ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅಂಬೇಡ್ಕರ್ ಚಿಂತನೆಗಳು ನಾಡಿಗೆ ಬೆಳಕು : ಕುಮಾರ ಸಮತಳ

ಬಳ್ಳಾರಿ / ಕಂಪ್ಲಿ : ಸಮಾಜದಲ್ಲಿ ಒಳ್ಳೆಯ ಬದುಕು ಕಟ್ಟಿಕೊಳ್ಳಲು ಸರ್ಕಾರದ ಸೌಲಭ್ಯಗಳು ಅಗತ್ಯವಾಗಿವೆ ಎಂದು ಕರ್ನಾಟಕ ಜನಶಕ್ತಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಕುಮಾರ ಸಮತಳ ಹೇಳಿದರು. ಪಟ್ಟಣದ ಅತಿಥಿ ಗೃಹದಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಶನಿವಾರ ಆಯೋಜಿಸಿದ್ದ ಕಂಪ್ಲಿ ತಾಲೂಕು ಮಟ್ಟದ ಕಾರ್ಯಾಗಾರ ಶಿಬಿರದ ಅಧ್ಯಕ್ಷತೆವಹಿಸಿ ಮಾತನಾಡಿ, ನೊಂದ ಜನಕ್ಕೆ ನ್ಯಾಯ ಸಿಗಬೇಕು. ಅಸಮಾನತೆ ತೊಲಗಬೇಕು. ಸಮಾನತೆ ಪ್ರತಿಯೊಂದು ಹಂತದಲ್ಲಿ ದೊರಕಬೇಕು. ಸಾಮಾಜಿಕ ಬದಲಾವಣೆಯ ಆಶಯದೊಂದಿಗೆ ರಾಜ್ಯದಲ್ಲಿ ಮಾನವ ಬಂಧುತ್ವ ವೇದಿಕೆಯು ಯಾವುದೇ ಪ್ರಚಾರವಿಲ್ಲದೆ ಜನಪರ ಕೆಲಸ ಮಾಡುತ್ತಿದೆ. ಆಧುನಿಕ ಸಂಧರ್ಭದಲ್ಲೂ ನಾವು ಮೌಢ್ಯ ಆಚರಣೆಗೆ ಬೆನ್ನು ಹತ್ತಿ ಅನೇಕ ಸಮಸ್ಯೆಗಳನ್ನು ಸಮಾಜ ಎದುರಿಸುತ್ತಿರುವುದನ್ನು ಕಾಣಬಹುದು. ವೈಜ್ಞಾನಿಕ ಮತ್ತು ಅಂಬೇಡ್ಕರ್ ಚಿಂತನೆಗಳು ನಾಡಿಗೆ ಬೆಳಕಾಗಿವೆ ಎಂದರು. ನಂತರ ಮಾನವ ಬಂಧುತ್ವ ವೇದಿಕೆಯ ತಾಲೂಕು ಅಧ್ಯಕ್ಷ ಬಿ.ನಬೀ ಸಾಬ್ ಬೆಳಗೋಡ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಾನವೀಯತೆಯೇ ನಮ್ಮ ಧರ್ಮ, ಸಂವಿಧಾನವೇ ನಮ್ಮ ಧರ್ಮಗ್ರಂಥ ಎಂಬ ಉದ್ದೇಶದೊಂದಿಗೆ ಜನಜಾಗೃತಿ ಮೂಡಿಸುವ ಜೊತೆಗೆ ಜನಪರ ಕೆಲಸ ಮಾಡಲಾಗುತ್ತಿದೆ. ಮೌಢ್ಯಗಳನ್ನು ತೊಲಗಿಸುವ ಜೊತೆಗೆ ನೊಂದ ಮಾನವ ಜನಾಂಗಕ್ಕೆ ನ್ಯಾಯ ದೊರಕಬೇಕೆಂಬ ರಾಜ್ಯದಲ್ಲಿ ಮಾನವ ಬಂಧುತ್ವ ವೇದಿಕೆ ಸ್ಥಾಪನೆಗೊಂಡಿದೆ. ಯುವ ಜನತೆಯೂ ಇಂತಹ ವೇದಿಕೆಗೆ ಬೆಂಬಲ ನೀಡಬೇಕು. ವೇದಿಕೆಯ ಧ್ಯೇಯೋದ್ದೇಶಗಳೊಂದಿಗೆ ಜನರಿಗೆ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು ಎಂದರು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಹಬೀಬ್ ರೆಹಮಾನ್, ವಿಭಾಗೀಯ ಸಂಚಾಲಕ ಇರ್ಫಾನ್, ಜಿಲ್ಲಾ ಸಂಚಾಲಕ ವಿಜಯಕುಮಾರ, ಮುಖಂಡರಾದ ಎಂ.ಸುಧೀರ್, ನಾಯಕರ ವೆಂಕೋಬ, ಲಕ್ಷ್ಮಣ, ಹೆಚ್.ಗುಂಡಪ್ಪ, ಹೆಚ್.ಮರಿಯಪ್ಪ, ವಸಂತರಾಜ ಕಹಳೆ, ಆರ್.ಪಿ.ಶಶಿಕುಮಾರ, ಹೆಚ್.ಕುಮಾರ, ಸಣಾಪುರ ಮರಿಸ್ವಾಮಿ, ಕೊಟ್ಟಾಲ್ ವಿರೇಶ, ವಾಸುಕುಮಾರ, ರಾಜಾಭಕ್ಷಿ, ಯಲ್ಲಪ್ಪ, ಅಕ್ಕಿ ಜಿಲಾನ್, ಎಸ್.ರಾಮಪ್ಪ, ರವಿ ಮಣ್ಣೂರು ಸೇರಿದಂತೆ ಸಂಘ-ಸಂಸ್ಥೆಯವರು, ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!