ವರ್ಷ ಶೇ.100 ರಷ್ಟು ಫಲಿತಾಂಶ ಸಾಧಿಸುತ್ತಾರೆ ನನಗೆ ಅಪಾರ ವಿಶ್ವಾಸವಿದೆ. ಇವರು ಪ್ರಾಥಮಿಕ ಹಂತದಿಂದಲೆ ಉತ್ತಮವಾಗಿ ಅಭ್ಯಾಸ ಮಾಡಿಕೊಂಡು ಬಂದಿದ್ದಾರೆ. ಕಾಲೇಜಿನಲ್ಲಿಯೂ ಹೆಚ್ಚು ಪರೀಕ್ಷೆಗಳನ್ನು ಬರೆದು ಅವರ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೀಳ್ಕೊಡುಗೆ ಸಂದರ್ಭದಲ್ಲಿ ಗಾಯತ್ರಿ ಮತ್ತು ತರೋಣ ವಿದ್ಯಾರ್ಥಿಗಳು ತಮ್ಮ ಸ್ನೇಹಿತರೊಂದಿಗೆ ಕಳೆದ ಸ್ಮರಣೀಯ ಕ್ಷಣಗಳನ್ನು ಹಂಚಿಕೊಂಡು, ಕಾಲೇಜಿನ ದಿನಗಳನ್ನು ನೆನಪಿಸಿಕೊಂಡರು. ಸಮಾರಂಭವು ಹೃದಯಸ್ಪರ್ಶಿ ಕ್ಷಣಗಳೊಂದಿಗೆ ಸಮಾಪ್ತಿಯಾಯಿತು.
ಕಾರ್ಯಕ್ರಮದ ಅಂಗವಾಗಿ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಿ ಜೊತೆಯಲ್ಲಿ ಪರೀಕ್ಷೆಯ ಪ್ಯಾಡ್ ಮತ್ತು ಪೆನ್ನುಗಳನ್ನು ಕೊಟ್ಟು ಶುಭ ಹಾರೈಸಿದರು
ಈ ಸಂದರ್ಭದಲ್ಲಿ ಎಸ್ ಎಲ್ ಟಿ ಶಾಲೆಯ ಮುಖ್ಯಗುರುಗಳು ಡೆನ್ಸಿಮುರರೊ, ಶಾನ್ ಬೇಗಂ ರಾಹುಲ್, ತನ್ವೀರ್ ಅಹ್ಮದ್, ಶರಣಪ್ಪ ಎಂ ಟಿ ಪಲ್ಲಿ, ಅಂಬರೀಶ್, ನಾಗೇಶ್ ಡಿ. ಯಲ್ಲಪ್ಪ ದೈಹಿಕ ಶಿಕ್ಷಕರು
ನರೇಂದ್ರ ಸಾಕಾ ಸೇರಿದಂತೆ ಉಪನ್ಯಾಸಕರು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ : ಜಗದೀಶ್ ಕುಮಾರ್ ಭೂಮಾ



















