ಕೊಪ್ಪಳದ ಪ್ರಸಿದ್ಧ ಕಾಲೇಜುಗಳಲ್ಲಿ ಒಂದಾದ ಶ್ರೀ ಗವಿಸಿದ್ಧೇಶ್ವರ ಪದವಿ ಕಾಲೇಜಿನಲ್ಲಿ ಈ ದಿನ, ಶಾಯಿರಿಗಳನ್ನು ಕುರಿತು ವಿದ್ಯಾರ್ಥಿಗಳ ಜೊತೆಗೆ
ಉಪನ್ಯಾಸಕ ಶಿವಪ್ರಸಾದ್ ಹಾದಿಮನಿಯವರು ಮಾಹಿತಿಯನ್ನು ಹಂಚಿಕೊಂಡರು. ಈ ಸಂದರ್ಭಕ್ಕೆ ಸಾಕ್ಷಿಯಾಗಿ, ಕಾಲೇಜಿನ ಅರ್ಥಶಾಸ್ತ್ರ ಪ್ರಾಧ್ಯಾಪಕ, ಪ್ರೊ. ಶರಣಬಸಪ್ಪ ಬಿಳಿಯೆಲಿ ಹಾಗೂ ಈ ಕಾರ್ಯಕ್ರಮವನ್ನು ಅಚ್ಚು ಕಟ್ಟಾಗಿ ಆಯೋಜಿಸಿದ ಕನ್ನಡ ಪ್ರಾಧ್ಯಾಪಕರಾದ ಡಾ.ನಾಗರಾಜ ದಂಡೋತಿ, ಅವರು ಉಪಸ್ಥಿತರಿದ್ದರು. ಐಚ್ಛಿಕ ಕನ್ನಡದ
ಹಲವಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು
ಕಾರ್ಯಕ್ರಮ ಯಶಸ್ವಿ ಯಾಗಲು ಕಾರಣವಾದರು. ಇದೇ ಸಂದರ್ಭದಲ್ಲಿ
ಶಾಯಿರಿ ಕವಿಗಳಲ್ಲಿ ಒಬ್ಬರಾದ ಶಿವಪ್ರಸಾದ್ ಹಾದಿಮನಿ ಅವರನ್ನು ಸನ್ಮಾನಿಸಲಾಯಿತು.
- ಕರುನಾಡ ಕಂದ ಪತ್ರಿಕೆ




















