ಕೊಪ್ಪಳ : ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಕೊಪ್ಪಳ ,
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ,
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಪ್ಪಳ ಮಹಿಳಾ ಸಬಲೀಕರಣ ಘಟಕ ಸಕೀ ಒನ್ ಸ್ಟ್ಯಾಂಪ ಸೆಂಟರ್ ಕೊಪ್ಪಳ, ಶ್ರೀ ಮಹಿಳಾ ಪ್ರತಿದ್ವನಿ ಸಾಮಾಜಿಕ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ (ರಿ. )ಕೊಪ್ಪಳ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸಹಯೋಗದಲ್ಲಿ ಬೇಟಿ ಬಚಾವ್ ಬೇಟಿ ಪಡಾವೋ ೨೦೨೬ ಕಾರ್ಯಕ್ರಮ ಹಮ್ಮಿಕೊಂಡಿದ್ದು , ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಿಗೆ ಸೆಲ್ಫಿ ವಿತ್ ಮದರ್, ಸೆಲ್ಫಿ ವಿತ್ ಫಾದರ್, ಸೆಲ್ಫಿ ವಿತ್ ಬ್ರದರ್ ಎಂಬ ಸೆಲ್ಫಿ ಪರಿಕಲ್ಪನೆ ಇಟ್ಕೊಂಡು ವಿದ್ಯಾರ್ಥಿನಿಯರು ತಮಗೆ ಶೈಕ್ಷಣಿಕ ಬದುಕಿಗೆ ಸ್ಪೂರ್ತಿಯಾದ ಸೆಲ್ಫಿ ತೆಗೆದುಕೊಂಡು ಅವರ ಬಗ್ಗೆ ಒಂದೆರಡು ನುಡಿ ಮುತ್ತುಗಳನ್ನು , ಚುಟುಕುಗಳನ್ನು, ವ್ಯಾಖ್ಯಗಳನ್ನು ಬರೆಯುವುದು ಮತ್ತು ಚೆನ್ನಾಗಿ ಬರೆದಂತಹ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು. ಹಾಗೂ ಅಕ್ಕಪಡೆ ಯವರು ವಿದ್ಯಾರ್ಥಿನಿಯರಿಗೆ ಅವರ ಕಾರ್ಯ ವೈಖರಿಯನ್ನು ಸಂಪೂರ್ಣವಾಗಿ ತಿಳಿ ಹೇಳಿದರು. ಹೆಣ್ಣು ಮಗುವಿನ ರಕ್ಷಣೆ, ಹೆಣ್ಣು ಮಗುವನ್ನು ಉಳಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂಬುದನ್ನು ತಿಳಿಸಿಕೊಟ್ಟರು.
ಈ ಒಂದು ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರು ಡಾ. ಗಣಪತಿ ಕೆ ಲಮಾಣಿ, ರಾಜ್ಯಶಾಸ್ತ್ರದ ಮುಖ್ಯಸ್ಥರು ಡಾ. ಗವಿಸಿದ್ದಪ್ಪ ಮುತ್ತಾಳ , ಇತಿಹಾಸ ವಿಭಾಗದ ಮುಖ್ಯಸ್ಥರು ಶ್ರೀಮತಿ ನಾಗರತ್ನ ತಮ್ಮೇನಾಳ, ವಾಣಿಜ್ಯ ಶಾಸ್ತ್ರ ಮುಖ್ಯಸ್ಥರು ಶ್ರೀವಿಟ್ಟೋಬಾ , ಜಿಲ್ಲಾ ಯೋಜನಾ ನಿರ್ದೇಶಕರು ನಟರಾಜ್ ಸರ್, ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳು ಶ್ರೀಮತಿ ರೋಹಿಣಿ ಯವರು,ಶ್ರೀ ಮಹಿಳಾ ಪ್ರತಿಧ್ವನಿ ಸಾಮಾಜಿಕ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆಯ ಅಧ್ಯಕ್ಷರಾದ ಡಾ.ಗೀತಾ ಮುತ್ತಾಳ, ಕರ್ನಾಟಕ ಜನ ರಕ್ಷಣಾ ಸಂಘಟನೆ ರಾಜ್ಯ ಅಧ್ಯಕ್ಷರಾದ ಕುಮಾರ್ ಎಂಪಿ ಗವಿ ಹೂಗಾರ ,ಸಖಿ ಒನ ಆಡಳಿತ ಅಧಿಕಾರಿ ಶ್ರೀಮತಿ ಯಮುನಾ , ಮಹಿಳಾ ಸಬಲೀಕರಣ ಜನರಲ್ ಸ್ಪೆಷಲಿಸ್ಟ್ ಫಾತಿಮಾ ಹಾಗೂ ಸಖಿ ಒನ್ ಸೋಶಿಯಲ್ ವರ್ಕರ್ ಹುಲಿಗೆಮ್ಮ ಹಾಗೂ ಉಪನ್ಯಾಸಕರಾದ ಸುಧಾಕರ, ಕುಮಾರಿ ಅಕ್ಕಮ್ಮ, ಉಮೇಶ ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.