ಬಳ್ಳಾರಿ / ಕಂಪ್ಲಿ : ಸ್ಥಳೀಯ ವಾಸವಿ ಕನ್ನಡ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ವಾಸವಿ ವಿದ್ಯಾ ಸಂಸ್ಥೆಯ ನೂತನ ಕಾರ್ಯಕಾರಿ ಮಂಡಳಿ ಜಾರಿಗೆ ಬಂದಿತು.
ಅಧ್ಯಕ್ಷರಾಗಿ ಜಿ.ರಾಜಾರಾವ್, ಉಪಾಧ್ಯಕ್ಷರಾಗಿ ವಿ.ರಾಮಲಿಂಗಯ್ಯ, ಕಾರ್ಯದರ್ಶಿಗಳಾಗಿ ಜಿ.ಬಿ.ಕೊಟೇಶ್ವರ, ಸಹ ಕಾರ್ಯದರ್ಶಿಗಳಾಗಿ ಕೆ.ಸುರೇಂದರ್, ಖಜಾಂಚಿಯಾಗಿ ಡಿ.ವಿ.ಸತ್ಯನಾರಾಯಣ ಹಾಗೂ ನಿರ್ದೇಶಕರಾಗಿ ಜೆ.ತಿಪ್ಪಯ್ಯಶೆಟ್ಟಿ, ಡಿ.ಗುರುಕೃಷ್ಣ, ಟಿ.ಬಾಲಯ್ಯ, ಕೆ.ವಿ.ಸಂದೀಪ್, ಜೆ.ಶೇಖರಪ್ಪ, ಜೆ.ವೆಂಕಟೇಶ್, ಅನಿಲ್ಕುಮಾರ್, ಸಿ.ನಾಗೇಶ್ವರರಾವ್, ಸಿ.ಸುನಿಲ್, ಜಿ.ಪವನ್ ಕುಮಾರ್ ಇವರು ಸರ್ವಾನುಮತದಿಂದ ಆಯ್ಕೆಗೊಂಡು ನಂತರ ಅಧಿಕಾರ ಪದಗ್ರಹಣ ಮಾಡಿದರು. ಈ ಸಂದರ್ಭದಲ್ಲಿ ನಿಕಟ ಪೂರ್ವ ಅಧ್ಯಕ್ಷರಾದ ಡಿ.ಶ್ರೀಧರ್ ಶೆಟ್ಟಿ, ಕಾರ್ಯದರ್ಶಿ ಹೆಚ್.ಎನ್.ನಟರಾಜ್, ಆರ್ಯವೈಶ್ಯ ಸಮಾಜದ ಅಧ್ಯಕ್ಷ ಡಿ.ವಿ.ಸುಬ್ಬರಾವ್, ಧರ್ಮ ಕರ್ತರಾದ ವೈ.ಚಂದ್ರಮೋಹನ್ ಶೆಟ್ಟಿ, ಆರ್ಯ ವೈಶ್ಯ ಸಮಾಜದ ಕಾರ್ಯದರ್ಶಿ ಟಿ.ನರಸಿಂಹರಾವ್, ವಾಸವಿ ಯುವಜನ ಸಂಘದ ಡಿ.ಮಂಜೇಶ್ ಹಾಗೂ ಶಾಲೆಯ ಸಿಬ್ಬಂದಿ ವರ್ಗ ಹಾಗೂ ಆರ್ಯವೈಶ್ಯದ ಮುಖಂಡರು, ನಿಕಟ ಪೂರ್ವ ನಿರ್ದೇಶಕರು ಸೇರಿದಂತೆ ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















