
ಕೊಪ್ಪಳ / ಗಂಗಾವತಿ : ತಾಲೂಕಿನ ಪವಿತ್ರ ಕ್ಷೇತ್ರವಾದ ಅಂಜನಾದ್ರಿ ಬೆಟ್ಟದ್ದಲ್ಲಿಅಂಜನಾದ್ರಿ ಬೆಟ್ಟದಲ್ಲಿ ಜೈ ಹನುಮಾನ್ ಸಿನಿಮಾ ಮುಹೂರ್ತ ಇಂದು ರವಿವಾರ ನೆರವೇರಿತು. ಕಾಂತಾರ ಚಾಪ್ಟರ್-1 ಚಿತ್ರದ ಅದ್ಭುತ ಯಶಸ್ಸಿನ ಬಳಿಕ ‘ಡಿವೈನ್ ಸ್ಟಾರ್’ ರಿಷಬ್ ಶೆಟ್ಟಿ ಮತ್ತೊಂದು ಪೌರಾಣಿಕ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪತ್ನಿಯೊಂದಿಗೆ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ ರಿಷಬ್ ಮೆಟ್ಟಿಲು ಹತ್ತಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಹು ನಿರೀಕ್ಷಿತ ‘ಜೈ ಹನುಮಾನ್’ ಚಿತ್ರದಲ್ಲಿ ರಿಷಬ್ ಮುಖ್ಯಪಾತ್ರದಲ್ಲಿ ನಟಿಸಲಿದ್ದು, ಚಿತ್ರದ ಮುಹೂರ್ತ ಸಮಾರಂಭವು ಅಂಜನಾದ್ರಿ ಬೆಟ್ಟದಲ್ಲಿ ಅದ್ಧೂರಿಯಾಗಿ ನೆರವೇರಿದೆ. ಈ ಮೂಲಕ ರಿಷಬ್ ಜೈ ಹನುಮಾನ್ ಟೀಂ ಸೇರಿಕೊಂಡಿದ್ದಾರೆ.
ಹನುಮಂತನ ಜನ್ಮಸ್ಥಳವೆಂದೇ ಪ್ರಸಿದ್ಧಿ ಪಡೆದಿರುವ ಅಂಜನಾದ್ರಿ ಬೆಟ್ಟದಲ್ಲಿ ಭಾನುವಾರ ಬೆಳಗಿನ ಜಾವವೇ ಸಿನಿಮಾ ಮುಹೂರ್ತ ಕಾರ್ಯಕ್ರಮ ನಡೆಯಿತು. ದೇವಸ್ಥಾನದ ಘಂಟಾನಾದ, ವೇದಮಂತ್ರಗಳ ಮಧ್ಯೆ ನಡೆದ ಪೂಜಾ ಕಾರ್ಯಗಳು ‘ಜೈ ಹನುಮಾನ್’ ಚಿತ್ರದ ಪ್ರಯಾಣಕ್ಕೆ ಶುಭಾರಂಭ ಸೂಚಿಸಿದೆ.
ಈ ವೇಳೆ ಚಿತ್ರತಂಡದ ಸದಸ್ಯರು, ಸ್ಥಳೀಯ ಭಕ್ತರು ಹಾಗೂ ಸಿನಿ ಅಭಿಮಾನಿಗಳು ಕೂಡ ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















