
ಕೊಪ್ಪಳ/ ಕಾರಟಗಿ : ಬಿಜೆಪಿ ಯುವ ಮುಖಂಡ ಪ್ರಭುರಾಜ್ ಬೂದಿಯವರ ಮನೆಗೆ ಆಗಮಿಸಿದ ಶ್ರೀರಾಮುಲು ಅವರು ಕುಶಲೋಪಚಾರ ವಿಚಾರಿಸಿದರು. ಪಾನೀಯ, ಉಪಹಾರದ ನಂತರ ಕಾರ್ಯಕರ್ತರು, ಅಭಿಮಾನಿಗಳು, ಪಕ್ಷದ ಮುಖಂಡರು, ಶ್ರೀರಾಮುಲು ಇವರಿಗೆ ಶಾಲು ಹೊದಿಸಿ, ಪುಷ್ಪ ಮಾಲೆ ಹಾಕಿ ಸನ್ಮಾನಿಸಿ ಗೌರವಿಸಿದರು.

ಬಳಿಕ ಮಾತನಾಡಿದ ಅವರು ಬಿಜೆಪಿ ಕಾರ್ಯಕರ್ತರು ಜನರ ಮಧ್ಯೆ ಕೆಲಸ ಮಾಡುವ ಮೂಲಕ ಪಕ್ಷದ ಸಂಘಟನೆ ಬಲಪಡಿಸಬೇಕು, ಕೇಂದ್ರದ ಹಾಗೂ ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿ ಜಾರಿಗೆ ತರಲಾದ ಜನಪರ ಕಾರ್ಯಕ್ರಮಗಳನ್ನು ನೆನಪು ಮಾಡಿಕೊಡಬೇಕು, 2028ರ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಮತ್ತೆ ಅಧಿಕಾರದ ಗದ್ದುಗೆ ಏರಲಿದೆ. ಅದಕ್ಕೆ ಪೂರಕವಾಗಿ ಕಾರ್ಯಕರ್ತರು, ದಕ್ಷ ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡಿ ಜನರ ಕಷ್ಟಗಳಿಗೆ ಸ್ಪಂದಿಸಬೇಕು. ರಾಜ್ಯ ಕಾಂಗ್ರೆಸ್ ಸರಕಾರದ ಜನ ವಿರೋಧಿ ನೀತಿಗಳ ಬಗ್ಗೆ ಜನರ ಗಮನ ಸೆಳೆಯಲು ಕಾರ್ಯಕರ್ತರು ನಿರಂತರ ಚಟುವಟಿಕೆಯೊಂದಿಗೆ ಶ್ರಮಿಸಬೇಕು. ಕೇಂದ್ರದ ನರೇಂದ್ರ ಮೋದಿ ಅವರ ಆಡಳಿತ ದೇಶಕ್ಕೆ ಮಾದರಿಯಾಗಿದೆ. ಕೇಂದ್ರದ ಬಿಜೆಪಿ ನೇತೃತ್ವದ ಸರಕಾರದ ಜನಪರ ಯೋಜನೆಗಳನ್ನು ಮನೆ ಮನೆಗೂ ತಲುಪಿಸುವ ಮೂಲಕ ಪಕ್ಷ ಬಲವರ್ಧನೆಗೆ ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಬೂದಿ ಪ್ರಭುರಾಜ್ ನಾಯ್ಕ, ಗುರುನಗೌಡ ಪಾಟೀಲ್, ದೇವಣ್ಣ ನಾಯಕ ನೆಕ್ಕಂಟಿ, ನಾಗರಾಜ್, ದೇವರಾಜ್ ಜೂರಟಗಿ, ಸುರೇಶ್ ಧಡೇಸೂಗೂರು, ಮಂಜುನಾಥ್ ತೊಂಡ್ಯಾಳ್ ಅಂಬರೀಶ್ ನಾಯಕ್, ಶರಣಪ್ಪ ಗದ್ದಿ ಸೇರಿದಂತೆ ಅನೇಕ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಪ್ರಭುರಾಜ್ ಬೂದಿ ಅವರ ಕುಟುಂಬದವರು ಇದ್ದರು.
ವರದಿ ಅಮರೇಶ ನಾಯಕ



















