ಕೊಪ್ಪಳ/ ಗಂಗಾವತಿ :ತಾಲ್ಲೂಕಿನ ಡಣಾಪುರ ಸರ್ಕಾರಿ ಪ್ರೌಢಶಾಲೆಗೆ ಎಸ್.ಎಸ್.ಎಲ್.ಸಿ 2025-26ನೇ ಸಾಲಿನ ಫಲಿತಾಂಶ ಶೇಕಡಾ 97.01 % ಬಂದಿದ್ದು ಡಿಸ್ಟಿಂಕ್ಷನ್ ನಲ್ಲಿ 5 ವಿದ್ಯಾರ್ಥಿಗಳು,
ಪ್ರಥಮ ಶ್ರೇಣಿಯಲ್ಲಿ 36 ಹಾಗೂ
ದ್ವಿತೀಯ ಶ್ರೇಣಿಯಲ್ಲಿ 13 ವಿದ್ಯಾರ್ಥಿಗಳು ಹಾಗೂ ಉಳಿದ 11 ವಿದ್ಯಾರ್ಥಿಗಳು ಸಾಧಾರಣ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
1) ರಾಮ ತಂದೆ ಹುಲಗಪ್ಪ 625 ಕ್ಕೆ 573 ಅಂಕಗಳನ್ನು ಪಡೆದು 91.68% ಶಾಲೆಗೆ ಪ್ರಥಮ ಸ್ಥಾನ.
2) ನೀಲಮ್ಮ ತಂದೆ ತಾಯಪ್ಪ 625 ಕ್ಕೆ 564 ಅಂಕಗಳನ್ನು ಪಡೆದು 90.24% ಫಲಿತಾಂಶದೊಂದಿಗೆ ಶಾಲೆಗೆ ದ್ವಿತೀಯ ಸ್ಥಾನ.
3) ಅಂಕಿತ ತಂದೆ ವೀರೇಶ 625 ಕ್ಕೆ 555 ಅಂಕಗಳನ್ನು ಪಡೆದು 88.80% ಫಲಿತಾಂಶದೊಂದಿಗೆ ಶಾಲೆಗೆ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ಅತ್ಯುತ್ತಮ ಶ್ರೇಣಿಯೊಂದಿಗೆ ತೇರ್ಗಡೆ ಹೊಂದಿ ಶಾಲೆಯ ಕೀರ್ತಿಗೆ ಪಾತ್ರರಾಗಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲೆಯ ಎಸ್.ಡಿ.ಎಮ್.ಸಿ ಸದಸ್ಯರು, ಪೋಷಕರು ಹಾಗೂ ಗ್ರಾಮದ ಹಿರಿಯರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.
ವರದಿ ಹನುಮೇಶ ಭಾವಿಕಟ್ಟಿ




















