ಜಗತ್ತಿನ ಅತ್ಯಂತ ಶ್ರೇಷ್ಠ ಸಾಧಕ ಬಾಬಾಸಾಹೇಬ್ ಅಂಬೇಡ್ಕರ್, ಅವರ ಅಪಾರ ಕೊಡುಗೆ ಮತ್ತು ಅವರ ವಿದ್ವತ್ ನ್ನು ಇಡಿ ಜಗತ್ತೇ ಭಾರತದತ್ತ ತಿರುಗಿ ನೋಡು ವಂತೆ ಮಾಡಿದೆ,
ವಿದೇಶದಲ್ಲಿನ ಪ್ರಜ್ಞಾವಂತರು ಬಾಬಾ ಸಾಹೇಬರನ್ನು ಗೌರವಿಸಿ ಅವರ ಚಿಂತನೆಗಳನ್ನು ಅನುಸರಿಸುತ್ತಾರೆ, ಅಂಬೇಡ್ಕರ್ ಜಗತ್ತಿನ ಮೇರು ಶಿಖರ, ಇವರು ತೋರಿದ ದಾರಿ ಜಗತ್ತಿನ ಎಲ್ಲ ನಾಗರೀಕ ಸಮಾಜಕ್ಕೆ ಮಾದರಿಯಾಗಿದ್ದು ಭಾರತ ದೇಶವಲ್ಲದೆ ಜಗತ್ತಿನ ನೂರಾರು ರಾಷ್ಟ್ರಗಳ ಗೌರವಕ್ಕೆ ಪಾತ್ರರಾದ ಏಕೈಕ ಚಿರಂತನ ಡಾ.ಅಂಬೇಡ್ಕರ್ ಭಾರತ ದೇಶದ ಬಲಿತ ಸಮುದಾಯಗಳು ಕಳೆದ 70 ವರ್ಷಗಳಿಂದ ಕೇವಲ ದಲಿತ ಸಮುದಾಯಕ್ಕೆ ಅಂಬೇಡ್ಕರ್ ರನ್ನು ಸೀಮಿತ ಗೊಳಿಸುತ್ತಾ ನಗಣ್ಯ ಮಾಡುತ್ತಾ ಬಂದಿದ್ದಾರೆ, ಬಾಬಾ ಸಾಹೇಬರು ಕೊಡ ಮಾಡಿದ ಸಂವಿಧಾನವನ್ನು ಜವಾಬ್ದಾರಿ ಸರ್ಕಾರಗಳು ಯತಾವತ್ತಾಗಿ ಜಾರಿ ಮಾಡಿದ್ದರೆ ಪ್ರಸ್ತುತ ಭಾರತ ಜಗತ್ತಿನಲ್ಲಿ ಅಗ್ರಮಾನ್ಯ ಸ್ಥಾನದಲ್ಲಿರುತ್ತಿತ್ತು,
ಆದರೆ ಸದಾ ಶ್ರೇಣಿ ಕೃತ ವ್ಯವಸ್ಥೆಯನ್ನೆ ಬಯಸುವ ಮೇಲ್ಪಂಕ್ತಿ ಯ ಸಮುದಾಯಗಳು ತಮ್ಮ ನೆರಳಿನಲ್ಲೇ (ಹಂಗಿನಲ್ಲಿ) ಬದು ಕುವ ಅನಿವಾರ್ಯತೆ ನಿರ್ಮಾಣ ಮಾಡಿಕೊಂಡಿದ್ದಾರೆ.
ದೇವ ದೇವತೆಗಳ ನೆಪದಲ್ಲಿ ಹಬ್ಬ ಹರಿ ದಿನಗಳಲ್ಲಿ ಅಂಧ ಭಕ್ತಿಯ ಮೂಲಕ ಶೋಷಿತರ ಸೇವೆಯನ್ನು ಅಪಾರವಾಗಿ ಬಳಕೆ ಮಾಡಿಕೊಳ್ಳುತ್ತಾ, ಮೇಲ್ವರ್ಗದವರು ಅವರನ್ನು ಸೇವೆಗಷ್ಟೆ ಮೀಸಲು ಬೇರಾವ ವೈಭವದ ಸಂಭ್ರಮಕ್ಕೂ ತಳಸಮುದಾ ಯಗಳು ಅನರ್ಹರು. ದಲಿತರನ್ನು ಭಕ್ತಿಯೆಂಬ ಮೌಢ್ಯದ ಚಕ್ರವ್ಯೂಹದಲ್ಲಿ ಸಿಲುಕಿಸಿ ಅದರಿಂದ ಹೊರ ಬರದಂತೆ ಮಾಡುತ್ತಿದ್ದಾರೆ, ಒಂದು ವೇಳೆ ವಿದ್ಯಾವಂತ ಸಮುದಾಯ ಮೇಲ್ವರ್ಗದ ಇಂತಹ ಧೋರಣೆಗಳನ್ನು ಪ್ರಶ್ನಿಸಿದರೆ ಪರಂಪರೆಯಿಂದ ಬಂದದ್ದು ಎಂದು ಸಮಜಾಯಿಷಿ ನೀಡುತ್ತಾ ಮತ್ತು ಅಂತಹವರನ್ನು ಸಾಮಾಜಿಕವಾಗಿ ಹೊರ ದೂಡುವರು.
ಇಂದು ಜಗತ್ತು ವೈಜ್ಞಾನಿಕವಾಗಿ ಸಾಕಷ್ಟು ಪ್ರಗತಿಯತ್ತ ಸಾಗುತ್ತಿದೆ, ಅಂಗೈ ಯಲ್ಲೇ ಇಡೀ ವಿಶ್ವ ವನ್ನು ನೋಡಬ ಹುದು, ಇಂತಹ ಕಾಲ ಘಟ್ಟದಲ್ಲೂ ಇಂಡಿಯಾ ದೇಶ ದೇವರ ದಿಂಡರ ಭಜನೆಯಲ್ಲಿದ್ದು, ಮೌಢ್ಯ ಭಿತ್ತರಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ,
ಒಮ್ಮೆ ಬಾಬಾ ಸಾಹೇಬ್ ಅಂಬೇಡ್ಕರ್ ಪತ್ನಿ ರಮಾಬಾಯಿ ಯವರು ಪಂಡರಾಪುರದ ವಿಠಲನ ದರ್ಶನಕ್ಕೆ ಕರೆದುಕೊಂಡು ಹೋಗಲು ಕೇಳಿಕೊಂಡರಂತೆ ಅದಕ್ಕೆ ಬಾಬಾ ಸಾಹೇಬರು ಅಲ್ಲಿಗೆ ಹೋಗೋದು ಬೇಡ ದೇವಾಲಯದ ಅರ್ಚಕರು ದೂರದಲ್ಲೇ ನಿಲ್ಲಿಸಿ ಅಪಮಾನಿಸುತ್ತಾರೆ ಎಂದು ರಮಾರನ್ನು ಸಮಾಧಾನ ಮಾಡಿದರಂತೆ, ಬಾಬಾಸಾಹೇ ಬರು ತಳ ಸಮುದಾಯಗಳಿಗೆ ಬಲಿತರ ಹಿಡಿತದಿಂದ ಹೊರ ಬರಲು ಮತ್ತು ತಮ್ಮ ಅಸ್ತಿತ್ವವನ್ನು ಉಳಿಸಿ ಕೊಳ್ಳಲು ಶಿಕ್ಷಣದ ಅನಿವಾರ್ಯತೆಯನ್ನು ಒತ್ತಿ ಹೇಳಿದರು, ಮನುಷ್ಯನಿಗೆ ಆಹಾರ ಎಷ್ಟು ಮುಖ್ಯವೋ ಅಷ್ಟೇ ಶಿಕ್ಷಣವು ಮುಖ್ಯ ಎಂದರು,
ಅಲ್ಲದೆ ಅಂಧಕಾರದಿಂದ ಮುಕ್ತಗೊಳ್ಳಲು ಜಗತ್ತು ಮೆಚ್ಚಿದ ಬುದ್ದ ಮಾರ್ಗದ ಅವಶ್ಯಕವಾಗಿದೆ ಎಂದು ಜಗತ್ತಿನ ಸಾಮರಸ್ಯಕ್ಕೆ ಬುದ್ದನ ಅನಿವಾರ್ಯತೆಯ ಬಗ್ಗೆ ತಿಳಿಯಪಡಿಸಿದರು, ತಾವೇ 1956 ಅಕ್ಟೋಬರ್ 14 ರ ಅಶೋಕ ವಿಜಯದಶಮಿಯಂದು ಐದು ಲಕ್ಷ ಅನುಯಾಯಿಗಳೊಂದಿಗೆ ಬೌದ್ಧ ಧರ್ಮವನ್ನು ಸ್ವೀಕರಿಸಿದರು, ಇದು ವಿಶ್ವದ ಇತಿಹಾಸದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಅಭಿ ಮಾನಿಗಳು ಸೇರಿದ್ದು ಚರಿತ್ರೆಯನ್ನೆ ಸೃಷ್ಟಿಸಿತು.
ಬಾಬಾ ಸಾಹೇಬರು ಇತಿಹಾಸವನ್ನು ಮರೆತವರು ಇತಿ ಹಾಸವನ್ನು ಸೃಷ್ಟಿಸಲಾರರು ಎಂದು ಇತಿಹಾಸದ ಕುರಿತು ಅಭಿಪ್ರಾಯಸಿದ್ದರು. ಶಿಕ್ಷಣ,ವಿವೇಚನೆ, ವೈಜ್ಞಾನಿಕ ಚಿಂತನೆಯ ಬಗ್ಗೆ ತೆರೆದ ಮನಸ್ಸಿನಿಂದ ಆಲೋಚನೆ ಮಾಡಬೇಕು, ಪ್ರಶ್ನೆಗೆ ಉತ್ತರ ಸುಲಭವಾಗಿ ಸಿಗುವಂತಾಗಬೇಕು ಎನ್ನುವ ವಿಚಾರಧಾರೆ ಗಳು ಬಾಬಾಸಾಹೇಬರ ಮೇಲೆ ಅಗಾಧ ಪರಿಣಾಮ ಬೀರಿತು.
ಅದಕ್ಕಾಗಿ ಬುದ್ದನನ್ನು ಒಪ್ಪಿ ಅಪ್ಪಿಕೊಂಡರು. ಹೃದಯ ವೈಶಾಲ್ಯತೆಯನ್ನು ಬೆಳೆಸಿಕೊಂಡು ಅಂಧಕಾರವ ಬಿಡಬೇಕು, ಅಪ್ಪಟ ಮನುಷ್ಯರಾಗಿ ನವ ಸಮಾಜವನ್ನು ನಿರ್ಮಾಣ ಮಾಡಬೇಕು ಎಂಬುದು ಅಂಬೇಡ್ಕರ್ ರವರ ಆಶಯವಾಗಿತ್ತು, ಅದು ನನಸಾಗಿ ಯೆ ಉಳಿದಿದೆ, ನಂತರದ ಕಾಲಘಟ್ಟದಲ್ಲಿ ಬಾಬಾ ಸಾಹೇಬರ ಪ್ರಭಾವಕ್ಕೆ ಒಳಗಾಗಿ ಸಾವಿರಾರು ಮಂದಿ ಪ್ರಜ್ಞಾವಂತರು ನಿರಂತರವಾಗಿ ಧಮ್ಮ ದೀಕ್ಷೆಯನ್ನು ಪಡೆಯುತ್ತಾ ಬಂದಿದ್ದಾರೆ,
ಅದರಲ್ಲಿ ಕೆಲವರು ಬುದ್ದನ ಹಾದಿಯಲ್ಲಿ ಸಾಗುತ್ತಿದ್ಧಾರೆ,
ಅಂಬೇಡ್ಕರ್ ರವರ ಆಶಯದಂತೆ ಇಂದು ಭಾರತದಲ್ಲಿ ಒಟ್ಟು ಬೌದ್ಧರು ಸುಮಾರು 84 ಲಕ್ಷ ಜನಸಂಖ್ಯೆ ಇದೆ,ಅದರಲ್ಲಿ ಕರ್ನಾಟಕದಲ್ಲಿ ಸುಮಾರು 95,710 ಜನರಿದ್ದಾರೆ.
ಅಂಬೇಡ್ಕರ್ ರವರು ವೈದಿಕತೆಯಲ್ಲಿ (ಮನು ಸ್ಮೃತಿ) ಚಾತುರ್ವರ್ಣ ವ್ಯವಸ್ಥೆ ಇದೆ ಚಾತುರ್ವರ್ಣ ಪದ್ಧತಿ ಮಾನವ ಜನಾಂಗಕ್ಕೆ ಅಪಾಯಕಾರಿ ಎಂದಿದ್ದರು, ದುರಾದೃಷ್ಟವ ಶಾತ್ ನಾನು ಹಿಂದೂವಾಗಿ ಹುಟ್ಟಿರಬಹುದು ಏಕೆಂದರೆ ಅದು ನನ್ನ ಕೈಯಲ್ಲಿ ಇರಲಿಲ್ಲ ಆದರೆ ಇಂದು ನಾನು ಹಿಂದೂವಾಗಿ ಸಾಯ ಲಾರೆ, ಒಬ್ಬ ಮನುಷ್ಯ ಈ ಪರಿಯಾಗಿ ತನ್ನ ಮೂಲ ಧರ್ಮ ಬಿಡುತ್ತಾನೆ ಎಂದರೆ ಅದಕ್ಕೆ ಎಂತಹ ಬಲವಾದ ಕಾರಣ ಏನೆಂಬದನ್ನು ಆಧುನಿಕ ಭಾರತದಲ್ಲಿ ಅರಿತವರು ಅವರೇ ಮೊದಲಿಗರು ಎಂದರೆ
ತಪ್ಪಾಗಲಾರದು,
ಜಗತ್ತಿನಲ್ಲಿ ಪ್ರಾಣಿಗಳಿಗಿಂತಲೂ ಕೀಳಾಗಿ ಕಾಣುವ ಯಾವುದಾದರೂ ಧರ್ಮವಿದ್ದರೆ ಅದು ಭಾರತದ ವೈದಿಕ ಧರ್ಮ ಅದಕ್ಕಾಗಿಯೇ ಬಾಬಾ ಸಾಹೇಬರು ಈ ಅಮಾಯನವೀಯ ಹಿಂದೂ ಧರ್ಮ ತ್ಯಜಿಸಿ ಬೌದ್ಧ ಧರ್ಮ ಸ್ವೀಕರಿಸಿದ ಮೇಲೆ ನಾನು ನರಕದಿಂದ ಮುಕ್ತನಾದೆ ಎಂದಿದ್ದರು. ಆದರೆ ಮತೀಯವಾದಿಗಳು ಬಾಬಾ ಸಾಹೇಬರ ಬುದ್ಧರ ಚಿಂತನೆಗಳನ್ನು ಅಳಿಸಿ ಹಾಕಿ ಅಂಬೇಡ್ಕರ್ ಮತ್ತು ಬುದ್ಧರನ್ನು ಮರೆ ಮಾಚುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ,ಅವರು ಶೋಷಿತ ಸಮುದಾಯಗಳ ಮನಸ್ಸಿನಿಂದ ಹೊರತರುವ ಕಾರ್ಯತಂತ್ರಗಳು ನಿರಂತರವಾಗಿದೆ,
ಸಾಂವಿಧಾನಿಕವಾಗಿ ಸರ್ವರಿಗೂ ಸಮ ಬಾಳು ಸಮಪಾಲು ಸಿಗಬೇಕೆನ್ನುವುದು ಅವರ ಆಶಯವಾಗಿತ್ತು. ಆದರೆ ಇಂದು ಒಂದೊಂದು ರಾಜಕೀ ಯ ಪಕ್ಷಗಳು ತಮ್ಮ- ತಮ್ಮ ಓಟ್ ಬ್ಯಾಂಕಿಗಾಗಿ ನೋಟಿನ ಮೂಲಕ ಸಮುದಾಯಗಳ ನಾಯಕರಿಗೆ ಯಾವುದಾದರೊಂದು ಪಕ್ಷದ ಹುದ್ದೆಗೆ ನೇಮಿಸಿ ಕೊಂಡು ತಮ್ಮ ಅಸ್ತ್ರವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಸಾಂವಿಧಾನಿಕ ಮೀಸಲು ಸವಲತ್ತು ಪಡೆದ ಸ್ಪರ್ಶರು ಕೂಡ ಅಂಬೇಡ್ಕರ್ ರನ್ನು ಮರೆ ಮಾಚುತ್ತಿದ್ಧಾರೆ, ಮೀಸಲಾತಿ,ಒಳ ಮೀಸಲಾತಿ ಎಂಬ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸಿ ಹಾಗೂ ಬೇರೆ ಬೇರೆ ಧರ್ಮದವರು ಜನರು ಧಾರ್ಮಿಕ,ರಾಜಕೀಯ, ಸಾಮಾಜಿಕ ಅಸ್ಮಿತೆಗಾಗಿ ಎನಗುತ್ತಿದ್ದಾರೆ, ಇದರಿಂದ ಅನೇಕ ಅಲ್ಪಸಂಖ್ಯಾತ ತಳ ಸಮುದಾಯಗಳು ಸಾಂವಿಧಾನಿಕ ಆಶಯಗಳಿಂದ ವಂಚಿತರಾಗಿದ್ದಾರೆ. ಈ ದೇಶದಲ್ಲಿ ಎಪ್ಪತ್ತು ದಶಕಗಳಿಂದ ಅಧಿಕಾರದಿಂದ ವಂಚಿತ ಬಹುಜನರು ಒಂದಾಗಿ ರಾಜಕೀಯ ಅಧಿಕಾರ ಪಡೆಯಬೇಕು, ರಾಜಕೀಯ ಅಧಿಕಾರವು ಒಂದು ಪ್ರಬಲ ಆಯುಧವಿದ್ಧಂತೆ ಎಂದು ಅಂಬೇಡ್ಕರ್ ರವರ ಅಭಿಪ್ರಾಯಿಸಿದ್ದರು, ಹಾಗಾಗಿ ಬಾಬಾ ಸಾಹೇಬರ ಸಂವಿಧಾನ ಜಾರಿಯಾದರೆ ಮಾತ್ರ ಸರ್ವಾಂಗೀಣ ಪ್ರಗತಿ ಸಾಧ್ಯ.
ಲೇಖನ: ಡಾ.ಸುರೇಶ್, ಎಸ್. ವಡಗಲಪುರ




















