ಎಲ್ಲರ ಕಣ್ಣೀರು ಬರಿಸುವ ಈರುಳ್ಳಿ ಮಾನಿನಿ
ಅರಳಿಹಳು ಕಮಲವಾಗಿ ಸುಲಲಿತೆಯ ಶಾಲಿನಿ
ಪಸರಿಸಿಹಳು ಕಾವ್ಯದಲಿ ತನ್ಮಯತೆಯ ವಾಹಿನಿ
ಬಿದಿರಿನ ಕಡ್ಡಿಗಳಲಿ ಬಳುಕಿಹಳು ಭಾಮಿನಿ
ಎನ್ನ ಸುಲಲಿತ ಚಿತ್ತಾರಕೆ ತಂದಿಹಳು ಶೋಭೆ
ಸೃಜನಶೀಲತೆಯಲಿ ಬೀರುತಿಹಳು ಸ್ವಪ್ರತಿಭೆ
ಆಸ್ವಾದಿಸಲು ಸೇರಿದೆ ಶುಭೋದಯದಿ ಸಭೆ
ಅಭಿನಂದಿಸೋಣ ಅಳು ಮರೆಸಿದ ಸುಂದರಿಗೆ
- ಲಲಿತಾ ಕೆ ಆಚಾರ್, ಬೆಂಗಳೂರು




















