ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪ್ರಜಾಸೌಧ ಸ್ಥಳ ವಿವಾದ ತೀವ್ರ: 32ನೇ ದಿನಕ್ಕೆ ಮುಂದುವರೆದ ಧರಣಿ

ಸ್ಥಳಕ್ಕೆ ದೇವರ ಹಿಪ್ಪರಗಿ ಶಾಸಕ ರಾಜೂಗೌಡ ಭೇಟಿ ಧರಣಿಗೆ ಸಂಪೂರ್ಣ ಬೆಂಬಲ.

ತಾಳಿಕೋಟೆ: ತಾಲೂಕಿನ ಮೈಲೇಶ್ವರ ಗ್ರಾಮದ ಸಮೀಪ ಪ್ರಜಾಸೌಧ ನಿರ್ಮಾಣಕ್ಕೆ ಗುರುತಿಸಲಾದ ಸ್ಥಳದ ವಿರುದ್ಧ ಜನರ ಆಕ್ರೋಶ ತಾರಕಕ್ಕೇರಿದ್ದು, ಪ್ರಜಾಸೌಧವನ್ನು ತಾಳಿಕೋಟೆ ಪಟ್ಟಣದಲ್ಲಿಯೇ ನಿರ್ಮಿಸಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಸ್ಥಳಕ್ಕೆ ದೇವರ ಹಿಪ್ಪರಗಿ ಶಾಸಕ ರಾಜೂಗೌಡ ಪಾಟೀಲ ಭೇಟಿ ನೀಡಿ ಧರಣಿಗೆ ಬೆಂಬಲ ಸೂಚಿಸಿ ಮಾತನಾಡಿದ ಅವರು ನನ್ನ ಮತಕ್ಷೇತ್ರದ ಎಂಟು ಪಂಚಾಯತಗಳು ಈ ತಾಳಿಕೋಟೆ ತಾಲೂಕಿಗೆ ವ್ಯಾಪ್ತಿಗೆ ಬರುತ್ತವೆ. ನೀವು ಅಧಿವೇಶನದಲ್ಲಿ ಈ ಪ್ರಶ್ನೆಯನ್ನು ಕೇಳಿ ಅಂತಾ ಹೇಳಿದ್ದಿರಿ ಆದರೆ ನಾನು ಸಿ ಎಸ್ ನಾಡಗೌಡ ಅವರಿಗೆ ನಾನು ಭೇಟಿಯಾಗಿ ಈ ವಿಷಯವನ್ನು ಪ್ರಶ್ನೆ ಮಾಡಿದಾಗ ಹೌದು ಸ್ಥಳದ ವಿಷಯವಾಗಿ ಪುನರ್ ಪರಿಶೀಲನೆ ಮಾಡುವುದಾಗಿ ತಿಳಿಸಿರುವುದಕ್ಕೆ ನಾನು ಅಧಿವೇಶನದಲ್ಲಿ ಈ ಪ್ರಶ್ನೆ ಮಾಡಲಿಲ್ಲ ಎಂದರು. ಈ ಕ್ಷೇತ್ರದ ಶಾಸಕರು, ಹಿರಿಯರು ಅದಾರ, ಆರು ಬಾರಿ ಶಾಸಕರು, ಮಂತ್ರಿ ಇದ್ದವರು, ಅವರಿಗೆ ನಾ ಮನವಿಯನ್ನು ಮಾಡಿದೆ ತಮಗೆಲ್ಲಾ ಗೊತ್ತಿರಲಿ ಅಸೆಂಬ್ಲಿಯಲ್ಲಿ ಅವರ ಜೊತೆ ನಾನು ಚರ್ಚೆಯನ್ನು ಮಾಡಿದ್ದೀನಿ. ಮಾಡಿ ಹೋರಾಟ ಮಾಡಾಕತ್ತಾರ, ಈ ರೀತಿ ಅನ್ಯಾಯ ಆಗಾಕತ್ತದ, ಅದು ಬಹಳ ದೂರ ಆಗಾಕತ್ತದ, ಅದರಿಂದ ನಮ್ಮ ಜನರಿಗೂನು ಸಹಿತ ತೊಂದರೆ ಆಗತೈತಿ ಅಂದೆ ಅದಕ್ಕ ನೀವು ಪುನರ್ ಪರಿಶೀಲನೆ ಮಾಡಬೇಕು ಎಂದು ವಿನಂತಿಸಿದೆ. ಗೌರಾಣ ಜಾಗ ಇರುವಂತದ್ದು, ಪಿಡಬ್ಲ್ಯೂಡಿ, ಕೆಇಬಿ ಏನ್ ನೀವು ಹೇಳಿದ್ರಿ, ಇವೆಲ್ಲಾ ವಿಷಯವನ್ನು ನಾನು ಪ್ರಸ್ತಾಪ ಮಾಡಿದೆ. ಮಾಡಿದಾಗ ಅವರು ಇಲ್ಲ ನಮ್ದೇನು ತಕರಾರು ಇಲ್ಲ, ಬೇಕಂದ್ರೆ ಇನ್ನೊಮ್ಮೆ ಪುನರ್ ಪರಿಶೀಲನೆ ಮಾಡೋಣು. ಎಲ್ಲಾರೇ ಸರ್ಕಾರಿ ಜಾಗ ಇದ್ರೂ ಮಾಡೋಣಾ ಎಂದರು ಅದಕ್ಕೆ ನಾನು ಅಸೆಂಬ್ಲಿಯಲ್ಲಿ ಪ್ರಶ್ನೆ ಮಾಡಲಿಲ್ಲ ಮಾತನಾಡಲಿಲ್ಲ ಎಂದರು.
ಅದರ ಜೊತೆ ಈಗಿರುವ ಹಳೀ ತಹಸೀಲ್ದಾರ್ ಆಫೀಸ್ ಏನ್ ಐತಿ ಅಲ್ಲಿ ಜಾಗ ಸಿಕ್ತಿದ್ರೆ ಇನ್ನೂ ಚಲೋ. ಅದರ ಬಗ್ಗೆ ನೀವು ಒಂದ್ ಸ್ವಲ್ಪ ನನಗೆ ಡಿಟೇಲ್ ಆಗಿ ಮಾಹಿತಿ ಕೊಟ್ರೆ ನಾನು ನನ್ನ ಪತ್ರವನ್ನ ತಗೊಂಡು ಡಿಸಿ ಅವರಿಗೆ ಭೇಟಿಯಾಗಿ ಕನ್ವಿನ್ಸ್ ಮಾಡುವಂತ ಕೆಲಸ ಪ್ರಾಮಾಣಿಕವಾಗಿ ಮಾಡ್ತೀನಿ ಅಂತ ಹೇಳಿದರು. ಈ ವಿಷಯ ಇನ್ನೊಂದು ಸಲ ನಾನೇ ಡಿಸಿ ಅವರ ಜೊತೆ ಮಾತಾಡಿ ಸೂಕ್ತವಾದ ಜಾಗ ಹುಡುಕಿ ನ್ಯಾಯ ಕೊಡಿಸುವ ಕೆಲಸ ಮಾಡ್ತೀನಿ ಎಂದರು.
ಪಟ್ಟಣದ ಬಸವೇಶ್ವರ ವೃತ್ತದ ಬಳಿ ನಡೆಯುತ್ತಿರುವ ಈ ಹೋರಾಟ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆಯುತ್ತಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ 32 ದಿನಗಳಿಂದಲೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಶುಕ್ರವಾರ ನಡೆದ ಸತ್ಯಾಗ್ರಹದಲ್ಲಿ ಪತ್ತೇಪುರ ಗ್ರಾಮದ ಹಿರಿಯರು ಮತ್ತು ಯುವಕರು ಭಾರಿ ಸಂಖ್ಯೆಯಲ್ಲಿ ಭಾಗವಹಿಸಿ ಧರಣಿ ನಡೆಸುವ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕಿದರು. ಹೋರಾಟಕ್ಕೆ ಗ್ರಾಮ ಮಟ್ಟದಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ.
“ಪ್ರಜಾಸೌಧಕ್ಕೆ ನಿಗದಿಪಡಿಸಿರುವ ಸ್ಥಳವು ಪಟ್ಟಣದಿಂದ ದೂರದ ನಿರ್ಜನ ಪ್ರದೇಶದಲ್ಲಿದ್ದು, ಮಹಿಳೆಯರು ಮತ್ತು ವಿದ್ಯಾರ್ಥಿನಿಯರ ಸುರಕ್ಷತೆಗೆ ಅಪಾಯಕಾರಿಯಾಗಿದೆ. ಜನಸಾಮಾನ್ಯರಿಗೆ ಸುಲಭವಾಗುವಂತೆ ಪಟ್ಟಣದಲ್ಲಿಯೇ ಸರ್ಕಾರಿ ಜಾಗದಲ್ಲಿ ಕಟ್ಟಡ ನಿರ್ಮಿಸಬೇಕು” ಎಂದು ಧರಣಿ ನಿರತರು ಒತ್ತಾಯಿಸಿದರು.
“ಇದು ಕೇವಲ ಒಂದು ಗ್ರಾಮದ ಹೋರಾಟವಲ್ಲ, ಇಡೀ ತಾಲೂಕಿನ ಹಕ್ಕಿನ ಪ್ರಶ್ನೆ” ಎಂದು ಹೋರಾಟಗಾರರು ಎಚ್ಚರಿಕೆ ನೀಡಿದ್ದು, ಬೇಡಿಕೆ ಈಡೇರಿಸುವವರೆಗೆ ಹೋರಾಟವನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ. ಈ ಹೋರಾಟಕ್ಕೆ ಪತ್ತೇಪುರ ಗ್ರಾಮದ ಎಲ್ಲಾ ಸಮುದಾಯದ ಹಿರಿಯರು ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ.
ಧರಣಿಯಲ್ಲಿ ಪತ್ತೆಪುರ ಗ್ರಾಮದ ಚಂದ್ರಶೇಖರ್ ಚೌದ್ರಿ, ತಿಪ್ಪನಗೌಡ ಸೋಮನಾಳ, ವಿರುಪಾಕ್ಷಿ ಗೌಡ ಸೋಮನಾಳ ಮೈಬುಷಾ ಮಕಂದರ್, ವಿಜಯಕುಮಾರ್ ಅಸ್ಕಿ, ಸುಭಾಷ್ ಸಿಗ್ನಳ್ಳಿ, ಜಟ್ಟೆಪ್ಪ ಪೂಜಾರಿ, ಹಳ್ಳೆಪ್ಪ ತಾಳಿಕೋಟೆ, ನಿಂಗಪ್ಪ ಹೊನ್ನಾಳಿ, ಚೆನ್ನಪ್ಪ ಕಿರದಳ್ಳಿ ಸಿದ್ದಪ್ಪ ಹೊಸಮನಿ,ಮಡಿವಾಳಪ್ಪ ಹೊಸಮನೆ, ಸತೀಶ್ ತಾಳಿಕೋಟೆ, ನಾಗರಾಜು ತಾಳಿಕೋಟಿ,ಮಲ್ಲಪ್ಪ ಕಿರದಳ್ಳಿ, ಲಾಳೆಸಾಬ್ ನದಾಫ್, ಭೀಮರಾಯ ಮಡಿವಾಳರ, ಶರಣಗೌಡ ಹೆಬ್ಬಾಳ್ ದೇವೇಂದ್ರಪ್ಪ ಬಿರಾದಾರ್,ಮಲ್ಲಪ್ಪ ವಾಲಿಕಾರ್, ಶರಣು ದೊಡ್ಡಮನಿ,ರವೀಂದ್ರ ಹೊನ್ನಳ್ಳಿ ಸೇರಿದಂತೆ ಅನೇಕರು ಭಾಗವಹಿಸಿದ್ದರು ಹೋರಾಟ ಸಮಿತಿಯ ಅಧ್ಯಕ್ಷ ದಶರಥಸಿಂಗ್ ಮನಗೂಳಿ, ಎಸ್.ಬಿ. ಕಟ್ಟಿಮನಿ, ಮುತ್ತಪ್ಪ ಚಮಲಾಪುರ, ಕಾಶೀನಾಥ ಮುರಾಳ, ಮುರಿಗೆಪ್ಪ ಸರಶೆಟ್ಟಿ, ದತ್ತು ಹೆಬಸೂರ, ಪರಶುರಾಮ ತಂಗಡಗಿ, ವಿಜಯಸಿಂಗ್ ಹಜೇರಿ, ಮಹೇಶ ಛಲವಾದಿ, ಪ್ರಕಾಶ್ ಹಜೇರಿ, ಮುದಕಪ್ಪ ಬಡಿಗೇರ ಸೇರಿದಂತೆ ಹಲವರು ಹಾಜರಿದ್ದರು.

ವರದಿ ನಜೀರ್ ಚೋರಗಸ್ತಿ, ತಾಳಿಕೋಟೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!