ಬಳ್ಳಾರಿ / ಕಂಪ್ಲಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕಂಪ್ಲಿ ತಾಲೂಕಿನ ಎಮ್ಮಿಗನೂರು ಗ್ರಾಮದ ಶ್ರೀ ಗಂಗಾ ಪರಮೇಶ್ವರಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ಪೂಜ್ಯರು ಮಂಜೂರು ಮಾಡಿರುವ 2 ಲಕ್ಷ ಮೊತ್ತದ ಡಿ.ಡಿ ವಿತರಣೆ ಕಾರ್ಯಕ್ರಮ ನಡೆಸಲಾಯಿತು,
ಈ ಸಭೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಯ ಬಳ್ಳಾರಿ ಜಿಲ್ಲೆಯ ನಿರ್ದೇಶಕರಾದ ಶ್ರೀ ರೋಹಿತಾಕ್ಷ ಅವರು ದೇವಸ್ಥಾನ ಕಮಿಟಿ ಸದಸ್ಯರಿಗೆ ವಿತರಣೆ ಮಾಡಿ ಪೂಜ್ಯರು ನಡೆಸುತ್ತಿರುವ ಸೇವಾ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ತಾಲೂಕಿನ ಯೋಜನಾಧಿಕಾರಿಗಳಾದ ಶ್ರೀ ರಾಘವೇಂದ್ರ, ದೇವಸ್ಥಾನ ಕಮಿಟಿ ಅಧ್ಯಕ್ಷರಾದ ಕಾಗಿ ಈರಣ್ಣ, ರಾಮು, ಬಡಿಗೇರ್ ವಿರೇಶ್, ಘನಮಠ ಸ್ವಾಮಿ, ಜೆಡೆಸಿದ್ದಸ್ವಾಮಿ, ಒಕ್ಕೂಟದ ಅಧ್ಯಕ್ಷರಾದ ದೊಡ್ಡ ರಾಜ, ಕೃಷಿ ಅಧಿಕಾರಿ ಸಂಜುಕುಮಾರ್, ವಲಯದ ಮೇಲ್ವಿಚಾರಕ ಮಂಜುನಾಥ್ ಮತ್ತು ಸೇವಾಪ್ರತಿನಿಧಿ ಲಕ್ಷ್ಮಿ ಹಾಗೂ ದೇವಸ್ಥಾನ ಸಮಿತಿ ಸರ್ವ ಸದಸ್ಯರು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















