ಬಳ್ಳಾರಿ / ಕಂಪ್ಲಿ : ತಾಲೂಕಿನ ನೆಲ್ಲುಡಿ-ಕೊಟ್ಟಾಲ್ ಗ್ರಾಮದ ದೊಡ್ಡ ಕಾಲುವೆ ಹತ್ತಿರ ಮಿನಿ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಣೆ ಮಾಡುವುದನ್ನು ತಡೆದು, ಪೊಲೀಸರು 17.460 ಟನ್ ಅಕ್ಕಿ ವಶಕ್ಕೆ ಪಡಿಸಿಕೊಂಡಿದ್ದಾರೆ.
ಕಂಪ್ಲಿ ತಾಲೂಕು ವ್ಯಾಪ್ತಿಯ ಹಾಗೂ ಕುರುಗೋಡು ಪೊಲೀಸ್ ಠಾಣಾ ಸರಹದ್ದಿನಲ್ಲಿ ಆಂದ್ರಪ್ರದೇಶದ ಆದೋನಿಯ ಶೇಕ್ಷಾವಲಿ, ಮಾನ್ವಿಯ ವಿನೋದ್. ಹಾಲದಾಳ್ ವೀರಭದ್ರ ಇವರು ಆಕ್ರಮವಾಗಿ ಪಡಿತರ ಅಕ್ಕಿ ಸಾಗಣೆ ಮಾಡುತ್ತಿದ್ದರು ಎನ್ನಲಾಗಿದೆ.
ಕುರುಗೋಡು ಪೊಲೀಸ್ ಠಾಣೆಯ ಪಿ.ಎಸ್.ಐ ಸುಪ್ರೀತ್.ವಿ. ಸಿಬ್ಬಂದ ವಿಜಯಕುಮಾರ್, ರಾಜಶೇಖರ್, ಆಂಜಿನಿ ಹಾಗೂ ಫುಡ್ ಇನ್ಸ್ ಫೆಕ್ಟರ್ ಬಿ.ವಿರುಪಾಕ್ಷ ಗೌಡ ಇವರು ಜಂಟಿಯಾಗಿ ದಾಳಿ ಮಾಡಿದ್ದರು.
ರೂ 87300 ರೂ ಮೌಲ್ಯದ ಅಕ್ಕಿ ಜೊತೆ 3 ಜನ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ : ಜಿಲಾನಸಾಬ್ ಬಡಿಗೇರ್




















