ನನ್ನಯ ನಲ್ಮೆಯ ನಲ್ಲೆ ಅವಳು
ಮನದಲ್ಲಿ ಮನೆಯ ಮಾಡಿಹಳು
ಕಣ್ಣಿಗೆ ಕಾಣಿಸದಂತೆ ನಿಂತಿಹಳು
ಬದುಕಲು ಬಾಳಿಗೆ ಬರುತಿಹಳು
ಬಾನಂಗಳದಿ ಬೆಳಕಿನ ಬೆಡಗಿನಲಿ
ಚಂದದ ಚಂದುಳ್ಳಿಯ ಚಲುವೆಗೆ
ಅರಮನೆಯ ಅರಗಿಣಿಯಾಗು ಅಂದೆ
ಮುದ್ದಾಗಿ ಮುಗುಳ್ನಕ್ಕು ಮುನಿದಳು
ಮಂಜು ಮುಸಕಿದ ಮೋಡದಲ್ಲಿಯೆ
ಚಿತ್ರಿಸುವ ಚಿತ್ತಾರದ ಚಿನ್ಮನಿಯೆ
ಕಾಣುತ್ತಿರುವ ಕಣ್ಣಂಚಿನ ಕಣ್ಮನಿಯೆ
ನಗು ನಗುತಿಹಳು ನನ್ನೊಡತಿಯೆ
ಅವಳೊಂದು ಅಂದದ ಅಂಗಾರಕಳು
ನನ್ನೊಡನೆ ನಲಿದಾಡುತ್ತ ನಲಿವಳು
ಸುಂದರ ಸಂಸಾರ ಸಾಗಿಸುವಳು
ಜೀವನದಲ್ಲಿ ಜೊತೆ ಜೊತೆಯಾಗಿರುವಳು
✍️ ಮಂಜುನಾಥ ಜನವಾಡ
ಕೊಲ್ಹಾರ (ಗಣಿ) ವಿಜಯಪುರ.




















