ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸ್ವಚ್ಛತಾ ಜಾಥಾ, “ವೇಸ್ಟ್ ಟು ಆರ್ಟ್” ಸ್ಪರ್ಧೆ, ವಸ್ತು ಪ್ರದರ್ಶನ, ಸೆಲ್ಫಿ ಪಾಯಿಂಟ್, ಸಹಿ ಅಭಿಯಾನ

ಬೈಲಹೊಂಗಲ ನಗರಸಭೆ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ ಮಿಷನ್ (ನ)-2.0 ಯೋಜನೆಯ ಐ.ಇ.ಸಿ. ಘಟಕದಡಿ ಘನತ್ಯಾಜ್ಯ ನಿರ್ವಹಣೆ ಜಾಗೃತಿಗಾಗಿ ಸ್ವಚ್ಛತಾ ಜಾಥಾ, “ವೇಸ್ಟ್ ಟು ಆರ್ಟ್” (ತ್ಯಾಜ್ಯದಿಂದ ಕಲೆ) ಸ್ಪರ್ಧೆ, ವಸ್ತು ಪ್ರದರ್ಶನ, ಸೆಲ್ಫಿ ಪಾಯಿಂಟ್, ಸಹಿ ಅಭಿಯಾನವನ್ನು ಆಯೋಜಿಸಲಾಯಿತು.

ಸನ್ಮಾನ್ಯ ಶ್ರೀ ಮಹಾಂತೇಶ ಎಸ್. ಕೌಜಲಗಿ ಶಾಸಕರು ಬೈಲಹೊಂಗಲ ಮತಕ್ಷೇತ್ರ ರವರು ನಗರದ ಡಾ|| ಬಿ. ಆರ್. ಅಂಬೇಡ್ಕರ ಉದ್ಯಾನವನದಿಂದ ಸ್ವಚ್ಛತಾ ಜಾಥಾ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. 200 ಕ್ಕೂ ಹೆಚ್ಚು ವಿದ್ಯಾರ್ಥಿ-ವಿದ್ಯಾರ್ಥಿನಿಯರೊಂದಿಗೆ ಸಾಗಿದ ಜಾಥಾ ಶೂರ ಸಂಗೊಳ್ಳಿ ಉದ್ಯಾನವನದವರೆಗೆ ಸಾಗಿತು. ಸಾರ್ವಜನಿಕರಲ್ಲಿ ಕಸ ವಿಂಗಡಣೆ, ಪ್ಲಾಸ್ಟಿಕ್ ನಿಷೇಧ ಹಾಗೂ ತಮ್ಮ ಸುತ್ತಮುತ್ತಲಿನ ಪರಿಸರವನ್ನು ನೈರ್ಮಲ್ಯದಿಂದ ಇಟ್ಟುಕೊಳ್ಳುವ ಬಗ್ಗೆ ಅರಿವು ಮೂಡಿಸುವ ಘೋಷಣೆಗಳನ್ನು ಕೂಗುವ ಮೂಲಕ ವಿದ್ಯಾರ್ಥಿಗಳು ಜಾಗೃತಿ ಮೂಡಿಸಿದರು.

ನಂತರ ಶೂರ ಸಂಗೊಳ್ಳಿ ಉದ್ಯಾನವನದ ಹತ್ತಿರ ಆಯೋಜಿಸಿದ ಘನತ್ಯಾಜ್ಯ ವಸ್ತು ನಿರ್ವಹಣೆ ವ್ಯವಸ್ಥೆಯ ವಸ್ತು ಪ್ರದರ್ಶನ ಮತ್ತು ತ್ಯಾಜ್ಯದಿಂದ ಕಲೆ ಸ್ಪರ್ಧೆಯನ್ನು ಉದ್ಘಾಟಿಸಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ 12 ಜನ ವಿದ್ಯಾರ್ಥಿಗಳು ತಮ್ಮ ಅದ್ಭುತ ಸೃಜನಶೀಲತೆಯನ್ನು ಬಳಸಿ ಹಳೆಯ ಪ್ಲಾಸ್ಟಿಕ್ ಬಾಟಲಿಗಳು, ರಟ್ಟು, ದಿನಪತ್ರಿಕೆ, ಮತ್ತು ಇತರ ಒಣ ತ್ಯಾಜ್ಯಗಳಿಂದ ಆಕರ್ಷಕ ಕಲಾಕೃತಿಗಳು, ಗೃಹೋಪಯೋಗಿ ವಸ್ತುಗಳು ಹಾಗೂ ಪರಿಸರ ಸಂರಕ್ಷಣೆಯ ಮಾದರಿಗಳನ್ನು ತಯಾರಿಸಿ ಪ್ರದರ್ಶಿಸಿದರು. ಈ ವಸ್ತು ಪ್ರದರ್ಶನವು ವೀಕ್ಷಕರಿಗೆ ತ್ಯಾಜ್ಯದ ಮರುಬಳಕೆಯ ಮಹತ್ವವನ್ನು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿಕೊಟ್ಟಿತು. ಇದೇ ವೇಳೆ ನಗರಸಭೆಯಿಂದ ಘನತ್ಯಾಜ್ಯ ವಸ್ತು ನಿರ್ವಹಣಾ ವ್ಯವಸ್ಥೆಯ ಬಗೆಗಿನ ಮಾದರಿಯನ್ನು ಮತ್ತು ಘನತ್ಯಾಜ್ಯ ವಸ್ತು ನಿರ್ವಹಣೆ ಘಟಕದಲ್ಲಿ ತಯಾರಿಸಿದ ಎರೆಹುಳು ಗೊಬ್ಬರವನ್ನು ಪ್ರದರ್ಶನ ಮಾಡಲಾಯಿತು.

ಈ ವೇಳೆ ಪುರಸಭೆಯ ಮಾಜಿ ಅಧ್ಯಕ್ಷರಾದ ಶ್ರೀ ವಿಜಯ ಶ್ರೀಶೈಲ ಬೋಳನ್ನವರ, ಶ್ರೀ ಬಾಬು ಬಸಪ್ಪ ಕುಡಸೋಮಣ್ಣವರ ಸದಸ್ಯರಾದ ಶ್ರೀಮತಿ ದಿಲಶಾದ ನದಾಫ, ನಗರಸಭೆಯ ಪೌರಾಯುಕ್ತರಾದ ಶ್ರೀ ಈಶ್ವರ ಸಿದ್ನಾಳ, ಕಛೇರಿ ವ್ಯವಸ್ಥಾಪಕ ಶ್ರೀ ಎಮ್. ಆಯ್. ಕುಟ್ರಿ, ಕಮ್ಯೂನಿಟಿ ಅಪೇರ್ಸ ಆಫೀಸರ್ ಶ್ರೀ ಆರ್. ಎಸ್. ಹಿಟ್ಟಣಗಿ, ಶ್ರೀ ಬಿ. ಆಯ್. ಗುಡಿಮನಿ, ಶ್ರೀ ಸುರೇಶಗೌಡ ಪಾಟೀಲ, ಶ್ರೀ ಎ. ವಾಯ್. ಹೆಗಡೆ, ಶ್ರೀ ಯಲ್ಲನಗೌಡ ಪಾಟೀಲ, ಶ್ರೀ ಎಸ್. ಎಸ್. ನರಗುಂದ, ಶ್ರೀ ಡಿ. ಎಮ್. ಖಲೀಫ್, ಶ್ರೀಮತಿ ಲಕ್ಷ್ಮೀ ಮಾದರ, ಶ್ರೀ ಬಿ. ಎ. ಖಾನಪ್ಪನವರ, ಶ್ರೀ ವಿನಾಯಕ ತೋಟಗಿ, ಶ್ರೀ ಶಂಕರ ಕೋಟಗಿ, ಶ್ರೀ ರುದ್ರಯ್ಯ ಚಿಕ್ಕಮಠ, ಶ್ರೀ ಸಿದ್ರಾಮ ತಟವಾಟಿ, ಶ್ರೀ ಅಶೋಕ ಹುಲ್ಲೆನ್ನವರ, ಶ್ರೀ ಬಸವರಾಜ ನೇಸರಗಿ, ಶ್ರೀ ಬಸವರಾಜ ಕುಡಸೋಮಣ್ಣವರ, ಶ್ರೀ ಮಡಿವಾಳ ಕಲಾದಗಿ, ಶ್ರೀಮತಿ ಮಾಧುರಿ ರಾಮಗುಂಡಿ, ಶ್ರೀಮತಿ ಶಿವಲೀಲಾ ಕರಿಬಾಳೆ, ಕು. ಕಾವ್ಯಾ ಪಾಟೀಲ, ಶ್ರೀಮತಿ ಸವಿತಾ ಹರಕುಣಿ, ಶ್ರೀಮತಿ ಜ್ಯೋತಿ ಹಿರೇಮಠ, ಕು. ರೂಪಾ ಪಾಟೀಲ, ಶ್ರೀಮತಿ ಸುವರ್ಣಾ ಬೆಳವಡಿ ಮತ್ತು ಕಾಲೇಜುಗಳ ಉಪನ್ಯಾಸಕರು ಮತ್ತು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

ವರದಿ ಮಂಜು ಎಂ. ಚಿಕ್ಕಣ್ಣವರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!