ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಾಣಿಕ್ಯಶೆಟ್ಟಿ ಮನೆಯಲ್ಲಿ ಮಹಾಮನೆ ಅನುಭಾವದ ನುಡಿಗಳು

ಬಾಗಲಕೋಟೆ -ಮುಧೋಳ : ಸುಧಾರಣೆ ಎಂಬುದು ವ್ಯಕ್ತಿ ಸುಧಾರಣೆಯಿಂದಲೇ ಆರಂಭವಾಗಬೇಕೆಂಬ ಆಶಯ ಬಸವಣ್ಣನವರದು. ಕುಟುಂಬ ಒಂದು ಚಿಕ್ಕ ಘಟಕವಾಗಿದ್ದರೂ ಸಮಾಜ ಸುಧಾರಣೆಯು ವ್ಯಕ್ತಿ ಜೀವನ ಅಥವಾ ಕುಟುಂಬ ನೆಲೆಯಿಂದಲೇ ಆರಂಭವಾಗಬೇಕೆಂಬ ಮಹದಾಸೆಯಾಗಿದೆ ಎಂದು ಮರೇಗುದ್ದಿಯ ಅಡವಿಮಠದ ಡಾ‌.ನಿರುಪಾಧೀಶ್ವರ ಮಹಾಸ್ವಾಮಿಗಳು ಹೇಳಿದರು.
ಅವರು ಮುಧೋಳ ತಾಲೂಕಿನ ಸುಕ್ಷೇತ್ರ ಶಿರೋಳ ಗ್ರಾಮದ ಮಾಣಿಕ್ಯಶೆಟ್ಟಿ ಬಂಧುಗಳ “ಮನೆಯಲ್ಲಿ ಮಹಾಮನೆ” ಅನುಭಾವದ ನುಡಿ. ಉಡದಟ್ಟಿ ಜನಪದ ಸಂಭ್ರಮ-2026. ಕಾರ್ಯಕ್ರಮದ ಸಾನಿಧ್ಯ ವಹಿಸಿ ಅಂಜಲಿ. ಭಾಗ್ಯಶ್ರೀ. ಆನಂದ. ಆಕಾಶ. ಸಮರ್ಥ. ಐದು ಮಕ್ಕಳಿಗೆ ಶಾಲು ಮಾಲೆಯನ್ನು ಹಾಕಿ ಆಶೀರ್ವದಿಸಿ ಆಶೀರ್ವಚನವನ್ನು ನೀಡಿದರು.
ಇದೇ ಸಂದರ್ಭದಲ್ಲಿ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳು ಮಾತನಾಡಿ ವ್ಯಕ್ತಿ ಮತ್ತು ವ್ಯಕ್ತಿ ನಡುವಿನ ಸಂಬಂಧಗಳು ಸುಧಾರಿತವಾದರೆ ಆ ಮೂಲಕ ಕುಟುಂಬ ಸುಧಾರಣೆ ಮತ್ತು ಸಮಾಜ ಸುಧಾರಣೆ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮುಧೋಳದ ಪೂಜ್ಯರಾದ ವೆಂಕಣ್ಣ ಮಹಾರಾಜರು ಶಿರೋಳದ ಬಸಪ್ಪಜ್ಜನವರು. ಮಂಟೂರಿನ ಈರಯ್ಯ ಸ್ವಾಮಿಗಳು .ರಬಕವಿಯ ಹನುಮಂತ ಗುರುಸ್ವಾಮಿಗಳು ಉಪಸ್ಥಿತರಿದ್ದರು. ಮಾಣಿಕ್ಯ ಶೆಟ್ಟಿ, ಕುಟುಂಬದ ಸಂಗಪ್ಪ ಹಾಗೂ ಗಿರೀಶ್ ಸಹೋದರರು ಪೂಜ್ಯರೆಲ್ಲರನ್ನು ಗೌರವಿಸಿದರು. ಉದ್ಯಮಿ ಸಂಗಮೇಶ ನಿರಾಣಿ ಶುಭ ಕೋರಿದರು. ಹಿರಿಯ ಅನುಭವಿಗಳಾದ ಶಿವಪ್ಪ ಪವಾಡ ಶೆಟ್ಟಿ. ಶರಣ ಶ್ರೀ ಶಂಕರ್ ಚಿಮ್ಮಡ. ಮಾತೋಶ್ರೀ ಬಂದವ್ವ ಸಿದ್ದರಾಮಪ್ಪ ಮಾಣಿಕ ಶೆಟ್ಟಿ .ಪಾರವ್ವ ಮಹದೇವ ಮರನೂರ ಉಪಸ್ಥಿತರಿದ್ದರು.
ಚಂದ್ರು ಪವಾಡ ಶೆಟ್ಟಿ ಸ್ವಾಗತಿಸಿ ಅಭಿನಂದಿಸಿದರು. ಸಾವಿರಾರು ಸಂಖ್ಯೆಯಲ್ಲಿ ಹಿರಿಯರು ತಾಯಂದಿರು ಯುವಕರು ಪಾಲ್ಗೊಂಡಿದ್ದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!