ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹೆಣ್ಣು ಅಬಲೆಯಲ್ಲ ಸಬಲೆ

ವಿಶೇಷ ವರದಿ : ಜಿಲಾನಸಾಬ್ ಬಡಿಗೇರ್

ಮಹಿಳೆಯರು ಸೃಷ್ಟಿಯ ಶಕ್ತಿ, ಕರುಣೆ, ಮತ್ತು ಸಹನೆಯ ಪ್ರತಿರೂಪವಾಗಿದ್ದು, ಸಮಾಜದ ಬೆನ್ನೆಲುಬಾಗಿದ್ದಾರೆ. “ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ” ಎಂಬ ಶ್ಲೋಕವು ಮಹಿಳೆಯನ್ನು ಗೌರವಿಸುವಲ್ಲಿ ದೇವತೆಗಳು ನೆಲೆಸುತ್ತಾರೆ ಎಂದು ತಿಳಿಸುತ್ತದೆ.

ಮಹಿಳೆ ಅಬಲೆಯಲ್ಲ, ಸಬಲೆ ಎಂಬುದು ಇಂದಿನ ಸಮಾಜದಲ್ಲಿನ ಸತ್ಯ. ಮಹಿಳೆಯರು ಶಿಕ್ಷಣ, ಉದ್ಯೋಗ, ಕ್ರೀಡೆ, ಮತ್ತು ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಪುರುಷರಿಗೆ ಸಮಾನವಾಗಿ, ಕೆಲವೊಮ್ಮೆ ಅವರಿಗಿಂತ ಮಿಗಿಲಾಗಿ ಸಾಧನೆ ಮಾಡುತ್ತಿದ್ದಾರೆ. ಆತ್ಮಸ್ಥೈರ್ಯ, ಮಾನಸಿಕ ಶಕ್ತಿ ಮತ್ತು ಕಠಿಣ ಪರಿಶ್ರಮದ ಮೂಲಕ ಕುಟುಂಬದ ಜವಾಬ್ದಾರಿ ನಿಭಾಯಿಸುವುದರೊಂದಿಗೆ ಸಮಾಜದಲ್ಲಿ ಸಬಲೆಯಾಗಿ ಹೊರಹೊಮ್ಮಿದ್ದಾರೆ.

ಹೆಣ್ಣಿನ ಮನಸ್ಸನ್ನು ಅರಿಯಲಾಗದು ಸಾಮಾನ್ಯವಾಗಿ ಹೇಳುವ ಮಾತು.ಆಕೆಯ ಅಂತರಂಗವನ್ನು ಅರ್ಥೈಸಿಕೊಳ್ಳುವವರು ಬೆರಳೆಣಿಕೆಯ ಮಂದಿ ಮಾತ್ರ. ಆಕೆ ಎಲ್ಲವನ್ನೂ, ಎಲ್ಲರಲ್ಲಿಯೂ ಹೇಳಿಕೊಳ್ಳಲಾರಳು. ಅದು ಸಾಧುವೂ ಅಲ್ಲ. ಮನೆಯ ಗೌಪ್ಯತೆಯನ್ನು ಬೀದಿರಂಪ ಹಾದಿರಂಪ ಮಾಡಬಾರದು. ಕ್ಷಮಯಾಧರಿತ್ರಿಯಾಗಿ, ಸಹನೆಯಿಂದ ವರ್ತಿಸುವುದು ಆಕೆಗೂ, ಮನೆತನಕ್ಕೂ ಕ್ಷೇಮ. ಮನೆಯ ಸದಸ್ಯರು ಜೊತೆಗೂಡಿ ಸಹಕರಿಸಿದರೆ ಬಾಳು ನಂದನ.

ಮನೆಯ ಬೆಳಗುವ ಜ್ಯೋತಿ ಅವಳು,
ಹೊರ ಜಗತ್ತಿನ ಕೀರ್ತಿ ಅವಳು,
ಅಡುಗೆಮನೆಯಿಂದ ಆಕಾಶದವರೆಗೆ,
ಸಾಧನೆಯ ಪಥದಿ ಮುನ್ನುಗ್ಗುವಳು,
ಕಣ್ಣಲಿ ಕನಸು, ಮನದಲಿ ಛಲ,
ನೋವನು ನುಂಗಿ ತೋರುವಳು ಬಲ,
ತಾಯಿಯಾಗಿ ಮಮತೆ, ಪತ್ನಿಯಾಗಿ ಸಾಥ್,
ಸಮಾಜಕ್ಕೆ ಅವಳೇ ಸದಾ ಜವಾಬ್ದಾರಿ ಹೂರಣ
ಕಾಯಕವೇ ಅವಳಿಗೆ ಕೈಲಾಸ ಎನ್ನುವವಳು,
ಸ್ವಾವಲಂಬನೆಗೆ ಅವಳೇ ಆಕಾಶ
ಬಂಧನಗಳನೆಲ್ಲಾ ಮುರಿದು ಹಾಕಿ,
ಮಹಿಳಾ ಶಕ್ತಿಯ ತೋರ್ಪಳುವ ಸಾಕ್ಷಿ
ಮನೆಯಂಗಳದಿ ಹೆಣ್ಣು ಮಗು ಓಡಾಡುತ್ತಿದ್ದರೆ ಹೆತ್ತವರಿಗೆ ಸಂತೋಷ, ಆನಂದ, ಬದುಕು ಸುಂದರ. ಹೆಣ್ಣು ದೇವತಾ ಸ್ವರೂಪಿ. ಎರಡು ಮನೆಗಳ ಮನಗಳನ್ನು ಬೆಳಗಿಸಿ ಬೆಳಗುವ ನಂದಾದೀಪ. ಬಾಲ್ಯದಿಂದಲೇ ಉತ್ತಮ ಸಂಸ್ಕಾರ ಮೌಲ್ಯಗಳ ನೀಡಿ, ಆರೋಗ್ಯವಾದ ಬೆಳವಣಿಗೆಗೆ ಎಲ್ಲರೂ ಕಾರಣರಾಗಬೇಕು. ಆಕೆಯ ರಕ್ಷಣೆ ಎಲ್ಲರ ಹೊಣೆಯಾಗಿದೆ.

ಇಂದಿನ ಮಹಿಳೆಯರು ಶಿಕ್ಷಣ, ಆರ್ಥಿಕತೆ, ರಾಜಕೀಯ ಮತ್ತು ತಂತ್ರಜ್ಞಾನದಂತಹ ಪ್ರತಿಯೊಂದು ಕ್ಷೇತ್ರದಲ್ಲೂ ಅಸಾಧಾರಣ ಸಾಧನೆ ಮಾಡುತ್ತಿದ್ದು, ಸಮಾಜದ ಪ್ರಗತಿಯ ಬೆನ್ನೆಲುಬಾಗಿದ್ದಾರೆ. ಕುಟುಂಬ ನಿರ್ವಹಣೆಯ ಜೊತೆಗೆ, ಉದ್ಯಮಶೀಲತೆ, ನಾಯಕತ್ವ ಮತ್ತು ವೈಜ್ಞಾನಿಕ ಕ್ಷೇತ್ರಗಳಲ್ಲಿ ಛಾಪು ಮೂಡಿಸುವ ಮೂಲಕ ಲಿಂಗ ಸಮಾನತೆ ಮತ್ತು ಸಬಲೀಕರಣದ ಸಂಕೇತವಾಗಿದ್ದಾರೆ. ಮಾರ್ಚ್ 8ರಂದು ಆಚರಿಸಲಾಗುವ ಅಂತರರಾಷ್ಟ್ರೀಯ ಮಹಿಳಾ ದಿನವು ಅವರ ಸಾಧನೆಗಳನ್ನು ಗುರುತಿಸಿ, ಗೌರವಿಸುವ ದಿನವಾಗಿದೆ.

ಹೆಣ್ಣು ಮಗಳ ಸ್ವಾಭಿಮಾನವನ್ನು ಕೆಣಕುವುದು ಎಂದರೆ ಕಷ್ಟಗಳನ್ನು ಮೈಮೇಲೆ ಎಳೆದು ಹಾಕಿಕೊಂಡಂತೆ. ಸ್ವಾಭಿಮಾನ ಆಕೆಗೆ ಕೋಟಿ ಹೊನ್ನಿಗಿಂತಲೂ ಮಿಗಿಲು. ಆತ್ಮಾಭಿಮಾನ ಮತ್ತು ಶೀಲವನ್ನು ಕಾಪಿಡುವುದು ಪ್ರತಿಯೋರ್ವ ಹೆಣ್ಣು ಮಗಳ ಆದ್ಯ ಕರ್ತವ್ಯ. ಮನೆ, ಸಮಾಜ,ಪರಿಸರ ಇದಕ್ಕೆ ಪೂರಕ ವಾತಾವರಣ ಕಲ್ಪಿಸಿ ‌ಸಹಕರಿಸಬೇಕು. ಅದೇ ಆಕೆಗೆ ರಕ್ಷಣಾಬೇಲಿ. ಎಲ್ಲಾ ಹೆಣ್ಣುಮಕ್ಕಳನ್ನು ಗೌರವಿಸೋಣ.
ಎಲ್ಲರಿಗೂ ರಾಷ್ಟ್ರೀಯ ಹೆಣ್ಣುಮಕ್ಕಳ ದಿನದ ಶುಭಾಶಯಗಳು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!